ರಷ್ಯಾದಲ್ಲಿ ಮತ್ತೊಬ್ಬ ಸ್ಟಾಲಿನ್? ವಿಷ ಉಣಿಸಿ ವಿರೋಧಿಯನ್ನು ಕೊಂದೇ ಬಿಟ್ಟರಾ ಪುಟಿನ್‌?

ರಷ್ಯಾ & ಭಾರತ ಶತ ಶತಮಾನದಿಂದಲೂ ಸ್ನೇಹಿತರು. ರಾಜರ ಕಾಲದಲ್ಲಿ ಕೂಡ ರಷ್ಯಾ & ಭಾರತದ ನಡುವೆ ವ್ಯಾಪಾರ ಹಾಗೂ ವಹಿವಾಟು ನಡೆಯುತ್ತಿತ್ತು. ಇನ್ನು 1947ರಲ್ಲಿ ಭಾರತ ಪರಂಗಿ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ, ಹೊಸ ಯುಗ ಆರಂಭಿಸಿದ ನಂತರ ಎರಡೂ ದೇಶಗಳ ನಡುವೆ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ. ಹೀಗಿದ್ದಾಗಲೇ ರಷ್ಯಾದಲ್ಲಿ ಮತ್ತೊಬ್ಬ ಸ್ಟಾಲಿನ್ ಹುಟ್ಟಿಕೊಂಡಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ. ಹಾಗಾದರೆ ಯಾರು ಈ ಕ್ರೂರ ಸರ್ವಾಧಿಕಾರಿ ಸ್ಟಾಲಿನ್? ಬನ್ನಿ ತಿಳಿಯೋಣ.

ಅದು 1922ರ ಏಪ್ರಿಲ್ 3, ಜೋಸೆಫ್ ವಿಸ್ಸರಿಯೊನೊವಿಚ್ ಸ್ಟಾಲಿನ್ ಎಂಬ ಸರ್ವಾಧಿಕಾರಿಗೆ ರಷ್ಯಾದ ಅಧಿಕಾರ ಸಿಕ್ಕಿತ್ತು. ಹಂತ ಹಂತವಾಗಿ ರಷ್ಯಾ ರಾಜಕೀಯದಲ್ಲಿ ಬೆಳೆದು ಬಂದಿದ್ದ ಈ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್, ತನ್ನ ಕೈಗೆ ಸಂಪೂರ್ಣ ರಷ್ಯಾದ ಅಧಿಕಾರ ವಶಕ್ಕೆ ಪಡೆಯಲು ಕ್ರೂರ ನೀತಿಗಳನ್ನ ಅಳವಡಿಸಿಕೊಂಡಿದ್ದ. ಈತನ ಕೈಗೆ ಸಿಕ್ಕಿಬಿದ್ದ ವೈರಿ ಪಡೆಗೆ ಸಾವು ಬಿಟ್ಟರೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಹೀಗೆ ಲಕ್ಷಾಂತರ ಜನರನ್ನು ಹುಡುಕಿ, ಹುಡುಕಿ ಕೊಂದು ಹಾಕಿದ್ದ ಆರೋಪ ಸ್ಟಾಲಿನ್ ಮೇಲೆ ಇತ್ತು. ಈಗ ಇದೇ ರೀತಿ ಪುಟಿನ್‌ಗೆ ಸ್ಟಾಲಿನ್ ಪಟ್ಟ ಕೊಡುತ್ತಿವೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು.

America & Russia Started Heat Conversation Over Alexei Navalny Matter

2ನೇ ಮಹಾಯುದ್ಧದ ಸಂದರ್ಭದಲ್ಲಿ...

1878ರಲ್ಲಿ ಹುಟ್ಟಿದ್ದ ಜೋಸೆಫ್ ವಿಸ್ಸರಿಯೊನೊವಿಚ್ ಸ್ಟಾಲಿನ್ 2ನೇ ಮಹಾಯುದ್ಧದ ವೇಳೆ ಜರ್ಮನಿ ಸರ್ವಾಧಿಕಾರಿ ಹಿಟ್ಲರ್ ಹೆಡೆಮುರಿ ಕಟ್ಟಲು, ದೊಡ್ಡ ಪಾತ್ರ ವಹಿಸಿದ್ದರು. ಹೀಗಾಗಿ ಆಗಿನ ಕಾಲಘಟ್ಟದಲ್ಲಿ ಅಮೆರಿಕ ಸೇರಿದಂತೆ ಇಡೀ ಜಗತ್ತನ್ನು ಹಿಟ್ಲರ್ ದಾಳಿಯಿಂದ ಉಳಿಸಿದ ಕೀರ್ತಿ ಸ್ಟಾಲಿನ್‌ಗೆ ಸಲ್ಲುತ್ತದೆ. ಸ್ವತಃ ತನ್ನ ಮಗನನ್ನೇ ಯುದ್ಧಕ್ಕೆ ಕಳುಹಿಸಿ, ಆತನ ಸಾವು ಕಂಡು ಅಳದೆ ರಷ್ಯಾ ದೇಶಕ್ಕಾಗಿ ಸ್ಟಾಲಿನ್ ದೊಡ್ಡ ತ್ಯಾಗ ಮಾಡಿದ್ದರು.

