ಟ್ರಂಪ್ ಜೀವದ ಜೊತೆ ಮತ್ತೆ ಚೆಲ್ಲಾಟ? ಅಮೆರಿಕ ಮಾಜಿ ಅಧ್ಯಕ್ಷ ಜಸ್ಟ್ ಬಚಾವ್!

ಟ್ರಂಪ್ ಹಣೆಬರಹ ಗಟ್ಟಿಯಾಗಿದೆ ಅಂತಾ ಕಾಣುತ್ತೆ ಯಾಕಂದ್ರೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭ ಆಗಿದ್ದು, ನವೆಂಬರ್ 5ರಂದು ಮತದಾನ ಕೂಡ ನಡೆಯಲಿದೆ. ಪರಿಸ್ಥಿತಿ ಹೀಗಿದ್ದಾಗ ಅಮೆರಿಕದಲ್ಲಿ ಶಾಂತಿ ಕದಡಲು ದುಷ್ಟರು ಪದೇ ಪದೇ ಕುತಂತ್ರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವು ಕೇಳಿ ಬಂದಿದ್ದು, ಇಂದು ಕೂಡ ಮತ್ತೊಮ್ಮೆ ಅಂತಹದ್ದೇ ಕೃತ್ಯ ನಡೆದಿದೆ.

ಡೊನಾಲ್ಡ್ ಟ್ರಂಪ್ ಅವರ ಮೇಲೆ ಕೆಲವು ದಿನಗಳ ಹಿಂದಷ್ಟೇ ಗುಂಡಿನ ದಾಳಿ ನಡೆದಿತ್ತು. ಆಗ ಡೊನಾಲ್ಡ್ ಟ್ರಂಪ್ ಕೆಲವೇ ಸೆಂಟಿ ಮೀಟರ್ ಅಂತರದಲ್ಲಿ ಜೀವ ಉಳಿಸಿಕೊಂಡರು. ಆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ತಲೆಗೆ ಬೀಳಬೇಕಿದ್ದ ಗುಂಡು, ಟ್ರಂಪ್ ಅವರ ಕಿವಿ ಬಳಿ ಹಾದು ಹೋಗಿತ್ತು. ಆಗ ತಕ್ಷಣ ಅಲರ್ಟ್ ಆಗಿದ್ದ ಡೊನಾಲ್ಡ್ ಟ್ರಂಪ್ ಕೆಳಗೆ ಕೂತು ತಮ್ಮ ಜೀವ ಉಳಿಸಿಕೊಂಡಿದ್ದರು. ಈ ಘಟನೆ ನಡೆದು ಕೆಲವೇ ಕೆಲವು ದಿನಗಳು ಕಳೆದಿವೆ ಅಷ್ಟೇ, ಅಷ್ಟರಲ್ಲೇ ಮತ್ತೊಮ್ಮೆ ಟ್ರಂಪ್ ಅವರನ್ನ ಹತ್ಯೆ ಮಾಡಲು ಪ್ರಯತ್ನ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

Allegedly The Donald Trump Faced One More Assassination Attempt

ಡೊನಾಲ್ಡ್ ಟ್ರಂಪ್ ಜಸ್ಟ್ ಮಿಸ್?

ಅಮೆರಿಕದಲ್ಲಿ ಗನ್ & ಪಿಸ್ತೂಲ್ ಕಡಲೆಪುರಿ ರೀತಿ ಮಾರಾಟ ಆಗುತ್ತವೆ, ಇದೇ ಕಾರಣದಿಂದ ಆ ದೇಶದಲ್ಲಿ ಪದೇ ಪದೇ ಗುಂಡಿನ ದಾಳಿಗಳು ನಡೆಯುತ್ತವೆ ಎಂಬ ಆರೋಪ ಕೇಳಿಬರುತ್ತೆ. ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್ ಅವರು ಇಂದು ತಮ್ಮದೇ ಗಾಲ್ಫ್ ಕೋರ್ಟ್‌ನಲ್ಲಿ ಆಟ ಆಡುತ್ತಿದ್ದರು. ಈ ಸಮಯಕ್ಕೆ ದಿಢೀರ್ ಒಬ್ಬ ಆಗಂತುಕ ಪೊದೆಯಿಂದ ಗನ್ ಹಿಡಿದು ಹೊರಗೆ ಬರುವ ದೃಶ್ಯಗಳು ಕಂಡಿವೆ.

ಫ್ಲೊರಿಡಾ ರಾಜ್ಯದಲ್ಲಿ ಟ್ರಂಪ್ ಮೇಲೆ ಇದೀಗ ಮತ್ತೊಮ್ಮೆ ಗುಂಡಿನ ದಾಳಿಗೆ ಯತ್ನಿಸಲಾಗಿದೆ. ಆಗ ತಕ್ಷಣ ಅಲರ್ಟ್ ಆದ ಗುಪ್ತಚರ ದಳದ ಸಿಬ್ಬಂದಿ, ದೂರದಿಂದಲೇ ಎಲ್ಲವನ್ನ ಗಮನಿಸಿ ಆಗಂತುಕನ ಮೇಲೆ ಗುಂಡು ಹಾರಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಗಾಲ್ಫ್ ಆಡುತ್ತಿದ್ದಾಗ ಕೇವಲ 400-500 ಮೀಟರ್ ದೂರದಲ್ಲಿ ಇದ್ದ ಆಗಂತುಕ, ತನ್ನ ಕೈಯಲ್ಲಿ ಎಕೆ-47 ಗನ್ ಹಿಡಿದು ಗಾಲ್ಫ್ ಕೋರ್ಟ್‌ನಲ್ಲಿ ಟ್ರಂಪ್ ಇದ್ದ ಜಾಗದ ಕಡೆಗೆ ಬರುತ್ತಿದ್ದ, ಎಂದು ಆರೋಪಿಸಲಾಗಿದೆ. ಆ ತಕ್ಷಣವೇ ಅಲರ್ಟ್ ಆದ ಡೊನಾಲ್ಡ್ ಟ್ರಂಪ್ ಅವರ ಗುಪ್ತ ದಳದ ಸಿಬ್ಬಂದಿ ಆಗಂತುಕನ ಹೆಣ ಬೀಳಿಸಿದ್ದಾರೆ.

ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು

ಘಟನೆ ಬೆನ್ನಲ್ಲೇ ಅಮೆರಿಕದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಹೀಗಾಗಿ ತಮ್ಮ ಜೀವಕ್ಕೆ ಯಾವುದೇ ಆಪತ್ತು ಇಲ್ಲ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಕುರಿತಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಅಮೆರಿಕದ ಬೆಂಬಲಿಗರ ಪ್ರೀತಿಯನ್ನ ಕೊಂಡಾಡಿದ್ದಾರೆ. ಮತ್ತೊಂದು ಕಡೆ ಘಟನೆ ನಡೆದ ಸ್ಥಳದಲ್ಲಿ ತನಿಖಾಧಿಕಾರಿ ಪಡೆ ಈಗ ತಳವೂರಿದ್ದು, ಟ್ರಂಪ್ ಅವರನ್ನ ಸುರಕ್ಷಿತ ಸ್ಥಳಕ್ಕೆ ಕಳಿಸಿ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+