ಹೇಯ್.. ನಾವು ಹೇಳಿದ್ದು ಕೇಳ್ರೀ ಮೊದಲು.. ಅಂತಿದೆ ಅಮೆರಿಕ!

ಅಮೆರಿಕ & ಇಸ್ರೇಲ್ ನಡುವೆ ಇರುವ ಸ್ನೇಹ ಶೀಘ್ರದಲ್ಲೇ ಹೊಗೆ ಹಾಕಿಸಿಕೊಳ್ಳುವ ಲಕ್ಷಣಗಳು ಈಗ ಗೋಚರಿಸುತ್ತಿವೆ. ಯಾಕಂದ್ರೆ ಇಸ್ರೇಲ್ ಮಾಡಿಕೊಳ್ಳುತ್ತಿರುವ ಒಂದೊಂದು ಎಡವಟ್ಟು ಕೂಡ ಅಮೆರಿಕದ ಬುಡಕ್ಕೆ ಬೆಂಕಿ ಇಡುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಸಮಯ ನೋಡಿಕೊಂಡು ಅಲರ್ಟ್ ಆಗಿರುವ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕ ಈಗ ಖಡಕ್ ಎಚ್ಚರಿಕೆ ನೀಡಿದೆ. ಇಸ್ರೇಲ್‌ಗೆ ಈಗ ಗಾಜಾ ವಿಚಾರದಲ್ಲಿ ಅಮೆರಿಕ ನೀಡಿದ ಆದೇಶ ಎಂತಹದ್ದು? ಅಮೆರಿಕ & ಇಸ್ರೇಲ್ ಸಂಬಂಧ ನಿಧಾನವಾಗಿ ಹಳಸುತ್ತಿದೆಯಾ?

ಮಧ್ಯಪ್ರಾಚ್ಯ ಇದೀಗ ಒಡೆದ ಮನೆಯಾಗಿ ಹೋಗಿದ್ದು, ಯುದ್ಧಗಳು ನೆಮ್ಮದಿಯನ್ನೇ ಹಾಳು ಮಾಡಿವೆ. ಅಲ್ಲದೆ ಇಸ್ರೇಲ್ & ಇತರ ದೇಶಗಳ ನಡುವೆ ದೊಡ್ಡ ಕಾದಾಟ ನಡೆಯುತ್ತಿರುವ ಕಾರಣಕ್ಕೆ ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಯುದ್ಧ ನಿಲ್ಲಿಸಬೇಕು & ಮಧ್ಯಪ್ರಾಚ್ಯ ಶಾಂತವಾಗಬೇಕು ಎಂಬ ಒತ್ತಾಸೆ ಜಗತ್ತಿನ ಬಹುತೇಕ ದೇಶಗಳಿಗೆ ಇದೆ. ಹೀಗೆ ಇದ್ದಾಗಲೂ ಇಸ್ರೇಲ್ ಮಾತ್ರ ಯುದ್ಧ ನಿಲ್ಲಿಸಲು ರೆಡಿ ಇಲ್ಲ. ಹಾಗೇ ಬಂಡುಕೋರರು ಕೂಡ ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಿದ್ಧವಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ದೊಡ್ಡ ಕಾದಾಟ ನಡೆಯುವಾಗಲೇ ಅಮೆರಿಕ ಈಗ ಖಡಕ್ ಮಾತೊಂದನ್ನ ಹೇಳಿದೆ!

America Ordered This To The Israel Over Gaza Issue

ವಾರ್ನಿಂಗ್ ಕೊಟ್ಟ ಜಗತ್ತಿನ ದೊಡ್ಡಣ್ಣ!