ಇಷ್ಟೆಲ್ಲಾ ಮಾಡಿದ್ದರೂ ಮುಂದೆ ಸ್ಟಾಲಿನ್ ಕ್ರೂರ ಸರ್ವಾಧಿಕಾರಿ ಆಗಿ ಹೆಸರು ಕೆಡಿಸಿಕೊಂಡರು. ಆದರೆ ಇದೀಗ ಅಲೆಕ್ಸಿ ನವಲ್ನಿ ಅಂದ್ರೆ ರಷ್ಯಾದ ಹಾಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶತ್ರು ನವಲ್ನಿ ಸಾವಿನ ನಂತರ ಇದೇ ಪಾಶ್ಚಿಮಾತ್ಯ ದೇಶಗಳು, ವ್ಲಾದಿಮಿರ್ ಪುಟಿನ್ ಅವರನ್ನೂ ಜೋಸೆಫ್ ಸ್ಟಾಲಿನ್‌ಗೆ ಹೋಲಿಸುತ್ತಿವೆ. ಹೀಗಾಗಿ ರಷ್ಯಾ ಮತ್ತು ಅಮೆರಿಕದ ಸಂಬಂಧ ಈಗ ಮತ್ತಷ್ಟು ಹಾಳಾಗಿ ಹಳಸಿ ಹೋಗುತ್ತಿದೆ.

America & Russia Started Heat Conversation Over Alexei Navalny Matter

75 ವರ್ಷಗಳ ಭೀಕರ ದ್ವೇಷ

ರಷ್ಯಾ & ಅಮೆರಿಕ ಕಿತ್ತಾಟ ಶುರುವಾಗಿ 75 ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಹಿಗಿದ್ದರೂ ಈ ಎರಡೂ ದೇಶದ ಮಧ್ಯೆ ರಾಜಿ ನಡೆಯುತ್ತಿಲ್ಲ. ಹೀಗಾಗಿ ಎರಡೂ ದೇಶಗಳು ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಈ ಸಮಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಶತ್ರು, ಅಲೆಕ್ಸಿ ನವಲ್ನಿ ರಷ್ಯಾ ಜೈಲಿನಲ್ಲೇ ಜೀವವನ್ನ ಬಿಟ್ಟಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪುಟಿನ್ ವಿರುದ್ಧ ಕೆಂಡ ಕಾರಿದ್ದಾರೆ. ಅಲ್ಲದೆ ಹೀಗೆ ಅಮೆರಿಕ ಮತ್ತು ರಷ್ಯಾ ನಡುವಿನ ಮಾತಿನ ಯುದ್ಧ ಈಗ ಭಯ ಹುಟ್ಟಿಸುತ್ತಿದೆ.

ಏನಾಗುತ್ತಿದೆ ಭಾರತ ಮಿತ್ರ ರಷ್ಯಾದಲ್ಲಿ?

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಗಟ್ಟಿ ಎದೆಯಲ್ಲಿ ನಿಂತು ಹೋರಾಡಿದ್ದ, ಕೆಲವೇ ಕೆಲ ನಾಯಕರ ಪೈಕಿ ಅಲೆಕ್ಸಿ ನವಲ್ನಿ ಕೂಡ ಒಬ್ರು ಎಂಬುದು ಪಾಶ್ಚಿಮಾತ್ಯ ದೇಶಗಳ ಮಾತು. ಹೀಗಿದ್ದಾಗ, ಪುಟಿನ್ ಅವರ ಆಡಳಿತದ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಈಗ ಮೃತಪಟ್ಟಿದ್ದು ಸಂಚಲನ ಸೃಷ್ಟಿಸಿದೆ.

47 ವರ್ಷ ವಯಸ್ಸಿನ, ರಷ್ಯಾ ವಿರೋಧ ಪಕ್ಷದ ನಾಯಕ ನವಲ್ನಿ ಜೈಲಿನಲ್ಲೇ ಜೀವ ಬಿಟ್ಟಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗ ರಷ್ಯಾದ ಮಾಜಿ ಅಧ್ಯಕ್ಷ & ಇಡೀ ರಷ್ಯಾ ಒಕ್ಕೂಟವನ್ನೇ, ಅಂದರೆ ಆಗಿನ ಸೋವಿಯತ್ ರಷ್ಯಾ ಒಕ್ಕೂಟವನ್ನ ಒಗ್ಗಟ್ಟಿನಿಂದ ಆಳಿದ್ದ ಸರ್ವಾಧಿಕಾರಿ ಸ್ಟಾಲಿನ್ ವಿಚಾರವನ್ನ ಮತ್ತೆ ಮೆಲುಕು ಹಾಕುತ್ತಿವೆ ಪಾಶ್ಚಿಮಾತ್ಯ ದೇಶಗಳು. ಇದು ಎಲ್ಲೆಲ್ಲೂ ದೊಡ್ಡ ಸದ್ದು ಮಾಡುತ್ತಿದ್ದು, ಭಾರಿ ಚರ್ಚೆಗೂ ವೇದಿಕೆ ಒದಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+