Donald Trump: ಚೀನಾ ಎದುರು ಸೋತು ಹೋಯ್ತಾ ಅಮೆರಿಕ? ತೆರಿಗೆ ಯುದ್ಧಕ್ಕೆ ಬ್ರೇಕ್...

ಅಮೆರಿಕ ಜಗತ್ತಿನ ದೊಡ್ಡಣ್ಣ ಎಂಬ ಸ್ಥಾನ ಉಳಿಸಿಕೊಳ್ಳಲು ಇದೀಗ ಕಂಟಕ ಎದುರಾಗಿದೆ. ಯಾಕಂದ್ರೆ ಒಂದು ಕಡೆ ಅಮೆರಿಕ ಬಳಿ ಇರುವ ಸಂಪತ್ತು ನಾಶವಾಗಿ ಹೋಗುತ್ತಿದ್ದು, ಇದೇ ವೇಳೆ ಇನ್ನೊಂದು ಕಡೆ ಅಮೆರಿಕದ ಶತ್ರು ದೇಶಗಳು ದೊಡ್ಡಣ್ಣನ ಮೀರಿಸಿ ಅಭಿವೃದ್ಧಿಯನ್ನ ಹೊಂದುತ್ತಿವೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ ನೇರ ತೆರಿಗೆ ಯುದ್ಧಕ್ಕೆ ಮುಂದಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ದೊಡ್ಡ ಹಿನ್ನಡೆ ಅನುಭವಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಚೀನಾ ಜೊತೆ ಮಹತ್ವದ ಮೀಟಿಂಗ್ ಮಾಡಲು ಅಮೆರಿಕ ಸಿದ್ಧತೆ ಮಾಡಿಕೊಳ್ತಾ?

ಶ್ರೀಮಂತ ದೇಶ, ಹಾಗೇ & ಹೀಗೆ ಅಂತೆಲ್ಲಾ ಬಿಲ್ಡಪ್ ಕೊಡುವ ಅಮೆರಿಕ ಹೆಸರಿಗೆ ಮಾತ್ರ ಶ್ರೀಮಂತ ದೇಶ. ಆದರೆ ದೊಡ್ಡ ಸಾಲಗಾರನಾಗಿ ನರಳುತ್ತಿದೆ ಇದೇ ಅಮೆರಿಕ. ಹೀಗಾಗಿದ್ದಾಗ ಚೀನಾ ಮೂಲಕ ಬರುವ ವಸ್ತುಗಳು ಇಲ್ಲದೆ ಅಮೆರಿಕ ಉಸಿರಾಡಲು ಕೂಡ ಸಾಧ್ಯವೇ ಇಲ್ಲ ಎನ್ನಬಹುದು. ಪರಿಸ್ಥಿತಿ ಇಷ್ಟು ಕಠಿಣವಾಗಿ ಇದ್ದರೂ, ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡುತ್ತಿದೆ ಅಮೆರಿಕ ಎಂಬ ಆರೋಪ ಇದೆ. ತೆರಿಗೆ ಹೇರಿಕೆ ವಿಚಾರ ಮುಂದೆ ಇಟ್ಟುಕೊಂಡು ಡೊನಾಲ್ಡ್ ಟ್ರಂಪ್ ಮಾಡಿರುವ ಎಡವಟ್ಟು ಸ್ವತಃ ಅಮೆರಿಕದಲ್ಲಿ ತಲ್ಲಣ ಎಬ್ಬಿಸಿದೆ.

America May Keep An Important Meeting With China Very Soon

ಚೀನಾ ಎದುರು ಸೋತು ಹೋಯ್ತಾ ಅಮೆರಿಕ?

ಇಡೀ ಜಗತ್ತಿನಲ್ಲಿ ಅತಿಹೆಚ್ಚು ರಫ್ತು ಮಾಡುವ ದೇಶ ಎಂದರೆ ಚೀನಾ. ಕಡಿಮೆ ದುಡ್ಡಿನಲ್ಲೇ ಚೀನಾ ಉತ್ತಮ ಗುಣಮಟ್ಟದ ವಸ್ತುಗಳನ್ನು ರಫ್ತು ಮಾಡುತ್ತದೆ, ಎಂಬ ಖ್ಯಾತಿ ಪಡೆದಿದೆ. ಹೀಗಾಗಿ ಚೀನಾ ಮೂಲಕ ಬರುವ ವಸ್ತುಗಳೇ ಅಮೆರಿಕಗೆ ಆಧಾರ. ಅದರಲ್ಲೂ ಲಕ್ಷಾಂತರ ಕೈಗಾರಿಕೆಗಳಿಗೆ ಚೀನಾ ವಸ್ತುಗಳು ಇಲ್ಲದೆ ಉದ್ಯಮ ನಡೆಸಲು ಆಗುವುದಿಲ್ಲ ಎನ್ನಬಹುದು.

ಇಷ್ಟಾದರೂ ಅಮೆರಿಕ ಮಾತ್ರ ತೆರಿಗೆ ವಾರ್ ನಡೆಸುತ್ತಿದೆ. ಇದರಿಂದ ಸ್ವತಃ ಅಮೆರಿಕದಲ್ಲೇ ದೊಡ್ಡ ಸಮಸ್ಯೆ ಎದುರಾಗಿದೆ. ಹೀಗಾಗಿ, ಚೀನಾ ಜೊತೆಗೆ ರಾಜಿ ಮಾಡಿಕೊಳ್ಳಲು ಅಮೆರಿಕ ಸಜ್ಜಾಗಿದೆ ಎಂಬ ಸುದ್ದಿ ಹಬ್ಬಿದೆ. ಸ್ವತಃ ಅಮೆರಿಕದಲ್ಲಿನ ಜನರು ಕೂಡ ತಮ್ಮ ದೇಶದ ಈ ಕ್ರಮಕ್ಕೆ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಚೀನಾ ಕೂಡ ಆವಾಜ್ ಹಾಕಿತ್ತು!

ಅಂದಹಾಗೆ ಅಮೆರಿಕ ಎಷ್ಟೇ ಅಡ್ಡಿ ಮಾಡಿದರೂ, ತೆರಿಗೆ ಹೇರಿಕೆ ವಿಚಾರದಲ್ಲಿ ಏನೇನೋ ಬೆದರಿಕೆ ಹಾಕಿದರೂ ಚೀನಾ ಮಾತ್ರ ತಗ್ಗಿಲ್ಲ. ಅಲ್ಲದೆ ನಾನು ಈ ವಿಚಾರದಲ್ಲಿ ಒಪ್ಪಂದದ ಮೊರೆ ಹೋಗುವುದಿಲ್ಲ, ಹೋರಾಟ ಮಾಡುತ್ತೇವೆ ಎಂಬುದೇ ಚೀನಾ ಮಾತಾಗಿತ್ತು. ಇದೇ ಸಮಯದಲ್ಲಿ ಅಮೆರಿಕ ಥಂಡಾ ಆಗಿದ್ದು, ತೆರಿಗೆ ವಿಚಾರದಲ್ಲಿ ಚೀನಾ ಜೊತೆಗೆ ಮಹತ್ವದ ಚರ್ಚೆಗೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಆದರೆ ಇದಕ್ಕೆ ಚೀನಾ ಒಪ್ಪುತ್ತಾ? ಎನ್ನುವ ಬಗ್ಗೆ ತಿಳಿಯಲು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+