America Attack Iran: ಇರಾನ್ ಮೇಲೆ ಕ್ಷಿಪಣಿ ಮಳೆ ಸುರಿಸಿದ ಅಮೆರಿಕ: ನ್ಯೂಕ್ಲಿಯರ್ ಕೇಂದ್ರಗಳೇ ಗುರಿ! ತತ್ತರಿಸಿದ ಇರಾನ್...
America Attack Iran: ಇಸ್ರೇಲ್ - ಇರಾನ್ ಯುದ್ಧದ ನಡುವೆ ಅಮೆರಿಕ ದೇಶವು ಇದೀಗ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಸೂಪರ್ ಪವರ್ ನೇಷನ್ ಖ್ಯಾತಿಯ ಅಮೆರಿಕ ದೇಶವು ಇದೀಗ ಇಸ್ರೇಲ್‌ನ ಪರವಾಗಿ ಅಧಿಕೃತವಾಗಿ ಯುದ್ಧ ಭೂಮಿಗೆ ಇಳಿದಿದ್ದು. ಇರಾನ್‌ನ ನ್ಯೂಕ್ಲಿಯರ್ (ಅಣ್ವಸ್ತ್ರ) ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಇರಾನ್ ದೇಶವು ನ್ಯೂಕ್ಲಿಯರ್ ಬಾಂಬ್ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಇರಾನ್ ಆರೋಪಿಸಿ ದಾಳಿ ಮಾಡಿತ್ತು. ಈ ವಿಚಾರದಲ್ಲಿ ಡಬಲ್ ಗೇಮ್ ಆಡಿದ್ದ ಅಮೆರಿಕ - ಇರಾನ್ ಯಾವುದೇ ಕಾರಣಕ್ಕೂ ನ್ಯೂಕ್ಲಿಯರ್ ಬಾಂಬ್‌ಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಸಾಧ್ಯವಿಲ್ಲ ಎಂದೇ ಹೇಳಿತ್ತು. ಆದರೆ, ಯಾವಾಗ ಇಸ್ರೇಲ್ ದಾಳಿ ಮಾಡಿ ಫೋಟೋಗಳನ್ನು ರಿಲೀಸ್ ಮಾಡಲು ಪ್ರಾರಂಭಿಸಿತೋ ಆಗಲೇ ಅಮೆರಿಕ ಅಲರ್ಟ್ ಆಯಿತು.
ರಾಜಿ ಸಂಧಾನಕ್ಕೆ ಹೋಗುತ್ತಿಲ್ಲ ಇದು ಅದಕ್ಕಿಂತ ದೊಡ್ಡದು: ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಚೆಗೆ ಜಿ 7 ಶೃಂಗಸಭೆಯಿಂದ ಅರ್ಧಕ್ಕೆ ಹೊರನಡೆದಿದ್ದರು. ಡೊನಾಲ್ಡ್ ಟ್ರಂಪ್ ಅವರು ಈ ಸಭೆಯಿಂದ ಅರ್ಧಕ್ಕೆ ನಿರ್ಗಮಿಸಿದ್ದ ಕಾರಣ ವಿವಿಧ ದೇಶಗಳ ನಡುವೆ ಪ್ರಮುಖ ನಿರ್ಧಾರಗಳು ಹಾಗೂ ಒಪ್ಪಂದಗಳು ಸಾಧ್ಯವಾಗಿರಲಿಲ್ಲ. ಫ್ರಾನ್ಸ್ ಸಹ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮತ್ತು ಇಸ್ರೇಲ್‌ನ ನಡುವೆ ಕದನ ವಿರಾಮ ಘೋಷಣೆ ಮಾಡುವುದಕ್ಕೆ ಬೇಗ ಹೋಗಿದ್ದಾರೆ ಎಂದಿದ್ದರು.

ಫ್ರಾನ್ಸ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಡೊನಾಲ್ಡ್ ಟ್ರಂಪ್ ಅವರು, ಪ್ರಚಾರದ ಹುಚ್ಚಿಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿಜಕ್ಕೂ ನಾನು ವಾಷಿಂಗ್ಟನ್‌ಗೆ ವಾಪಸ್ ಹೋಗುತ್ತಿರುವುದು ಅದಕ್ಕಿಂತ ದೊಡ್ಡದು ಅಂತ ಹೇಳಿದ್ದರು. ಅದು ಏನು ಎನ್ನುವುದು ಈಗ ಬಹಿರಂಗವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೇಗ ಹೋಗಿದ್ದು ಇರಾನ್ ಮೇಲೆ ದಾಳಿ ಮಾಡುವುದಕ್ಕೆ ಅಂತ ಈಗ ಖಚಿತವಾಗಿದೆ.
ನ್ಯೂಕ್ಲಿಯರ್ ಕೇಂದ್ರಗಳೇ ಗುರಿ: ಇನ್ನು ಇಸ್ರೇಲ್ ಪರವಾಗಿ ರಣಾಂಗಣಕ್ಕೆ ಇಳಿದಿರುವ ಅಮೆರಿಕ ದೇಶವು ಇರಾನ್‌ನ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆಯಾದರೂ ಅದರ ಮುಖ್ಯ ಉದ್ದೇಶ ಇರಾನ್‌ನ ನ್ಯೂಕ್ಲಿಯರ್ ಕೇಂದ್ರಗಳೇ ಆಗಿವೆ. ಇರಾನ್‌ನ ಮೂರು ನ್ಯೂಕಿಯರ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗಿದೆ. ಇರಾನ್ ನ್ಯೂಕ್ಲಿಯರ್ ಬಾಂಬ್‌ಗಳನ್ನು ಹೊಂದಿದರೆ ಅಪಾಯವಿದೆ ಎಂದು ಇಸ್ರೇಲ್ ಹೇಳಿತ್ತು. ಇನ್ನು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈಗಾಗಲೇ ಇಸ್ರೇಲ್ ಬಳಿ ಅಪಾರ ಪ್ರಮಾಣದ ನ್ಯೂಕ್ಲಿಯರ್ ಇದೆ.
ಇನ್ನು ಇರಾನ್‌ನ ನ್ಯೂಕ್ಲಿಯರ್ ಕೇಂದ್ರಗಳಾದ ಇಸ್ಫಹಾನ್, ಪೋರ್ಡ್ ಹಾಗೂ ನಟಾಂಜ್ ಪರಮಾಣು ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಬಂಕರ್‌ಗಳನ್ನೇ ಟಾರ್ಗೆಟ್ ಮಾಡಿ ಅಮೆರಿಕ ದಾಳಿ ಮಾಡಿದೆ.












Click it and Unblock the Notifications