3ನೇ ಮಹಾಯುದ್ಧ: ರಷ್ಯಾ ಒಳಗೆ ನುಗ್ಗಿದ ಉಕ್ರೇನ್ ಸೇನೆ?

ಮಾಸ್ಕೋ: ರಷ್ಯಾ & ಉಕ್ರೇನ್ ನಡುವಿನ ಯುದ್ಧ ಭೀಕರವಾಗಿದ್ದು, ಉಕ್ರೇನ್ ತನ್ನ ಡ್ಯಾಂ ಸ್ಫೋಟಿಸಿದ್ದಕ್ಕೆ ರಷ್ಯಾ ವಿರುದ್ಧ ದಾಳಿಗೆ ಮುಂದಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಆದರೆ ಇಂತಹ ಆರೋಪಗಳ ಬೆನ್ನಲ್ಲೇ ರಷ್ಯಾ ಜನರು ಗಡಿ ಭಾಗದಲ್ಲಿ ವಿಪರೀತ ಡ್ರೋನ್ ಹಾರಾಟ ನೋಡಿದ್ದಾಗಿ ಮತ್ತು ಉಕ್ರೇನ್ ದಾಳಿಗೆ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅಂದಹಾಗೆ ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದಲ್ಲಿ ಡ್ಯಾಂ ಸ್ಫೋಟಗೊಂಡ ಪರಿಣಾಮ ಲಕ್ಷಾಂತರ ಉಕ್ರೇನ್ ನಾಗರಿಕರು ಪರದಾಡುತ್ತಿದ್ದಾರೆ. ಆದರೆ ಈ ಕಖೌಕಾ ಡ್ಯಾಂ ನೂರಾರು ಟಿಎಂಸಿ ನೀರನ್ನ ಒಡಲಾಳದಲ್ಲಿ ಹೊಂದಿತ್ತು. ದಿಢೀರ್ ಡ್ಯಾಂ ಬ್ಲಾಸ್ಟ್ ಆದ ಪರಿಣಾಮ ಪ್ರವಾಹ ಸೃಷ್ಟಿಯಾಗಿತ್ತು. ಈ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಉಕ್ರೇನ್ ಕಾದು ಕುಳಿತಿದೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ರಷ್ಯಾ ಗಡಿ ಭಾಗದಲ್ಲಿ ಉಕ್ರೇನ್ ಡ್ರೋನ್‌ಗಳು ಭಾರಿ ಪ್ರಮಾಣದಲ್ಲಿ ಹಾರಾಟ ನಡೆಸುತ್ತಿವೆ. ಹೀಗಾಗಿ ರಷ್ಯಾ ಮೇಲೆ ಉಕ್ರೇನ್ ಪ್ರತಿದಾಳಿ ನಡೆಸಿ, ರಕ್ತ ಹರಿಸೋದು ಬಹುತೇಕ ಪಕ್ಕಾ ಆಗುತ್ತಿದೆ (Russia Ukraine War).

Ukraine drones flying in Russian border

ರಷ್ಯಾ ರಾಜಧಾನಿಗೂ ಉಕ್ರೇನ್ ಎಂಟ್ರಿ?

ಈಗ ಕೇಳಿಬರುತ್ತಿರುವ ಆರೋಪಗಳ ಪ್ರಕಾರ ಕೇವಲ ರಷ್ಯಾ ಗಡಿಯಲ್ಲಿ ಮಾತ್ರವಲ್ಲ, ಇದೇ ರೀತಿ ರಷ್ಯಾ ರಾಜಧಾನಿ ಮಾಸ್ಕೋ ಆಕಾಶದಲ್ಲೂ ಉಕ್ರೇನ್ ಡ್ರೋನ್‌ಗಳು ಹಾರಾಡುತ್ತಿವೆ ಎನ್ನಲಾಗಿದೆ. ಹೀಗಾಗಿ ಪರಿಸ್ಥಿತಿ ಭೀಕರವಾಗಿದೆ ಎನ್ನುತ್ತಿದೆ ಜಗತ್ತು. ಮಾಸ್ಕೋ ನಿವಾಸಿಗಳು ಡ್ರೋನ್‌ಗಳ ಹಾರಾಟ ಗಮನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ತಿಂಗಳಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೂ ಡ್ರೋನ್ ದಾಳಿ ನಡೆದಿತ್ತು. ಅಟ್ಯಾಕ್ ನಡೆದಾಗ ರಷ್ಯಾ ಅಧ್ಯಕ್ಷ ಪುಟಿನ್ ಸರ್ಕಾರಿ ನಿವಾಸದಲ್ಲಿ ಇರಲಿಲ್ಲ. ಹೀಗಾಗಿ ದೊಡ್ಡ ಗಂಡಾಂತರವೇ ಮಿಸ್ ಆಗಿತ್ತು. ಆದರೆ ಈಗ ಭೀಕರ ದಾಳಿಗೆ ಉಕ್ರೇನ್ ಸೇನೆ ಸರ್ವ ಸನ್ನದ್ಧವಾಗಿದೆಯಂತೆ.

ಡ್ಯಾಂ ಬ್ಲಾಸ್ಟ್ ಮಾಡಿದ್ದು ಯಾರು?

