H-1B ವೀಸಾ ಸೇರಿದಂತೆ ವಲಸೆ ಶುಲ್ಕಗಳಲ್ಲಿ ಭಾರಿ ಹೆಚ್ಚಳಕ್ಕೆ ಅಮೆರಿಕಾ ಪ್ರಸ್ತಾಪ

ನವದೆಹಲಿ, ಜ. 05: ಅಮೆರಿಕಾದ ಕನಸು ಕಾಣುವವರಿಗೆ ಅದು ಇನ್ನು ಮುಂದೆ ದುಬಾರಿಯಾಗಬಹುದು. ಅಮೆರಿಕಾದ ಬಿಡೆನ್ ಆಡಳಿತವು ವಲಸೆ ಶುಲ್ಕದಲ್ಲಿ ಭಾರಿ ಹೆಚ್ಚಳವನ್ನು ಪ್ರಸ್ತಾಪಿಸಿದೆ. ಈ ವಲಸೆ ಶುಲ್ಕಗಳಲ್ಲಿ ನುರಿತ ವಿದೇಶಿ ಉದ್ಯೋಗಿಗಳಿಗಾಗಿ ಹೆಚ್ಚು ಬೇಡಿಕೆಯಿರುವ ಎಚ್‌ಒನ್ ಬಿ ವೀಸಾಗಳು ಸೇರಿವೆ.

ಅಮೆರಿಕಾ ಪೌರತ್ವ ಮತ್ತು ವಲಸೆ ಸೇವೆಗಳು (USCIS) ಪ್ರಕಟಿಸಿರುವ ಪ್ರಸ್ತಾವಿತ ನಿಯಮದ ಅಡಿಯಲ್ಲಿ, ಎಚ್‌ಒನ್ ಬಿ ವೀಸಾದ ಅರ್ಜಿಯು 460 ರಿಂದ 780 ಡಾಲರಿಗೆ ಮತ್ತು ಎಲ್‌ಒನ್ ವೀಸಾ 460 ರಿಂದ 1,385 ಡಾಲರ್‌ಗೆ ಹೆಚ್ಚಾಗುತ್ತದೆ. ಇದರ ಜೊತೆಗೆ ಒ ಒನ್ ವೀಸಾಗಳ ಅರ್ಜಿ ಶುಲ್ಕವನ್ನು 460 ರಿಂದ 1,055 ಡಾಲರಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಎಚ್‌ಒನ್ ಬಿ ವೀಸಾವು ವಲಸೆಯಲ್ಲದ ವೀಸಾ ಆಗಿದ್ದು, ಇದು ಅಮೆರಿಕಾ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಈ ವೀಸಾವನ್ನೇ ಅವಲಂಬಿಸಿವೆ.

America proposes massive hike in immigration fees

ಪ್ರಸ್ತಾವಿತ ನಿಯಮವು 60 ದಿನಗಳ ಸಾರ್ವಜನಿಕ ವಿರೋಧದಿಂದ ನಿಂತಿತ್ತು. ಈ ಅದನ್ನು ಮತ್ತೆ ಜಾರಿಗೊಳಿಸುವ ನಿರೀಕ್ಷೆಯಿದೆ. ಪ್ರಸ್ತಾವಿತ ನಿಯಮದ ಅಡಿಯಲ್ಲಿ, H-2B ಅರ್ಜಿಗಳ ಶುಲ್ಕವನ್ನು (ಋತುಮಾನ, ಕೃಷಿಯೇತರ ಕೆಲಸಗಾರರಿಗೆ) 460 ರಿಂದ 1,080 ಡಾಲರಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ ಹೆಚ್ಚಿನ ಸಂದರ್ಭಗಳಲ್ಲಿನ ಹೆಚ್ಚುವರಿ ಬಯೋಮೆಟ್ರಿಕ್ ಸೇವೆಗಳ ಶುಲ್ಕವನ್ನು ತೆಗೆದುಹಾಕಿದೆ.

"ಈ ವೀಸಾ ವರ್ಗಗಳ ಮೇಲಿನ ಶುಲ್ಕ ಹೆಚ್ಚಳವು ಹೆಚ್ಚಿನ ಕಾರ್ಮಿಕರು ಯುನೈಟೆಡ್ ಸ್ಟೇಟ್ಸ್‌ಗೆ ಕಾನೂನುಬದ್ಧವಾಗಿ ಪ್ರವೇಶಿಸುವ ಅಮೆರಿಕಾದ ನೀತಿ ನಿರೂಪಕರ ಬಯಕೆಯ ವಿರುದ್ಧ ಕೆಲಸ ಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ" ಎಂದು ಫೋರ್ಬ್ಸ್ ಸುದ್ದಿ ಮಾಡಿದೆ.

ಅಮೆರಿಕಾ ಪೌರತ್ವ ಮತ್ತು ವಲಸೆ ಸೇವೆಗಳು (USCIS) ಸಾಮಾನ್ಯವಾಗಿ ದ್ವೈವಾರ್ಷಿಕವಾಗಿ ಶುಲ್ಕದ ನಿಯಮವನ್ನು ಪ್ರಕಟಿಸುತ್ತದೆ. ಮಾನವೀಯ ಕಾರ್ಯಕ್ರಮಗಳ ವಿಸ್ತರಣೆ, ಫೆಡರಲ್ ಕಡ್ಡಾಯ ವೇತನ ಹೆಚ್ಚಳ, ಹೆಚ್ಚುವರಿ ಸಿಬ್ಬಂದಿ ಅಗತ್ಯತೆಗಳು ಮತ್ತು ಇತರ ಅಗತ್ಯ ಹೂಡಿಕೆಗಳನ್ನು ಪರಿಗಣಿಸಲು ಈ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

America proposes massive hike in immigration fees

2020 ರಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಆದಾಯದಲ್ಲಿ ಶೇಕಡಾ 40 ರಷ್ಟು ಇಳಿಕೆ ಕಂಡುಬಂದಿದೆ ಎಂದು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+