ಅಮೆರಿಕದಲ್ಲಿ ಮಗುವನ್ನು ಕೂಸುಮರಿ ಮಾಡುವಂತೆಯೂ ಇಲ್ಲ!
ವಾಷಿಂಗ್ಟನ್, ಆ. 01: ನಿಮ್ಮ ಮಕ್ಕಳನ್ನು ನೀವು ಆನೆ ಮರಿ, ಕೂಸು ಮರಿ ಮಾಡುವುದಿಲ್ಲವೇ? ಆಕಸ್ಮಿಕವಾಗಿ ಅವರೆನಾದರೂ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರೂ ಅಂದ್ರೆ ಏನು ಮಾಡಲಿಕ್ಕೆ ಸಾಧ್ಯ? ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುವುದೇ ಪರಿಹಾರ.
ಆದರೆ ಅಮೆರಿಕದಲ್ಲಿ ಮಕ್ಕಳನ್ನು ಆಟ ಆಡಿಸುವಾಗ ಆಕಸ್ಮಿಕವಾಗಿ ಕೈ ಜಾರಿದರೆ ನೀವು ಜೈಲು ಸೇರಬೇಕಾಗುತ್ತದೆ. ಹೌದು... ಭಾರತೀಯ ಮೂಲದ ತಂದೆಯೊಬ್ಬರನ್ನು ಮಗುವನ್ನು ಬೇಕೆಂತಲೇ ಕೆಳಕ್ಕೆ ಕೆಡವಿದ್ದೀರಿ ಎಂಬ ಆರೋಪದಲ್ಲಿ ಬಂಧನ ಮಾಡಲಾಗಿದೆ.[ಲಾಸ್ ಎಂಜಲೀಸ್ ನಲ್ಲಿ ನೂತನ ಶ್ರೀ ಕೃಷ್ಣ ಬೃಂದಾವನ]

ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮೆರಿಕದ ಪೊಲೀಸ್ ಅಧಿಕಾರಿಗಳು ಬೆವರ್ಟನ್ ಒರೆಗಾನ್ ನ ಭಾರತೀಯ ಮೂಲದ ತಂದೆಯೊಬ್ಬರನ್ನು ಬಂಧಿಸಿದ್ದು ಮಗುವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಮಗುವಿನ ತಾಯಿ ಪ್ರಕರಣಕ್ಕೆ ಸಂಬಂಧಿಸಿ ಯಾರ ಹೆಸರನ್ನು ಬಹಿರಂಗ ಮಾಡಬಾರದು ಎಂದು ವಿನಂತಿ ಮಾಡಿಕೊಂಡಿದ್ದಾರೆ. ಕಳೆದ ಫೆಬ್ರವರಿ 6 ರಂದು ಕಾಲಿಗೆ ಗಂಭೀರ ಗಾಯಮಾಡಿಕೊಂಡಿದ್ದ ಮೂರು ವರ್ಷದ ಮಗುವನ್ನು ತಾಯಿ ಆಸ್ಪತ್ರಗೆ ತೆಗೆದುಕೊಂಡು ಹೋಗಿದ್ದರು. ತಂದೆ ಜತೆ ಆಟವಾಡುತ್ತಿದ್ದಾಗ ಮಗು ಬಿದ್ದು ಪೆಟ್ಟು ಮಾಡಿಕೊಂಡಿದೆ ಎಂದು ಮಹಿಳೆ ತಿಳಿಸಿದ್ದರು.[ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನೃತ್ಯ ನೋಡಿದ್ದೀರಾ?]
ಆದರೆ ನಂತರ ಸ್ಥಳಕ್ಕೆ ಆಗಮಿಸಿದ ಅಮೆರಿಕದ ಆರೋಗ್ಯ ಮತ್ತು ಮಾನವ ಹಕ್ಕುಗಳ ಸಮಿತಿಯವರು ಮಗುವನ್ನು ತಂದೆ ಬೇಕಂತಲೇ ಮಗುವನ್ನು ಕೆಳಕ್ಕೆ ಹಾಕಿರುವ ಸಾಧ್ಯತೆ ಇದೆ ಎಂದು ಹೇಳಿ ಮಗುವಿನ ತಾಯಿಯ ಬಳಿ ಅನೇಕ ಕಾಗದ ಪತ್ರಗಳಿಗೆ ರುಜು ತೆಗೆದುಕೊಂಡಿದ್ದರು.
ತಂದೆ ಪ್ರಖ್ಯಾತ ಟೆಕ್ ಫಾರ್ಮ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು ಕೆಲಸದ ಒತ್ತಡದಲ್ಲಿ ಬಳಲುತ್ತಿದ್ದರು. ಈ ವೇಳೆ ಗಂಡ ಯಾವಾಗಲೋ ಮನೆಗೆ ಬರುವುದು, ಬಹಳಷ್ಟು ಸಮಯ ತನ್ನ ಸ್ನೇಹಿತರ ಮತ್ತು ಸಹೋದ್ಯೋಗಿಗಳ ಮನೆಯಲ್ಲೇ ಕಳೆಯುವುದು ಸಮಿತಿ ಗಮನಕ್ಕೆ ಬಂದಿದೆ.
ಅಲ್ಲದೇ ಸಮಿತಿಯ ಸಲಹೆ ಗಂಡ -ಹೆಂಡತಿ ಮನಸ್ಥಿತಿ ಸುಧಾರಣೆಗೆ ಇಬ್ಬರಿಗೂ ವಿವಿಧ ತರಬೇತಿ ನೀಡಲು ಮುಂದಾಗಿದೆ. ಇದೀಗ ತಂದೆಯನ್ನು ಬಂಧನ ಮಾಡಿದ್ದು ಮಗುವನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications