ಅಮೆರಿಕ ಅಧ್ಯಕ್ಷರ ಕಾರ್ಯಕ್ರಮದಲ್ಲಿ ನಡೆದೇ ಹೋಯ್ತು ಎಡವಟ್ಟು!
ವಾಷಿಂಗ್ಟನ್: ಜೋ ಬೈಡನ್ ಅಮೆರಿಕದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಹೀಗಾಗಿ 2024ರ ಅಧ್ಯಕ್ಷೀಯ ಚುನಾವಣೆ ಗೆಲುವಿಗಾಗಿ ಈಗಲೇ ಕಸರತ್ತು ಆರಂಭಿಸಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಟ್ರಂಪ್ ವಿರೋಧಿಸುವ ವಿಚಾರ ಟಾರ್ಗೆಟ್ ಮಾಡುತ್ತಾ ಚುನಾವಣೆ ಎದುರಿಸುವುದು ಬೈಡನ್ ಪ್ಲ್ಯಾನ್. ಆದರೆ ಹೀಗೆ ಮಾಡೋಕೆ ಹೋಗಿ ದೊಡ್ಡ ಎಡವಟ್ಟಾಗಿದೆ!
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಂಡಿದ್ದ ಎಡವಟ್ಟು ಒಂದಲ್ಲ.. ಎರಡಲ್ಲ.. ಅದರಲ್ಲೂ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾ ತಮ್ಮ ಅಧಿಕಾರವಧಿಯ ವೇಳೆ ಟ್ರಂಪ್ ಸಿಕ್ಕಾಪಟ್ಟೆ ವಿವಾದ ಹುಟ್ಟುಹಾಕಿದ್ದರು. ಇಂತಿಪ್ಪ ಟ್ರಂಪ್ ಮಂಗಳಮುಖಿ ಅಥವಾ ಟ್ರಾನ್ಸ್‌ಜೆಂಡರ್ ಬಗ್ಗೆಯೂ ಬಾಯಿಗೆ ಬಂದಂತೆ ಹೇಳಿಕೆ ನೀಡಿದ ಆರೋಪಗಳನ್ನು ಎದುರಿಸಿದ್ದರು. ಈ ಅಸ್ತ್ರ ಬಳಸಿಕೊಂಡು, ಅಮೆರಿಕದಲ್ಲಿ ಹೆಚ್ಚಾಗಿರುವ ಮಂಗಳಮುಖಿ ಸಮುದಾಯದ ಬೆಂಬಲ ಪಡೆಯಲು ಬೈಡನ್ ಮುಂದಾಗಿದ್ದಾರೆ ಎನ್ನಲಾಗಿತ್ತು. ಈ ಮಧ್ಯೆ ಅಧ್ಯಕ್ಷರ ನಿವಾಸ ವೈಟ್‌ಹೌಸ್ ಎದುರು ಬೈಡನ್ ವಿಶೇಷ ಕಾರ್ಯಕ್ರಮ ಆಯೋಜಿಸಿದ್ರು.

ಮಂಗಳಮುಖಿ ಅರೆನಗ್ನ, ಬೆಂಬಲಿಗರು ಶಾಕ್!
ಹೌದು ವೈಟ್‌ಹೌಸ್ ಆವರಣದಲ್ಲಿ ಮಂಗಳಮುಖಿ ಸಮುದಾಯಕ್ಕೆ ಅಂತಾ ಜೋ ಬೈಡನ್ ದಂಪತಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಆಗ ಮಂಗಳಮುಖಿ ಸಮುದಾಯದವರ ಜೊತೆ ಬೈಡನ್ ಫೋಟೋ ಕೂಡ ತೆಗೆಸಿಕೊಂಡರು. ಮಂಗಳಮುಖಿಯರ ಕಷ್ಟ, ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಎಲ್ಲಾ ಮುಗಿದು ಕಾರ್ಯಕ್ರಮದಲ್ಲಿ ಎಂಜಾಯ್ ಮಾಡುವಾಗ ನಡೆದೇ ಹೋಗಿತ್ತು ಎಡವಟ್ಟು. ಅದೇನೆಂದರೆ ಜೋ ಬೈಡನ್ ಕಾರ್ಯಕ್ರಮಕ್ಕೆ ಬಂದಿದ್ದ ಅಮೆರಿಕದ ಮಂಗಳಮುಖಿ ಮಾಡೆಲ್ ಒಬ್ಬರು ಅರೆನಗ್ನರಾದರು! ಡಾನ್ಸ್ ಮಾಡುತ್ತಾ, ಮಾಡುತ್ತಾ ಈ ರೀತಿ ಮಾಡಿದ್ದಾರೆ. ಅಲ್ಲದೆ ಅವರ ಜೊತೆ ಇದ್ದವರೂ ಟಾಪ್ ಲೆಸ್ ಆಗಿ ಕುಣಿದಿದ್ದಾರೆ. ಹೀಗೆ ಕುಣಿದ ಮಂಗಳಮುಖಿ ರೂಪದರ್ಶಿಯನ್ನ ರೋಸ್ ಮೋಂಟೋಯಾ ಎನ್ನಲಾಗಿದೆ.