ಮನುಷ್ಯರಿಗೆ ನೆಮ್ಮದಿಯಾಗಿ ಬದುಕಲು ಬರುವುದಿಲ್ಲ ಎಂಬುದು ಪದೇ ಪದೇ ಪ್ರೂವ್ ಆಗ್ತಾ ಇದೆ, ಅದರಲ್ಲೂ ಈ ಹಿಂದೆ ಮಾಡಿರುವ ತಪ್ಪಿನಿಂದ ಮನುಷ್ಯರು ಇನ್ನೂ ಬುದ್ಧಿ ಕಲಿತಿಲ್ಲ. ಗಾಜಾ ಪಟ್ಟಿ ವಿರುದ್ಧ ಇಸ್ರೇಲ್ ಯುದ್ಧ ಸಾರಿ ಬರೋಬ್ಬರಿ 1 ವರ್ಷ ಕಳೆದು ಹೋಗಿದ್ದು, ಈ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ಘೋರವಾಗುತ್ತಿದೆ. ಅದರಲ್ಲೂ ಗಾಜಾ ಪಟ್ಟಿಯ ನಿವಾಸಿಗಳು ತುತ್ತು ಅನ್ನಕ್ಕೂ ಪರದಾಡುತ್ತಾ & ಔಷಧಗಳು ಕೂಡ ಸಿಗದೇ ನರಳುತ್ತಿದ್ದಾರೆ.

ಇದಕ್ಕೆ ಇಸ್ರೇಲ್ ಕಾರಣ ಎಂಬ ಆರೋಪ ಮಾಡಲಾಗುತ್ತಿದ್ದು, ಸರಿಯಾಗಿ ಮಾನವೀಯ ನೆರವು ಸಿಗುತ್ತಿಲ್ಲ ಎಂಬ ಆಕ್ರೋಶ ಮೊಳಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ರಿಯಾಕ್ಷನ್ ಕೊಟ್ಟಿರುವ ಅಮೆರಿಕ, ಮುಂದಿನ 30 ದಿನದಲ್ಲಿ ಗಾಜಾಗೆ ಮಾನವೀಯ ನೆರವಿನ ಪ್ರಮಾಣ ಹೆಚ್ಚು ಮಾಡಿ ಎಂದು ಇಸ್ರೇಲ್ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ. ಅಕಸ್ಮಾತ್ ಅಮೆರಿಕದ ಈ ಮಾತನ್ನ ಕೇಳದೇ ಇದ್ದರೆ, ಅಮೆರಿಕದಿಂದ ಸಿಗುತ್ತಿರುವ ಶಸ್ತ್ರಾಸ್ತ್ರ ಕಟ್ ಆಗಲಿದೆ ಎಂದು ಅಮೆರಿಕ ಈ ಮೂಲಕ ಎಚ್ಚರಿಕೆ ನೀಡಿದೆ.

ಅಮೆರಿಕದ ಎಚ್ಚರಿಕೆಯಲ್ಲಿ ಏನಿದೆ?

ದಕ್ಷಿಣ ಗಾಜಾದಲ್ಲಿ ಯುದ್ಧದ ಕಾರಣಕ್ಕಾಗಿ, ಹಿಂಸಾಚಾರ ಹೆಚ್ಚಾಗಿರುವ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕ ಈ ವಿಚಾರದಲ್ಲಿ ಕಠಿಣ ನಿಲುವು ತಳೆದಿದ್ದು, ಸೂಕ್ತ ಕ್ರಮಕ್ಕೆ ಇಸ್ರೇಲ್ ಎದುರು ಆಗ್ರಹಿಸಿದೆ. ಹೀಗಾಗಿ ನಮ್ಮ ಈ ಮಾತನ್ನು ಕೇಳದೇ ಇದ್ದರೆ ಪರಿಸ್ಥಿತಿ ಸರಿಯಾಗಿ ಇರಲ್ಲ ಎಂದು ಇಸ್ರೇಲ್‌ಗೆ ಪತ್ರ ಬರೆದಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಎಚ್ಚರಿಸಿದ್ದಾರೆ. ಹಾಗೇ ಅಮೆರಿಕದ ಭದ್ರತಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್‌ ಕೂಡ ಇಸ್ರೇಲ್‌ಗೆ ಈ ಬಗ್ಗೆ ವಾರ್ನಿಂಗ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+