3ನೇ ಮಹಾಯುದ್ಧ: ರಷ್ಯಾ ಬಗ್ಗೆ ಅಮೆರಿಕಗೆ ಎಷ್ಟು ಭಯ ಗೊತ್ತಾ?

ವಾಷಿಂಗ್ಟನ್: ರಷ್ಯಾ & ಉಕ್ರೇನ್ ಯುದ್ಧದಲ್ಲಿ ಸುಮ್ ಸುಮ್ನೆ ಕೈಹಾಕಿರುವ ಅಮೆರಿಕಗೆ ರಷ್ಯಾ ಕಂಡರೆ ಅದೆಷ್ಟು ಭಯ ಗೊತ್ತಾ? ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ನಡೆಸಿದೆ ಎನ್ನಲಾದ ದಾಳಿ ಬಗ್ಗೆ ಅಮೆರಿಕ ಹೇಳಿರುವ ಮಾತು ಏನು ಗೊತ್ತಾ? ಇದೆಲ್ಲಾ ಪುಟಿನ್ ಮತ್ತು ರಷ್ಯಾ ಕಂಡರೆ ಅಮೆರಿಕಗೆ ಎಷ್ಟು ಭಯ ಅನ್ನೋದನ್ನ ಮತ್ತೆ ಮತ್ತೆ ಕನ್ಫರ್ಮ್ ಮಾಡ್ತಿದೆ.

ಅಷ್ಟಕ್ಕೂ ಪಾಶ್ಚಿಮಾತ್ಯ ದೇಶಗಳ ಯುದ್ಧ ದಾಹ ಹಾಗೂ ರಷ್ಯಾದ ಸಿಟ್ಟು ಉಕ್ರೇನ್ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಮತ್ತೊಂದ್ಕಡೆ ಉಕ್ರೇನ್ ತನ್ನ ಸೇಡಿನ ಪರ್ವ ಮುಂದುವರಿಸಿದೆ. ಇಷ್ಟುದಿನ ರಷ್ಯಾದ ಗಡಿ ಭಾಗದ ಹಳ್ಳಿಗಳ ಮೇಲೆ ದಾಳಿ ನಡೆಸುತ್ತಿದ್ದ ಉಕ್ರೇನ್, ನಿನ್ನೆ ನೇರವಾಗಿ ರಷ್ಯಾ ರಾಜಧಾನಿಗೆ ನುಗ್ಗಿ ಬಾಂಬ್ ಹಾಕಿತ್ತು. ಈ ದಾಳಿ ನಡೆಸಿದ್ದೇ ಉಕ್ರೇನ್‌ನ ಸೇನೆ ಅನ್ನೋ ಆರೋಪ ಕೇಳಿಬಂದ ಬೆನ್ನಲ್ಲೇ, ದೊಡ್ಡಣ್ಣ ಅನಿಸಿಕೊಳ್ಳುವ ಅಮೆರಿಕ ಕೂಡ ನಡುಗಿ ಹೋಗಿದೆ. ಯಾವ ಕ್ಷಣದಲ್ಲಿ ರಷ್ಯಾ ತಮ್ಮ ಮೇಲೆ ದಾಳಿ ಮಾಡುತ್ತೋ ಅನ್ನೋ ಭಯದಲ್ಲಿ ಪರೋಕ್ಷವಾಗಿ ತಪ್ಪು ಒಪ್ಪಿಕೊಂಡಿದೆ ಅಮೆರಿಕ!

America clarifies about Russia capital city

ರಷ್ಯಾ ವಿರುದ್ಧ ದಾಳಿಗೆ ಬೆಂಬಲ ನೀಡಲ್ಲ!

ಹೌದು, ಅಮೆರಿಕ ಈಗ ನೀಡಿರುವ ಸ್ಪಷ್ಟನೆ ಪ್ರಕಾರ ರಷ್ಯಾ ವಿರುದ್ಧ ಉಕ್ರೇನ್ ನಡೆಸಿದೆ ಎಂದು ಆರೋಪಿಸಲಾಗುತ್ತಿರುವ ದಾಳಿಗೆ ತನ್ನ ಬೆಂಬಲ ಇಲ್ಲ ಎಂದಿದೆ ಅಮೆರಿಕ. ಯಾಕಂದ್ರೆ ಅಕಸ್ಮಾತ್ ಅಮೆರಿಕದ ಬೆಂಬಲದ ಮೂಲಕವೇ ಉಕ್ರೇನ್ ಈ ದಾಳಿ ನಡೆಸಿದೆ ಅನ್ನೋದು ಮುಂದೆ ಗೊತ್ತಾದರೆ, ರಷ್ಯಾ ಯಾವ ಕ್ಷಣದಲ್ಲಿ ಬೇಕಾದರೂ ಅಮೆರಿಕದ ಮೇಲೆ ಅಟ್ಯಾಕ್ ಮಾಡಬಹುದು. ಅಷ್ಟೇ ಅಲ್ಲ ರಷ್ಯಾ ಮನಸ್ಸು ಮಾಡಿದರೆ ಅಮೆರಿಕದ ರಾಜಧಾನಿಗೂ ನುಗ್ಗುವ ತಾಕತ್ ಹೊಂದಿದೆ. ಈ ಕಾರಣಕ್ಕೆ ಅಮೆರಿಕ ಸ್ಪಷ್ಟನೆ ನೀಡಿ, ಪರೋಕ್ಷವಾಗಿ ಉಕ್ರೇನ್ ಪರ ನಾವು ನಿಂತಿಲ್ಲ ಎಂದಿದೆ.