ಗೆಲುವೇ ಬೈಡನ್‌ಗೆ ಮುಖ್ಯ ಗುರಿ!
ಟ್ರಂಪ್ ವಿರುದ್ಧ ಗೆಲುವಿಗೆ ಅಮೆರಿಕದ ಹಾಲಿ ಅಧ್ಯಕ್ಷ ಬೈಡನ್ ಕಷ್ಟಪಡುತ್ತಿದ್ದಾರೆ. ಆದರೆ ಇದ್ಯಾವುದೂ ವರ್ಕ್ ಆಗುತ್ತಿಲ್ಲ, ಏಕೆಂದರೆ ಅಮೆರಿಕದಲ್ಲಿ ಟ್ರಂಪ್ ಪಡೆ ಅಲರ್ಟ್ ಆಗಿದೆ. ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಬೇಕು. ಆಗಲೇ ಅಮೆರಿಕ ಜಗತ್ತಿನ ನಂಬರ್ 1 ದೇಶವಾಗುತ್ತದೆ ಎಂಬುದು ಬೆಂಬಲಿಗರ ನಂಬಿಕೆ. ಆದರೆ ಬೈಡನ್ ಗೆಲುವು ಈ ಬಾರಿ ಕಷ್ಟ ಎನ್ನುತ್ತಿದ್ದಾರೆ ತಜ್ಞರು. ಇದೇ ಕಾರಣಕ್ಕಾಗಿ ಟ್ರಂಪ್ ವಿರೋಧಿ ಒಕ್ಕೂಟವನ್ನು ಒಗ್ಗೂಡಿಸುವ ಪ್ರಯತ್ನ ಜೋ ಬೈಡನ್‌ರಿಂದ ಆಗುತ್ತಿದೆ. ಇದರ ಮತ್ತೊಂದು ಭಾಗವಾಗಿ ಮಂಗಳಮುಖಿ ಸಮುದಾಯಕ್ಕೆ ಬೈಡನ್ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಎನ್ನಲಾಗಿದೆ. ರೋಸ್ ಮೋಂಟೋಯಾ ಘಟನೆ ಬಗ್ಗೆ ವಿವರಣೆ ನೀಡಿ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಒಟ್ನಲ್ಲಿ ಈ ಬಾರಿ ಅಮೆರಿಕದಲ್ಲಿ ಮತ್ತೊಮ್ಮೆ ರಾಜಕೀಯ ಬದಲಾವಣೆ ಗಾಳಿ ಬೀಸುತ್ತಿದೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲಬೇಕು ಎಂಬ ಗುರಿಯನ್ನ ಟ್ರಂಪ್ ಮತ್ತು ಜೋ ಬೈಡನ್ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಪರಸ್ಪರ ಕಿತ್ತಾಟ ಮತ್ತು ವಾಗ್ದಾಳಿ ನಡೆಯುತ್ತಿದೆ. ಹಾಗಾದ್ರೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತೆ ಗೆಲ್ಲುತ್ತಾರಾ? ಜೋ ಬೈಡನ್ ಮತ್ತೊಮ್ಮೆ ಅಧ್ಯಕ್ಷರಾಗಲು ಏನೆಲ್ಲಾ ರಣತಂತ್ರ ಹೆಣೆಯುತ್ತಾರೆ? ಎಲ್ಲವನ್ನ ಕಾದು ನೋಡಬೇಕಿದೆ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿರುವುದು ಸುಳ್ಳಲ್ಲ.












Click it and Unblock the Notifications