ಅಮೆರಿಕ & ಇಸ್ರೇಲ್ ಲೆಕ್ಕಾಚಾರ ತಲೆಕೆಳಗೆ: ಇರಾನ್ ನ್ಯೂಕ್ಲಿಯರ್ ಪ್ಲ್ಯಾನ್ ಇನ್ನೂ ನಾಶವಾಗಿಲ್ಲ!

ಸೂಪರ್ ಪವರ್ ನೇಷನ್ ಅಮೆರಿಕದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಇರಾನ್ ಮಾಡಿದ ಸಣ್ಣದೊಂದು ಪ್ಲ್ಯಾನ್‌ನಿಂದಾಗಿ ಅಮೆರಿಕ ಹಾಗೂ ಇಸ್ರೇಲ್ ದೇಶದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಇರಾನ್ ನ್ಯೂಕ್ಲಿಯರ್ ಬಾಂಬ್ ತಯಾರಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಇದೇ ತಿಂಗಳೂ 22ರಂದು ಅಮೆರಿಕ ಇರಾನ್‌ನ ಮೂರು ನ್ಯೂಕ್ಲಿಯರ್ ಕೇಂದ್ರಗಳ ಮೇಲೆ ಭಾರೀ ಬಾಂಬ್ ದಾಳಿಯನ್ನು ಮಾಡಿತ್ತು.

ಈ ಬಾಂಬ್ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು ಸಂಪೂರ್ಣವಾಗಿ ನಾಶವಾಗಿದೆ. ಅಲ್ಲದೇ ಮುಂದಿನ ಮೂರು ವರ್ಷಗಳ ವರೆಗೆ ಇರಾನ್‌ಗೆ ಪರಮಾಣು ಉತ್ಪಾದನೆ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಇದೀ ಅಮೆರಿಕದ ಗುಪ್ತಚರ ವರದಿಯ ಅಪ್ಡೇಟ್ಸ್‌ ಪ್ರಕಾರ ಇರಾನ್ ದೇಶದ ನ್ಯೂಕ್ಲಿಯರ್ ಯೋಜನೆಯನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿರುವುದು ವರದಿಯಾಗಿದೆ.

America and Israel s calculations are upside down Iran s nuclear plan is not yet destroyed

ಈ ಮೂಲಕ ಸೂಪರ್ ಪವರ್ ನೇಷನ್‌ ಎನಿಸಿಕೊಂಡಿರುವ ಅಮೆರಿಕದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಇರಾನ್‌ನ ಎಲ್ಲಾ ನ್ಯೂಕ್ಲಿಯರ್ ಯೋಜನೆಗಳನ್ನೂ ನಾಶ ಮಾಡಿದ್ದೇವೆ. ನಮ್ಮದು ಬೃಹತ್ ಕಾರ್ಯಾಚರಣೆಯಾಗಿತ್ತು ಎಂದು ಅಮೆರಿಕ ಹೇಳಿಕೊಂಡಿತ್ತು. ಇದಾಗಿ ಒಂದೇ ವಾರದ ಒಳಗಾಗಿ ಮಹತ್ವದ ಅಪ್ಡೇಟ್ಸ್‌ ಬಂದಿದೆ. ಅಲ್ಲದೇ ಇರಾನ್ ಸಣ್ಣ ಮಾಸ್ಟರ್ ಪ್ಲ್ಯಾನ್‌ನಿಂದಾಗಿ ಈ ಯೋಜನೆಯನ್ನು ಪೂರ್ತಿ ನಾಶ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪ್ರದೇಶದ ಮೂರು ನ್ಯೂಕ್ಲಿಯರ್ ಕೇಂದ್ರಗಳ ಮೇಲೆ ಅಮೆರಿಕ ಭಾರೀ ದೊಡ್ಡ ಮಟ್ಟದ ಬಾಂಬ್ ದಾಳಿಯನ್ನು ನಡೆಸಿತ್ತು. ಇರಾನ್ ಯಾವುದೇ ಕಾರಣಕ್ಕೂ ನ್ಯೂಕ್ಲಿಯರ್ ಹೊಂದಬಾರದು. ಇದರಿಂದ ವಿಶ್ವಕ್ಕೆ ಅಪಾಯವಿದೆ ಎಂದು ಇಸ್ರೇಲ್ ವಾದಿಸಿತ್ತು. ಈ ವಿಚಾರವನ್ನು ವಿಶ್ವಸಂಸ್ಥೆಯ ಸಭೆಯಲ್ಲೂ ಪ್ರಸ್ತಾಪಿಸಲಾಗಿತ್ತು. ಮೊದ ಮೊದಲು ಈ ವಾದವನ್ನು ಅಮೆರಿಕ ತಳ್ಳಿ ಹಾಕಿತ್ತು. ಮಾತ್ರವಲ್ಲ ಇರಾನ್ ಯಾವುದೇ ಕಾರಣಕ್ಕೂ ನ್ಯೂಕ್ಲಿಯರ್ ಹೊಂದುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು.

