Russia & Ukraine: ಅವರ ಮೇಲೆ ಇವರು.. ಇವರ ಮೇಲೆ ಅವರು!

ಮಾಸ್ಕೋ: ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಮಾಸ್ಕೊ ಸೇರಿ ಆಸುಪಾಸಿನ ನಗರಗಳ ಮೇಲೆ ಉಕ್ರೇನ್ ಸೇನೆ ಡ್ರೋನ್ ದಾಳಿ ನಡೆಸಿರುವ ಬಗ್ಗೆ ರಷ್ಯಾ ಆರೋಪಿಸಿದೆ. ಮಾಸ್ಕೊದ ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ರಷ್ಯಾ ಗುಡುಗಿದೆ. ಈ ಮೂಲಕ ಎರಡೂ ದೇಶಗಳು ಒಬ್ಬರ ಮೇಲೆ ಒಬ್ಬರು ಬಾಂಬ್ ಹಾಕುತ್ತಾ, ಭಯ ಹುಟ್ಟಿಸುತ್ತಿವೆ.

ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿರುವಂತೆ ಮಂಗಳವಾರ ಬೆಳಗಿನ ಜಾವ ಉಕ್ರೇನ್‌ನ ಎರಡು ಡ್ರೋನ್‌ ಹೊಡೆದು ಉರುಳಿಸಲಾಗಿದ್ದು, ಮತ್ತೊಂದು ಡ್ರೋನ್ ನಿಷ್ಕ್ರಿಯಗೊಳಿಸಿದ್ದೇವೆಂದು ತಿಳಿಸಿದೆ. ಈ ಹೊತ್ತಲ್ಲೇ ಒಂದು ಡ್ರೋನ್‌ ಗಗನಚುಂಬಿ ಕಟ್ಟಡಕ್ಕೆ ಭಾರಿ ಹಾನಿ ಮಾಡಿರುವ ಆರೋಪ ಕೇಳಿಬಂದಿದೆ. ಹಿಂದೆ ದಾಳಿ ನಡೆದಿದ್ದ ಐಕ್ಯೂ-ಕ್ವಾರ್ಟರ್ ಕಟ್ಟಡದ ಮೇಲೆ ಮತ್ತೆ ದಾಳಿ ಆಗಿದೆ. ದಾಳಿ ನಡೆದಿರುವ ಈ ಕಟ್ಟಡದಲ್ಲೇ ಕೆಲ ಸಚಿವಾಲಯ, ಸರ್ಕಾರಿ ಸಂಸ್ಥೆಗಳ ಕಚೇರಿಗಳಿದ್ದು, ಆದರೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಸ್ಕೊ ಮೇಯರ್ ಸೆರ್ಗೆಯ್‌ ಸೊಬ್ಯಾನಿನ್ ಆರೋಪ ಮಾಡಿದ್ದಾರೆ.

Allegedly Ukraine drone attack on Russia capital Moscow

ರಷ್ಯಾ ದಾಳಿಗೆ ಉಕ್ರೇನ್‌ಗೆ ನಡುಕ

ಅಂದಹಾಗೆ ಉಕ್ರೇನ್‌ನ ಕ್ರಿವಿ ರಿಹ್ ಸಿಟಿ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಭೀಕರ ದಾಳಿ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಕಟ್ಟಡ ಅವಶೇಷದಡಿ ಕನಿಷ್ಠ 53 ಜನ ಸಿಲುಕಿದ್ದಾರೆ ಎನ್ನಲಾಗಿದೆ. ಒಟ್ಟು 2 ಅಪಾರ್ಟ್‌ಮೆಂಟ್‌ಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಅಪಾರ್ಟ್‌ಮೆಂಟ್‌ನ 4 ಮತ್ತು 9ನೇ ಮಹಡಿ ಸಂಪೂರ್ಣ ಛಿದ್ರವಾಗಿದ್ದು, ಇದೇ ಸಂದರ್ಭದಲ್ಲಿ ಯೂನಿವರ್ಸಿಟಿ ಕಟ್ಟಡ ಭಾಗಶಃ ಹಾನಿಯಾಗಿದೆ ಎಂದು ಉಕ್ರೇನ್‌ನ ಪಡೆಗಳು ಮಾಹಿತಿ ನೀಡಿವೆ.