ಬೆನ್ನಿಗೆ ನಿಂತಿರುವ ಅಮೆರಿಕ ಸೇನೆ!

ರಷ್ಯಾ & ಉಕ್ರೇನ್ ವಾರ್ ಶುರುವಾಗಿ 461 ದಿನ ಉರುಳಿದೆ, ಆದರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಈ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ವಿನಾಶಕಾರಿ ಅಸ್ತ್ರವನ್ನು ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ಅದೇ ಉಡುಗೊರೆ ಈಗ ಉಕ್ರೇನ್ ಸಹಾಯಕ್ಕೆ ಬರುತ್ತಿದ್ದು, ರಷ್ಯಾ ಕೂಡ ಜಿದ್ದಿಗೆ ಬಿದ್ದು ಹೋರಾಡುತ್ತಿದೆ. ಇದೇ ಕಾಋಣಕ್ಕೆ ಅಮೆರಿಕ ಈಗ ಸ್ಪಷ್ಟನೆ ನೀಡಿದೆ.

America clarifies about Russia capital city

ಶಕ್ತಿಶಾಲಿ ಮಿಸೈಲ್ ನಾಶಕ ಗಿಫ್ಟ್!

ಅಮೆರಿಕ ಶತ್ರು ರಷ್ಯಾ ಬಗ್ಗುಬಡಿಯಲು ಎಲ್ಲ ಅಸ್ತ್ರ ಪ್ರಯೋಗಿಸುತ್ತಾ ಬಂದಿದೆ. ಅದ್ರಲ್ಲಿ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುವ ವಿಧಾನವೂ ಒಂದು. ಹೀಗೆ ಉಕ್ರೇನ್‌ಗೆ ಅಮೆರಿಕ ದಾನ ನೀಡಿದ ಗಿಫ್ಟ್ ಪೈಕಿ 'ಯುಎಸ್-ಮೇಡ್ ಪೇಟ್ರಿಯಾಟ್ ಮಿಸೈಲ್ ಡಿಫೆನ್ಸ್' (US-made Patriot missile defense) ಕೂಡ ಇದೆ. ಅಸ್ತ್ರದ ಮೂಲಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಬಹುದು & ಶತ್ರುಗಳ ಕ್ಷಿಪಣಿ ಹೊಡೆದು ಹಾಕುವುದು ಕೂಡ ಸುಲಭ. ಇದರ ಸಾಮರ್ಥ್ಯ ಇಡೀ ಜಗತ್ತಿಗೇ ಗೊತ್ತು, ಹೀಗಾಗಿ ಅಮೆರಿಕದ ಅಸ್ತ್ರ ಬಳಸಿ ರಷ್ಯಾಗೆ ಶಾಕ್ ಕೊಡ್ತಿದೆ ಉಕ್ರೇನ್. ಮತ್ತೊಂದ್ಕಡೆ ಅಮೆರಿಕ ತಮಗೂ ಉಕ್ರೇನ್ ದಾಳಿಗೂ ಸಂಬಂಧ ಇಲ್ಲ ಅಂತಿದೆ.

ಯುದ್ಧದಿಂದ ಅಮೆರಿಕಗೆ ಲಾಭ ಏನು?

ಅಮೆರಿಕ ಲಾಭ ಇಲ್ಲದೆ ಯಾವುದೇ ಕೆಲಸ ಮಾಡಲ್ಲ ಎನ್ನುವ ಮಾತಿದೆ. ಮಾತಿಗೆ ತಕ್ಕಂತೆ ಇದೀಗ ಉಕ್ರೇನ್‌ನ ಪರವಾಗಿ ನಿಂತಿದೆ ಅಮೆರಿಕ. ಉಕ್ರೇನ್ ಪರ ನಿಂತಿರುವ ಅಮೆರಿಕಗೆ ಇದರಿಂದ ಏನು ಲಾಭ ಎಂದರೆ, ರಷ್ಯಾ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಂಡು, ಯುರೋಪ್ ಮೇಲೆ ತಾನು ಹೊಂದಿರುವ ಹಿಡಿತವನ್ನ ಇಡೀ ಜಗತ್ತಿಗೆ ತೋರಿಸುವ ಪ್ರಯತ್ನ ಸಾಗಿದೆ ಎಂಬ ಆರೋಪವಿದೆ. ಆದರೆ ರಷ್ಯಾ ಅಷ್ಟು ಸುಲಭಕ್ಕೆ ತನ್ನ ಸೋಲು ಒಪ್ಪಿಕೊಳ್ಳದೆ ಹೋರಾಡುತ್ತಿರುವುದು ಅಮೆರಿಕದ ನಿದ್ದೆ ಕೆಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+