ಕಳೆದ ಮೂರು ತಿಂಗಳ ಹಿಂದೆಯೂ ಅಮೆರಿಕದ ರಕ್ಷಣಾ ಪಡೆ ಇದೇ ಮಾತನ್ನು ಹೇಳಿತ್ತು. ಆದರೆ ಕಳೆದ ವಾರ ಇರಾನ್‌ನ ಮೇಲೆ ಅಮೆರಿಕ ಏಕಾಏಕಿ ಭಾರೀ ದೊಡ್ಡ ಮಟ್ಟದ ಬಾಂಬ್ ದಾಳಿ ಮಾಡಿತ್ತು. ಆದರೆ, ಇರಾನ್‌ನ ನ್ಯೂಕ್ಲಿಯರ್ ಯೋಜನೆಯನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಾಗಿಲ್ಲ. ಇಷ್ಟಕ್ಕೂ ಇಷ್ಟು ದೊಡ್ಡ ದಾಳಿಯ ನಡುವೆಯೂ ಇರಾನ್‌ ಪರಮಾಣು ಯೋಜನೆ ಉಳಿಸಿಕೊಂಡಿದ್ದು ಒಂದು ಸಣ್ಣ ಪ್ಲ್ಯಾನ್‌ನಿಂದಾಗಿ ಅಂತ ಹೇಳಲಾಗುತ್ತಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮುಖಭಂಗ!

ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಅಮೆರಿಕ ಸೇನೆ ಹಾಗೂ ಗುಪ್ತಚರ ಇಲಾಖೆಗೆ ಈ ವಿಷಯದಿಂದ ಭಾರೀ ಮುಖಭಂಗವಾಗಿದೆ ಎಂದು ಹೇಳಲಾಗುತ್ತಿದೆ. ಸಂಭವನೀಯ ದಾಳಿಯ ಹಿನ್ನೆಲೆಯಲ್ಲಿ ಇರಾನ್, ಅಮೆರಿಕ ದಾಳಿ ಮಾಡುವುದಕ್ಕಿಂತ ಮುಂಚೆಯೇ ನ್ಯೂಕ್ಲಿಯರ್ ಯೋಜನೆಯಲ್ಲಿ ಪ್ರಮುಖವಾಗಿರುವ ಯುರೇನಿಯಂ ಅನ್ನು ನ್ಯೂಕ್ಲಿಯರ್ ಕೇಂದ್ರದಿಂದ ಬೇರೆ ಕಡೆಗೆ ಸ್ಥಳಾಂತರಿಸಿತ್ತು ಎಂದು ಹೇಳಲಾಗುತ್ತಿದೆ. ಇದರಿಂದ ಇರಾನ್‌ನ ನ್ಯೂಕ್ಲಿಯರ್‌ ಯೋಜನೆ ಸಂಪೂರ್ಣವಾಗಿ ನಾಶವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಅಮೆರಿಕ ಹಾಗೂ ಇಸ್ರೇಲ್‌ನಂತಹ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೇನೆಯಿಂದ ಈ ರೀತಿ ಯುರೇನಿಯಂ ಕಾಪಾಡಿಕೊಂಡಿರುವುದು ಹೇಗೆ ಎನ್ನುವ ಚರ್ಚೆ ಈಗ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+