ಭಾರತಕ್ಕೆ ಜೈ ಎಂದ ಜಗತ್ತಿನ ‘ದೊಡ್ಡಣ್ಣ’... ಭಾರತೀಯರಿಗೆ ಏನೆಲ್ಲಾ ಲಾಭ?

ಭಾರತದ ಜೊತೆಗೆ ಜಗತ್ತಿನ ಪ್ರತಿಯೊಂದು ದೇಶಕ್ಕೂ ಈಗ ಸ್ನೇಹ ಸಂಬಂಧ ಬೇಕೆ ಬೇಕಾಗಿದೆ. ಯಾವುದಾದರೂ ಒಂದು ವಿಚಾರದಲ್ಲಿ ಭಾರತದ ಜೊತೆಗೆ ಪ್ರಪಂಚದ ಪ್ರತಿಯೊಂದು ದೇಶ ಕೂಡ ವ್ಯಾಪಾರ & ವ್ಯವಹಾರ ನಡೆಸುತ್ತದೆ. ಹೀಗೆ ಭಾರತ ಬಲಿಷ್ಠವಾಗಿ ಬೆಳೆದು ನಿಲ್ಲುತ್ತಿದ್ದು, ಅಮೆರಿಕ ರೀತಿಯ ದೊಡ್ಡ ದೊಡ್ಡ ಶ್ರೀಮಂತ ದೇಶಗಳು ಕೂಡ ಭಾರತಕ್ಕೆ ಬೆಂಬಲ ನೀಡಿ ಸ್ನೇಹ ಗಟ್ಟಿಗೊಳಿಸುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ಜಗತ್ತಿನ ಪಾಲಿನ 'ದೊಡ್ಡಣ್ಣ' ಎನ್ನುವ ಬಿರುದು ಪಡೆದಿರುವ ಅಮೆರಿಕ ಇದೀಗ ಮಹತ್ವದ ಘೋಷಣೆ ಒಂದನ್ನ ಹೊರಡಿಸಿದೆ!

ಭಾರತದ ಜೊತೆಗೆ ಸೇನಾ ವಿಚಾರದಲ್ಲಿ ಸಂಬಂಧ ಗಟ್ಟಿಗೊಳಿಸಲು ಇಷ್ಟು ದಿನಗಳ ಕಾಲ, ಇದೇ ಅಮೆರಿಕ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಇತ್ತು. ಆದರೆ ಪರಿಸ್ಥಿತಿ ಬದಲಾಗಿ, ಅಮೆರಿಕ ಕೂಡ ಇದೀಗ ಭಾರತದ ಜೊತೆಗೆ ಸೇನಾ ಸಹಭಾಗಿತ್ವಕ್ಕೆ ಮುಗಿಬಿದ್ದು ಬರುವಂತಹ ವಾತಾವರಣ ನಿರ್ಮಾಣ ಆಗಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಭಾರತ ಹೇಗೆಲ್ಲಾ ತನ್ನ ಶಕ್ತಿ ನಿರೂಪಿಸಿದೆ? ಜಗತ್ತಿನ ಯಾವೆಲ್ಲಾ ದೇಶಗಳಿಗೆ ಭಾರತ ಬೇಕು? ಎಂಬುದನ್ನ ಮನವರಿಕೆ ಮಾಡಿದೆ. ಪರಿಸ್ಥಿತಿ ಹೀಗಿದ್ದಾಗಲೇ ದೊಡ್ಡಣ್ಣ ಅಮೆರಿಕ ಇದೀಗ, ಭಾರತದ ವಿಚಾರದಲ್ಲಿ ದೊಡ್ಡ ನಿರ್ಧಾರ ಕೈಗೊಂಡಿದೆ.

America Announced Very Big Project With India In This Field

450 ಕೋಟಿ ರೂಪಾಯಿ ಒಪ್ಪಂದ!

ಅಂದಹಾಗೆ ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ & ಸೇನಾ ಉಪಕರಣಗಳನ್ನ ಸೇಲ್ ಮಾಡಲು ಅಮೆರಿಕ ನಿರ್ಧಾರ ಮಾಡಿದೆ. ಈ ಮೂಲಕ ಅತ್ಯಾಧುನಿಕವಾದ 'ಸೊನೊಬ್ಯೊ' ಅಂದರೆ ಜಲಾಂತರ್ಗಾಮಿ ದಾಳಿ ತಡೆಯುವ ಸಾಮರ್ಥ್ಯ ಇರುವ ಹಾಗೂ ಅತಿ ಎತ್ತರ ಜಾಗ ಇದ್ದರೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಉಪಕರಣ ಮಾರಾಟಕ್ಕೆ ಅಮೆರಿಕದ ಸರ್ಕಾರ ನಿರ್ಧಾರ ಮಾಡಿದೆ. ಸುಮಾರು 52 ಮಿಲಿಯನ್‌ ಡಾಲರ್ ಅಂದ್ರೆ 450 ಕೋಟಿಗೂ ಹೆಚ್ಚು ಮೌಲ್ಯದ ಒಪ್ಪಂದ ಇದಾಗಿರಲಿದೆ. ಹೀಗಾಗಿ ಇಡೀ ಜಗತ್ತಿನ ಗಮನ ಈ ಒಪ್ಪಂದದ ಮೇಲೆ ಕೇಂದ್ರೀಕೃತವಾಗಿದೆ.

ಒಪ್ಪಂದದ ಮೇಲೆ ಬಿದ್ದಿದೆ ಕಣ್ಣು!

ಒಟ್ನಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಅಮೆರಿಕದ ಸರ್ಕಾರ ಇದೀಗ ಭಾರತದ ಜೊತೆಗಿನ ಸಂಬಂಧ ವೃದ್ಧಿ ಮಾಡಿಕೊಂಡು, ಏಷ್ಯಾ ಭಾಗದಲ್ಲಿ ತನ್ನ ಹಿಡಿತ ಮತ್ತಷ್ಟು ರಕ್ಷಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಭಾರತ ಕೂಡ, ಇಂತಹ ವಿಚಾರಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಹೀಗಾಗಿ ಭಾರತ & ಅಮೆರಿಕ ಮಧ್ಯೆ ನಡೆಯುತ್ತಿರುವ ಸೇನಾ ಒಪ್ಪಂದಗಳ ಬಗ್ಗೆ ಚೀನಾ ಸೇರಿದಂತೆ ಹಲವು ದೇಶಗಳು ಕಣ್ಣಿಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+