ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ, ಮೊದಲ ದಿನವೇ 10 ಆದೇಶಗಳಿಗೆ ಸಹಿ

ವಾಷಿಂಗ್ಟನ್, ಜನವರಿ 19: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ವಾಷಿಂಗ್ಟನ್‌ಗೆ ಆಗಮಿಸಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಅವರು ಜನವರಿ 20ರಂದು ಸ್ಥಳೀಯ ಕಾಲಮಾನ 12.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗುತ್ತಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ವಿವಿಧ ದೇಶಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭದಲ್ಲಿ ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಭಾಗಿಯಾಗಲಿದ್ದಾರೆ.

ಅಮೆರಿಕ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಡೊನಾಲ್ಡ್‌ ಟ್ರಂಪ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಮಾಣ ಸ್ವೀಕರ ಮಾಡಿದ ಬಳಿಕ ಹೊಸ ಅಧ್ಯಕ್ಷರು ಉದ್ಘಾಟನಾ ಭಾಷಣವನ್ನು ಮಾಡುತ್ತಾರೆ. ಟ್ರಂಪ್ ಮೊದಲ ದಿನವೇ 10 ಮಹತ್ವದ ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.

America President Donald Trump May Take 10 Major Decisions

10 ಆದೇಶಗಳಿಗೆ ಸಹಿ: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಸ್ವತಃ ಉದ್ಯಮಿಯಾಗಿರುವ, ಉದ್ಯಮಿಗಳ ಪರವಾಗಿರುವ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನಕ್ಕೆ ವಿವಿಧ ಉದ್ಯಮಿಗಳು ಸಾಕ್ಷಿಯಾಗಲಿದ್ದಾರೆ. ಮೊದಲ ದಿನವೇ ಉದ್ಯಮಕ್ಕೆ ಅನುಕೂಲವಾಗುವ 10 ಮಹತ್ವದ ಆದೇಶಗಳಿಗೆ ಸಹಿ ಮಾಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಅಕ್ರಮ ವಲಸಿಗರ ಗಡಿಪಾರು, ಜನ್ಮತಃ ನಾಗರಿಕ ಹಕ್ಕಿನ ಅಂತ್ಯ, ಕ್ಯಾಪಿಟಲ್ ಹಿಲ್ ದೊಂಬಿಕೋರರಿಗೆ ಕ್ಷಮೆ ಮುಂತಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು. ಅಧಿಕಾರವಹಿಸಿಕೊಳ್ಳುತ್ತಿದ್ದಂತೆಯೇ ಪ್ರಮುಖ ಘೋಷಣೆಗಳನ್ನು ಆದೇಶವನ್ನಾಗಿ ಮಾಡಲು ಟ್ರಂಪ್ ಸಹಿ ಹಾಕಲಿದ್ದಾರೆ.

ಜೋ ಬೈಡನ್ ಆಡಳಿತ ಹಲವು ನೀತಿಗಳನ್ನು ಡೊನಾಲ್ಡ್ ಟ್ರಂಪ್ ಟೀಕಿಸುತ್ತಿದ್ದರು. ಆದ್ದರಿಂದ ಅವುಗಳನ್ನು ಬದಲಾವಣೆ ಮಾಡಲು ಟ್ರಂಪ್ ಮೊದಲ ದಿನವೇ ಆದೇಶವನ್ನು ಹೊರಡಿಸುವ ಸಾಧ್ಯತೆ ಇದೆ. ಪ್ರಮಾಣ ವಚನ ಸಮಾರಂಭದ ಬಳಿಕ ಟ್ರಂಪ್ ಜಪಾನ್, ಭಾರತ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ಜೊತೆ ಮಹತ್ವದ ಸಭೆಯನ್ನು ಸಹ ನಡೆಸಲಿದ್ದಾರೆ.

ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಾಗ ಒಬಾಮಾಕೇರ್‌ ಅನ್ನು ರದ್ದುಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದರು. ಒಂದು ಪ್ರಮುಖ ತೀರ್ಮಾನವನ್ನು ಮಾತ್ರ ಕೈಗೊಂಡಿದ್ದರು. ಆದರೆ ಈ ಬಾರಿ ಅಮೆರಿಕದ ಜನರಿಗೆ ಹಲವು ಭರವಸೆಗಳನ್ನು ನೀಡಿರುವ ಟ್ರಂಪ್, 10 ಆದೇಶಗಳಿಗೆ ಸಹಿ ಹಾಕಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಹುಟ್ಟಿನಿಂದಲೇ ಅಮೆರಿಕ ಪೌರತ್ವ ಪಡೆಯುವ ಪ್ರಕ್ರಿಯೆ ರದ್ದುಗೊಳಿಸುವುದಾಗಿ ಟ್ರಂಪ್ ಪ್ರಚಾರದ ವೇಳೆ ಘೋಷಣೆ ಮಾಡಿದ್ದರು. ಅಮೆರಿಕದಲ್ಲಿ ಹುಟ್ಟಿದ ಯಾರೇ ಆದರೂ ಅವರಿಗೆ ಪೌರತ್ವ ನೀಡುವ ಕಾಯ್ದೆ ಸಂವಿಧಾನದ 14ನೇ ನಿಯಮದಲ್ಲಿದೆ, ಇದಕ್ಕೆ ತಿದ್ದುಪಡಿ ಮಾಡುವುದಾಗಿ ಟ್ರಂಪ್ ಪ್ರಚಾರದ ವೇಳೆ ಜನರಿಗೆ ಭರವಸೆ ಕೊಟ್ಟಿದ್ದರು.

ಜೋ ಬೈಡನ್ ಆಡಳಿತದ ಮುಕ್ತ ಗಡಿ ನೀತಿ, ಮೇಡ್ ಇನ್ ಅಮೆರಿಕ ಆಟೋ ಮೊಬೈಲ್ ನೀತಿ ಸೇರಿದಂತೆ ವಿವಿಧ ನೀತಿಗಳನ್ನು ಡೊನಾಲ್ಡ್ ಟ್ರಂಪ್ ಬದಲಾವಣೆ ಮಾಡಲಿದ್ದಾರೆ. ಆದ್ದರಿಂದ ವಿಶ್ವದ ವಿವಿಧ ರಾಷ್ಟ್ರಗಳು ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸಮಾರಂಭವನ್ನು ಕುತೂಹಲದಿಂದ ಎದುರು ನೋಡುತ್ತಿವೆ.

ಅಮೆರಿಕದ ವಲಸೆ ನೀತಿಯಲ್ಲಿಯೂ ಹಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಯಾವುದೇ ದಾಖಲೆಗಳು ಇಲ್ಲದೇ ವಲಸೆ ಬಂದವರನ್ನು ಸಾಮೂಹಿಕವಾಗಿ ಗಡಿಪಾರು ಮಾಡುವ ಕುರಿತು ಟ್ರಂಪ್ ಆಸಕ್ತಿ ಹೊಂದಿದ್ದಾರೆ. ಕ್ರಿಮಿನಲ್‌ಗಳನ್ನು ದೇಶದಿಂದಿ ಓಡಿಸಲು ಸಾಮೂಹಿಕ ಗಡಿಪಾರು ಕೈಗೊಳ್ಳುತ್ತೇನೆ ಎಂದು ಟ್ರಂಪ್ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+