ಅಮೆರಿಕದ ಜೊತೆ ಭಾರತದ ‘ಡ್ರೋನ್’ ಒಪ್ಪಂದ ಏನಾಯ್ತು?

ವಾಷಿಂಗ್ಟನ್: ಭಾರತ ಹಾಗೂ ಅಮೆರಿಕ ಮಧ್ಯೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ನಡೆಯುತ್ತಿತ್ತು. ಆದರೆ ಕೆಲವು ವರ್ಷದಿಂದ ಇದಕ್ಕೆಲ್ಲಾ ಕೊಕ್ಕೆ ಬಿದ್ದಿತ್ತು. ಭಾರತ & ರಷ್ಯಾ ನಡುವಿನ ಸ್ನೇಹ ಸಂಬಂಧ ಅಮೆರಿಕಗೆ ಸಿಟ್ಟನ್ನು ತರಿಸಿತ್ತು. ಆದ್ರೆ ಈಗ ಬೈಡನ್ ಆಡಳಿತ ಭಾರತದ ಜೊತೆ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಮುಂದಾಗಿದೆಯಂತೆ.

ಹೌದು, ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡುವ ಸಂದರ್ಭದಲ್ಲೇ ಇಂತಹದ್ದೋಂದು ಮಾತು ಓಡಾಡುತ್ತಿದೆ. ಭಾರತ ಮತ್ತು ಅಮೆರಿಕ ಮಧ್ಯೆ ಸುಮಾರು 3 ಬಿಲಿಯನ್‌ ಡಾಲರ್ ಅಂದ್ರೆ ಹತ್ತಿರ ಹತ್ತಿರ 24 ಸಾವಿರ ಕೋಟಿ ವೆಚ್ಚದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ನಡೆಯುವ ಸಾಧ್ಯತೆ ಇದೆ.‌ MQ-9B ಡ್ರೋನ್‌ ಒಪ್ಪಂದ ಅಂತಿಮಗೊಳಿಸಲು ಅಮೆರಿಕ ಭಾರಿ ಉತ್ಸಾವನ್ನು ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಭೇಟಿ ಸಂದರ್ಭದಲ್ಲಿ ಒಪ್ಪಂದ ಜಾರಿಗೆ ಬರುವ ಭರವಸೆ ಅಮೆರಿಕದ ಅಧಿಕಾರಿಗಳದ್ದು. ಹೀಗಾಗಿಯೇ ಮಹತ್ವದ ಚರ್ಚೆಗೆ ಕೂಡ ಅಮೆರಿಕದಲ್ಲಿ ವೇದಿಕೆ ಸಿದ್ಧವಾಗಿದೆ.

America and India may be sign for weapons deal

ಡ್ರೋನ್ ಒಪ್ಪಂದಕ್ಕೆ ಸಹಿ ಬೀಳುತ್ತಾ?

ಈಗ ಮೂಡಿರುವ ಬಹುದೊಡ್ಡ ಪ್ರಶ್ನೆ ಇದೆ, ಏಕೆಂದರೆ ಹಲವು ವರ್ಷಗಳ ಹಿಂದೆಯೇ ಈ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಹಲವು ಕಾರಣದಿಂದಾಗಿ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳ ಮುಖ್ಯಸ್ಥರು ಸಹಿ ಹಾಕಿರಲಿಲ್ಲ. ಈ ನಡುವೆ ಉಕ್ರೇನ್ & ರಷ್ಯಾ ಯುದ್ಧವು ಅಡ್ಡಿಯಾಗಿತ್ತು. ಆದ್ರೆ ಇದೀಗ ಪ್ರಧಾನಿ ಮೋದಿ ತಮ್ಮ ಬಹುನಿರೀಕ್ಷಿತ ಅಮೆರಿಕ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಈ ಬಾರಿಯ ಪ್ರವಾಸದ ಸಂದರ್ಭದಲ್ಲೇ ಈ ಡ್ರೋನ್ ಡೀಲ್ ಮುಗಿಸುವ ಹುಮ್ಮಸ್ಸು ಅಮೆರಿಕ ಸರ್ಕಾರದ್ದು. ಆದರೆ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಒಪ್ಪಂದ ಮಾಡಿಕೊಂಡರೆ ರಷ್ಯಾಗೆ ಕೋಪ?

