ಒಂದಲ್ಲ.. ಎರಡಲ್ಲ.. 1.67 ಲಕ್ಷ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳು ಇಸ್ರೇಲ್‌ಗೆ ಮಾರಾಟ!

ಇಸ್ರೇಲ್ ಇದೀಗ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದು, ಅಮೆರಿಕ ಇದೀಗ ಮತ್ತೊಮ್ಮೆ ತನ್ನ ಮಿತ್ರ ಇಸ್ರೇಲ್ ನೆರವಿಗೆ ಓಡೋಡಿ ಬಂದಿದೆ. ಹಮಾಸ್ ವಿರುದ್ಧ ಯುದ್ಧ ಸಾರಿ ಪ್ಯಾಲೆಸ್ತೀನ್ ನಗರ ಗಾಜಾ ಪಟ್ಟಿ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲ್ ಬಳಲಿ ಹೋಗಿದೆ. ಈ ಸಮಯದಲ್ಲೇ ಇಸ್ರೇಲ್ ವಿರುದ್ಧ ಇರಾನ್ & ಅಕ್ಕಪಕ್ಕದ ದೇಶಗಳು ಯುದ್ಧ ಸಾರಲು ಸರ್ವ ಸಿದ್ಧತೆ ಕೈಗೊಂಡಿರುವ ಸಮಯದಲ್ಲೇ ಅಮೆರಿಕ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಸುದ್ದಿ ಈಗ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದೆ!

ಇಸ್ರೇಲ್ ಈಗಾಗಲೇ ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿ ಬರೋಬ್ಬರಿ 10 ತಿಂಗಳು ಕಳೆದು ಹೋಗಿದೆ. 11ನೇ ತಿಂಗಳಿಗೆ ಎಂಟ್ರಿ ಕೊಟ್ಟಿರುವ ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಗಾಜಾ ಪಟ್ಟಿ ನಾಶವಾಗಿ ಹೋಗಿದ್ದರೆ, ಇಸ್ರೇಲ್ ಸೇನೆಯ ಬಳಿ ಇರುವ ಶಸ್ತ್ರಾಸ್ತ್ರಗಳು ಖಾಲಿ ಆಗುತ್ತಿವೆ. ಇಂತಹ ಸಮಯದಲ್ಲೇ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆಗೆ ಅಂತಾ ಇರಾನ್ ಹಾಗೂ ಇತರ ದೇಶಗಳು ಕಾಯುತ್ತಿವೆ ಇದೇ ಕಾರಣಕ್ಕೆ ಅಲರ್ಟ್ ಆಗಿರುವ ದೊಡ್ಡಣ್ಣ ಅಮೆರಿಕ ಮಹತ್ವದ ಘೋಷಣೆ ಮೊಳಗಿಸಿದೆ.

America Decided To Help Around 20 Billion Dollars Worth Of Weapons To The Israel

ಪರಮಾಣು ಜಲಾಂತರ್ಗಾಮಿ ರವಾನೆ!

ಇಸ್ರೇಲ್‌ಗೆ ಇದೀಗ ಯುದ್ಧ ವಿಮಾನಗಳು ಸೇರಿದಂತೆ ಒಂದಲ್ಲ.. ಎರಡಲ್ಲ.. ಬರೋಬ್ಬರಿ 20 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 1.67 ಲಕ್ಷ ಕೋಟಿ ರೂಪಾಯಿ ವೆಚ್ಚದ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ಅಮೆರಿಕ ಸರ್ಕಾರ ಇಸ್ರೇಲ್‌ನ ಬೆಂಬಲಕ್ಕೆ ಅಂತಾ ತನ್ನ ಬಳಿ ಇರುವ ನ್ಯೂಕ್ಲಿಯರ್ ಸಾಮರ್ಥ್ಯದ ಜಲಾಂತರ್ಗಾಮಿ ನೌಕೆ ಕಳುಹಿಸಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ನೌಕೆಯು ಬಿಡಾರ ಹೂಡಿದೆ ಎಂಬ ಮಾತುಗಳ ನಡುವೆ, ಇದೀಗ ಬೃಹತ್ ಮೊತ್ತದ ಶಸ್ತ್ರಾಸ್ತ್ರ ಮಾರಾಟ ಮಾಡಲು ಮುಂದಾಗಿದೆ ಅಮೆರಿಕ.

ಯಾವ ಯಾವ ಶಸ್ತ್ರಾಸ್ತ್ರ ಮಾರಾಟ?

ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನ ಮಾರಾಟ ಮಾಡಲು ಯುಎಸ್‌ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಅನುಮೋದನೆ ನೀಡಿದ್ದಾರಂತೆ. ಈ ಕುರಿತಾಗಿ ಇದೀಗ ಅಮೆರಿಕ ಸೇನೆಯ ಪ್ರಧಾನ ಕಚೇರಿಯಾದ ಪೆಂಟಗನ್ ಮಾಹಿತಿ ನೀಡಿದೆ. ಹೀಗೆ ಇಸ್ರೇಲ್‌ಗೆ ಮಾರಾಟ ಆಗಲಿರುವ ಅಸ್ತ್ರ ಯಾವುವು ಅಂದರೆ, F-15 ಜೆಟ್‌ಗಳು, ಯುದ್ಧ ಟ್ಯಾಂಕರ್‌, ಸೇನಾ ವಾಹನಗಳು ಸೇರಲಿವೆ.

ಇದರ ಜೊತೆ ಮತ್ತಷ್ಟು ಸಹಾಯ ಕೂಡ ಇಸ್ರೇಲ್ ದೇಶಕ್ಕೆ ಅಮೆರಿಕದ ಕಡೆಯಿಂದ ಸಿಗಲಿದೆ. ಹೀಗಾಗಿ ಅಮೆರಿಕದ ನಡೆ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಅಲ್ಲದೆ ಮಧ್ಯಪ್ರಾಚ್ಯ ಈಗ ಮತ್ತಷ್ಟು ಘೋರ ಹಿಂಸೆಗೆ ಸಜ್ಜಾದಂತೆ ಕಾಣುತ್ತಿದೆ. ಇನ್ನೊಂದು ಕಡೆ ಇರಾನ್ ಕೂಡ ತನ್ನ ಯುದ್ಧ ತಯಾರಿ ಮುಂದುವರಿಸಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+