ಉಕ್ರೇನ್ ಅಧ್ಯಕ್ಷನ ಹುಟ್ಟೂರು ರಕ್ತಸಿಕ್ತ

ಇದೀಗ ರಷ್ಯಾ ಪಡೆಗಳು ದಾಳಿ ನಡೆಸಿರುವ ಕ್ರಿವಿ ರಿಹ್‌ ನಗರ ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಹುಟ್ಟೂರು. ಹೀಗಾಗಿ ಈ ದಾಳಿಯು ಉಕ್ರೇನ್ ಸೇನೆಯನ್ನೂ ರೊಚ್ಚಿಗೆಬ್ಬಿಸಿದೆ. ಮೃತರಲ್ಲಿ 10 ವರ್ಷದ ಬಾಲಕಿ ಕೂಡ ಸೇರಿದ್ದು, ದಾಳಿ ನಡೆದ ಯೂನಿವರ್ಸಿಟಿ ಕಟ್ಟಡದಿಂದ ಹೊಗೆ ಹೊಮ್ಮುತ್ತಿದೆ. ಕಟ್ಟಡದ ಹೊರಗೆ ನಿಲ್ಲಿಸಿದ್ದ ಕಾರುಗಳು ಉಡೀಸ್ ಆಗಿವೆ. ಬೆಳ್ಳಂಬೆಳಗ್ಗೆ ದಾಳಿ ನಡೆದಿದ್ದು, ಘಟನೆ ಬಗ್ಗೆ ಝೆಲೆನ್‌ಸ್ಕಿ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಉಕ್ರೇನ್‌ನ ಶತ್ರುಗಳು ನಗರಗಳನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ವಸತಿ ಪ್ರದೇಶಗಳ ಮೇಲೂ ದಾಳಿ ನಡೆಯುತ್ತಿದೆ. ಇಷ್ಟೆಲ್ಲಾ ನಡೆದರೂ ನಾವು ಹೆದರಲ್ಲ ಎಂದು ತೊಡೆತಟ್ಟಿದ್ದಾರೆ.

Allegedly Ukraine drone attack on Russia capital Moscow

ಉಕ್ರೇನ್ ಪಡೆಗಳಿಂದಲೂ ಪ್ರತಿದಾಳಿ

ಇತ್ತ ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿದ್ದರೆ, ಮತ್ತೊಂದು ಕಡೆ ಉಕ್ರೇನ್ ಪಡೆಗಳು ಕೂಡ ದಾಳಿ ತೀವ್ರಗೊಳಿಸಿವೆ. ಅದರಲ್ಲೂ ಉಕ್ರೇನ್‌ನ ಸೇನಾ ಪಡೆ ರಷ್ಯಾ ಭಾಗಶಃ ಅತಿಕ್ರಮಿಸಿಕೊಂಡ ಡೊನೆಟ್ಸ್ಕ್‌ ಪ್ರಾಂತ್ಯದ ಮೇಲೆ ಉಕ್ರೇನ್ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾ ಹೇಳಿದೆ. ಹೀಗೆ ಅತ್ತ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್, ಹಾಗೇ ಉಕ್ರೇನ್ ದಾಳಿ ಮಾಡಿದೆ ಅಂತಾ ರಷ್ಯಾ ಪರಸ್ಪರ ಬಡಿದಾಡುತ್ತಿವೆ. ಹೀಗಾಗಿ ಅಮಾಯಕರ ನೆಮ್ಮದಿ ಹಾಳಾಗಿ ಹೋಗಿದೆ.

Allegedly Ukraine drone attack on Russia capital Moscow

ಒಟ್ನಲ್ಲಿ ರಷ್ಯಾ & ಉಕ್ರೇನ್ ಜಗಳ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದೆ. ಹೀಗಾಗಿ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಯುದ್ಧ ಇಂದು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅನ್ನೋ ಜನರ ನಿರೀಕ್ಷೆ ಹುಸಿಯಾಗುತ್ತಿದೆ. ಈಗಾಗಲೇ ಲಕ್ಷಾಂತರ ಜನ ಯುದ್ಧದ ಈ ಉಗ್ರ ರೂಪಕ್ಕೆ ಬಲಿ ಆಗಿದ್ದು, ಇನ್ನೂ ಅದೆಷ್ಟು ಜನರ ದೇಹ ಜೀವ ಚೆಲ್ಲಬೇಕೋ ಗೊತ್ತಿಲ್ಲ. ಹೀಗಾಗಿ ಕೂಡಲೇ ಎರಡೂ ರಾಷ್ಟ್ರಗಳ ಮಧ್ಯೆ ಸಂಧಾನ ನಡೆಸಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+