ಪ್ರಧಾನಿಯಾಗಿ ಮೋದಿ ಅವರು ಅಧಿಕೃತವಾಗಿ ಅಮೆರಿಕಗೆ 2ನೇ ಬಾರಿಗೆ ಭೇಟಿ ಕೊಡುತ್ತಿದ್ದಾರೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಕೂಡ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ 2ನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಐತಿಹಾಸಿಕ ಕ್ಷಣಕ್ಕೆ ಎರಡೂ ದೇಶ ಸಾಕ್ಷಿಯಾಗಲಿವೆ. ಆದರೆ ಅಮೆರಿಕ ಜೊತೆ ಡ್ರೋನ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದರೆ ರಷ್ಯಾ ಈ ವಿಚಾರದಲ್ಲಿ ಭಾರತದ ವಿರುದ್ಧ ಮುನಿಸಿಕೊಳ್ಳುತ್ತಾ? ಅನ್ನೋ ಅನುಮಾನ ಕೂಡ ಕಾಡುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಕೂಡ ಈ ಭೇಟಿಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ ಅಂತಿದ್ದಾರೆ ತಜ್ಞರು.

2024ರ ಅಧ್ಯಕ್ಷೀಯ ಚುನಾವಣೆ

ಬೈಡನ್ ಪ್ರಕಾರ ಈ ಭೇಟಿಯನ್ನು ನೋಡುವುದಾದರೆ ಮುಂಬರುವ 2024ರ ಅಧ್ಯಕ್ಷೀಯ ಚುನಾವಣೆಗೆ ಇದು ಬಹುಮುಖ್ಯ. ಏಕೆಂದರೆ ಅಮೆರಿಕದಲ್ಲಿ ನೆಲೆಸಿ, ಅಮೆರಿಕ ಪ್ರಜೆಗಳಾಗಿ ಮತದಾನದ ಹಕ್ಕು ಪಡೆದಿರುವ ಲಕ್ಷಾಂತರ ಭಾರತೀಯರು ಅಲ್ಲಿದ್ದಾರೆ. ಹೀಗಾಗಿ ಅವರ ಬೆಂಬಲ ಪಡೆಯಲು ಜೋ ಬೈಡನ್‌ಗೆ ಈ ಕಾರ್ಯಕ್ರಮ ಅತಿಮುಖ್ಯ ಎನ್ನಲಾಗಿದೆ. ಇದೇ ಕಾರಣಕ್ಕೆ ಸಕಲ ಸಿದ್ಧತೆ ನಡೆಸಿ, ಪ್ರಧಾನಿ ಮೋದಿ ಅವರನ್ನ ಬರಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷರು ಕಾಯುತ್ತಿದ್ದಾರೆ. ಆದರೆ ಈ ಭೇಟಿ ಎರಡೂ ರಾಷ್ಟ್ರಗಳ ಶಸ್ತ್ರಾಸ್ತ್ರ ಒಪ್ಪಂದಕ್ಕೂ ವೇದಿಕೆಯಾದರೆ ರಷ್ಯಾ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

America and India may be sign for weapons deal

ಹೀಗೆ ಎರಡೂ ರಾಷ್ಟ್ರಗಳ ನಡುವೆ ಮಹತ್ವದ ಶಸ್ತ್ರಾಸ್ತ್ರ ಒಪ್ಪಂದ ವಿಚಾರ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತವು ಕೂಡ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದು, ಅಮೆರಿಕ ಜೊತೆ ಡ್ರೋನ್ ಖರೀದಿ ವಿಚಾರದಲ್ಲಿ ಭಾರತ ಯಾವ ನಿಲುವು ಕೈಗೊಳ್ಳುತ್ತೆ? ಅನ್ನೋದೆ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಸ್ಪಷ್ಟವಾದ ಉತ್ತರ ಸಿಗಲಿದ್ದು, ಪಿಎಂ ಮೋದಿಯವರ ಭೇಟಿ ತನಕ ಇದರ ಉತ್ತರಕ್ಕಾಗಿ ಕಾಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+