ಭಾರತ & ಮೋದಿ ವಿರುದ್ಧ ಕೆಂಡಕಾರಿದ ಅಮೆರಿಕ: ಕಾರಣ ಏನು?

ಭಾರತದ ವಿಚಾರದಲ್ಲಿ ಹುಳಿ ಹಿಂಡುವ ಕೆಲಸವನ್ನ ಅಮೆರಿಕ ಈಗ ಮತ್ತೆ ಮುಂದುವರಿಸಿದಂತೆ ಕಾಣುತ್ತಿದೆ. ಅದ್ರಲ್ಲೂ ಭಾರತ ಯಾವುದೇ ದೇಶದ ಜೊತೆಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮುಂದಾದ ಸಮಯದಲ್ಲಿ ಅಮೆರಿಕ ಇಂತಹದ್ದೇ ಕಿರಿಕ್ ಮಾಡುತ್ತದೆ. ಇದೀಗ, ಮತ್ತೊಮ್ಮೆ ಪ್ರಧಾನಿ ಮೋದಿ ಅವರ ನಡೆ ಸಹಿತ ಭಾರತದ ಬಗ್ಗೆ ಅಮೆರಿಕ ಏನ್ ಹೇಳಿದೆ ಗೊತ್ತಾ? ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

ಅಮೆರಿಕ ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದೇ ಕಾರಣಕ್ಕೆ ಅಮೆರಿಕ ಈಗ ತನ್ನ ದೇಶದಲ್ಲೇ ಅಸ್ಥಿರತೆ ಎದುರಿಸ್ತಿದೆ ಎಂಬುದು ಅಮೆರಿಕದ ವಿರೋಧಿ ದೇಶಗಳ ಮಾತು. ಈ ಮಾತಿಗೆ ತಕ್ಕಂತೆ ಅಮೆರಿಕ ಕೂಡ ನಡೆದುಕೊಳ್ಳುತ್ತಿದೆ. ಯಾಕಂದ್ರೆ ಅಮೆರಿಕದ ಸರ್ಕಾರ & ರಾಜಕೀಯ ನಾಯಕರು ಪದೇ ಪದೇ ಬೇರೆ ಬೇರೆ ದೇಶಗಳ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿ ಸರಿಯಾಗಿ ಅವಮಾನ ಎದುರಿಸುತ್ತಾರೆ. ಅದೇ ರೀತಿ, ಈಗ ಕೂಡ ಭಾರತದ ವಿಚಾರದಲ್ಲಿ ಮೂಗು ತೂರಿಸಲು ಬಂದ ಅಮೆರಿಕ ಸರಿಯಾದ ಅವಮಾನ ಎದುರಿಸುತ್ತಿದೆ.

America Is Angry Against India For This Reason

ಪ್ರಧಾನಿ ಮೋದಿ & ಪುಟಿನ್ ಮಾತುಕತೆ

ಅಂದಹಾಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸಕ್ಕೆ ತೆರಳಿದ್ದರು. ಈ ಸಮಯದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಪ್ರಧಾನಿ ಮೋದಿ ಅವರು ಹಲವು ಮಹತ್ವದ ಚರ್ಚೆಗಳನ್ನ ನಡೆಸಿ, ಮಹತ್ವದ ಒಪ್ಪಂದಗಳಿಗೆ ಅಂತಿಮ ರೂಪುರೇಷೆ ನೀಡಿದ್ದರು. ಹಾಗೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಷ್ಯಾಗೆ ಭಾರತದ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ಕೂಡ ಸಿಗುತ್ತಿದೆ.

ಹೀಗಿದ್ದಾಗ ಅಮೆರಿಕ ಇದೀಗ ಭಾರತದ ವಿರುದ್ಧ ರೊಚ್ಚಿಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡ ಸಮಯ ಮತ್ತು ಸಂದರ್ಭ ಅಮೆರಿಕವನ್ನ ನಿರಾಶೆಗೊಳಿಸಿದೆ ಅಂತಾ ಅಮೆರಿಕ ಹೇಳಿದೆ. ಈ ಕುರಿತಾಗ ಅಮೆರಿಕದ ವಿದೇಶಾಂಗ ಇಲಾಖೆ ಹಿರಿಯ ಅಧಿಕಾರಿ ಹೇಳಿಕೆ ನೀಡಿರುವುದು ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ಶುರುವಾಗಿದೆ.

ಭಾರತದ ಬಗ್ಗೆ ಅಮೆರಿಕ ಹೇಳಿದ್ದೇನು?

'ನ್ಯಾಟೊ' ಶೃಂಗಸಭೆ ಸಮಯದಲ್ಲೇ ಈ ಘಟನೆ ನಡೆದಿದೆ. ಹಾಗೇ ಭಾರತ & ರಷ್ಯಾ ಸಂಬಂಧ ಬಲವಾಗುತ್ತಿರುವ ಬಗ್ಗೆ ಕೂಡ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಈ ಭೇಟಿ ಬಗೆಗಿನ ಕಳವಳವನ್ನ ಭಾರತದ ಜೊತೆಯಲ್ಲಿ ಹಂಚಿಕೊಳ್ಳಲು ನಾವು ತುಂಬಾ ಶ್ರಮಿಸುತ್ತಿದ್ದೇವೆ ಎಂದು ಕೂಡ ಅಮೆರಿಕದ ಅಧಿಕಾರಿ ಹೇಳಿದ್ದು, ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಈ ರೀತಿ ಪದೇ ಪದೇ ಭಾರತದ ವಿಚಾರದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂಬ ಮಾತು ಕೂಡ ಈಗ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+