ಅದು ಜೂನ್ 6ರ ಮಧ್ಯರಾತ್ರಿ, ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಜನ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಆಗಲೇ ನೋಡಿ ಸಂಭವಿಸಿದ್ದು ಭೀಕರ ಘಟನೆ. ಭೀಕರ ಬಾಂಬ್ & ಸ್ಫೋಟಕ ಬಳಸಿ ಖೆರ್ಸನ್ ಪ್ರಾಂತ್ಯದ ಕಖೌಕಾ ಡ್ಯಾಂ ಬ್ಲಾಸ್ಟ್ ಮಾಡಲಾಗಿತ್ತು. ಘಟನೆ ಬಳಿಕ ರಷ್ಯಾ ಮತ್ತು ಉಕ್ರೇನ್ ನಡುವೆ ಪರಿಸ್ಥಿತಿ ಕೊತ ಕೊತ ಕುದಿಯುತ್ತಿದೆ. ಈ ಕಾರಣಕ್ಕೆ ಅಮೆರಿಕ ಮತ್ತು ನ್ಯಾಟೋ ಸಹಾಯ ಪಡೆದು ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿಯನ್ನ ನಡೆಸೋದು ಪಕ್ಕಾ ಎನ್ನಲಾಗಿತ್ತು. ಇಷ್ಟಾದರೂ ರಷ್ಯಾ ಮಾತ್ರ ತಾನು ಡ್ಯಾಂ ಬ್ಲಾಸ್ಟ್ ಮಾಡಿಲ್ಲ ಅಂತಾ ಹೇಳುತ್ತಿದೆ. ಆದರೆ ಉಕ್ರೇನ್ ಮಾತ್ರ ರಷ್ಯಾ ವಿರುದ್ಧ ಪ್ರತಿಕಾರಕ್ಕೆ ಸಜ್ಜಾದಂತೆ ಕಾಣ್ತಿದೆ.

Ukraine drones flying in Russian border

ರಷ್ಯಾ ಡ್ಯಾಂ ಬ್ಲಾಸ್ಟ್ ಮಾಡ್ತಾರಾ?

ಅಮೆರಿಕ ಈಗಾಗಲೇ ಉಕ್ರೇನ್‌ಗೆ ಇನ್ನಷ್ಟು ವೆಪನ್ಸ್ ಸಪ್ಲೈ ಮಾಡಲು ಮುಂದಾಗಿರುವ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭ ಬಳಸಿಕೊಂಡು ರಷ್ಯಾ ವಿರುದ್ಧ ಶತ್ರುಗಳು ಒಂದಾಗಿದ್ದಾರೆ ಅನ್ನೋದು ರಷ್ಯಾ ಆರೋಪ. ಇದೇ ಕಾರಣಕ್ಕೆ ರಷ್ಯಾ ಮೇಲೂ ಪ್ರತಿಕಾರದ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ರಷ್ಯಾ ಸೇನೆ ತನ್ನ ದೇಶದ ಡ್ಯಾಂಗಳು ಮತ್ತು ಸೂಕ್ಷ್ಮ ಸ್ಥಳಗಳ ಮೇಲೂ ಕಣ್ಣಿಟ್ಟು ಕಾಯುತ್ತಿದೆ. ಅಲ್ಲದೆ ರಷ್ಯಾ ರಾಜಧಾನಿ ಮಾಸ್ಕೋ ಇದೀಗ 7 ಸುತ್ತಿನ ಕೋಟೆಯಾಗಿ ಬದಲಾಗಿದೆ. ಆದ್ರೂ ಉಕ್ರೇನ್ ಸೇನೆಗೆ ಸೇರಿದ ಡ್ರೋನ್‌ಗಳು ರಷ್ಯಾ ರಾಜಧಾನಿ ಮಾಸ್ಕೋ ಆಗಸದಲ್ಲಿ ಹಾರಾಡಿವೆ ಎನ್ನಲಾಗುತ್ತಿದೆ.

ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಅಂತಿಮ ಘಟಕ್ಕೆ ಬಂದು ನಿಂತಂತೆ ಕಾಣುತ್ತಿದೆ. ಈ ಸಂದರ್ಭದಲ್ಲೇ ರಷ್ಯಾ ತನ್ನಲ್ಲಿರುವ ನ್ಯೂಕ್ಲಿಯರ್ ಅಂದರೆ ಪರಮಾಣು ಬಾಂಬ್ ಬಳಸಿದರೆ ಪರಿಸ್ಥಿತಿ ಏನು? ಅನ್ನೋ ಚಿಂತೆ ಕೂಡ ಶುರುವಾಗಿದೆ. ಹಾಗೇ ಉಕ್ರೇನ್ ಬೆನ್ನಿಗೆ ಅಮೆರಿಕ, ನ್ಯಾಟೋ ಪಡೆಗಳು ನಿಂತಿವೆ. ಉಕ್ರೇನ್ ಸೇನೆಗೆ ಬೇಕಾದಷ್ಟು ಶಸ್ತ್ರಾಸ್ತ್ರ ಪೂರೈಕೆ ಮಾಡಿ, ರಷ್ಯಾ ವಿರುದ್ಧ ಪರೋಕ್ಷವಾಗಿ ಸೇಡು ತೀರಿಸಿಕೊಳ್ತಿವೆ ಅನ್ನೋ ಆರೋಪ ಕೇಳಿಬರುತ್ತಿದೆ. ರಷ್ಯಾ ಕೂಡ ಚೀನಾ ಜೊತೆ ಸೇರಿ ಪ್ರತಿತಂತ್ರ ಹೆಣೆಯುತ್ತಿದೆ. ಈ ಮೂಲಕ ರಷ್ಯಾ ಹಾಗೂ ಉಕ್ರೇನ್ ಯುದ್ಧ ಪರೋಕ್ಷವಾಗಿ 3ನೇ ಮಹಾಯುದ್ಧದ ಸ್ವರೂಪ ಪಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+