Russia & Ukraine: ಉಕ್ರೇನ್ ಮನೆ ದೀಪ ಆರಿಸಿದ ರಷ್ಯಾ ಸೇನೆ? ಮತ್ತಷ್ಟು ಜೋರಾಗುತ್ತಿದೆ ಜಗಳ...
ಕೊಡು.. ಕೊಡು.. ಕೊಡು.. ಅಂತಾ ಉಕ್ರೇನ್‌ಗೆ ಇದೀಗ ರಷ್ಯಾ ಮಿಲಿಟರಿ ಏಟು ಕೊಡ್ತಾ ಇದೆ. ಕಳೆದ ಎರಡೂವರೆ ವರ್ಷಗಳಿಂದ ಹೀಗೆ ಉಕ್ರೇನ್ ವಿರುದ್ಧ ಭೀಕರ ದಾಳಿ ಮಾಡುತ್ತಾ ಇದ್ದರೂ ರಷ್ಯಾಗೆ ನೆಮ್ಮದಿ ಸಿಕ್ಕಿಲ್ಲ ಅಂತಾ ಕಾಣುತ್ತಿದೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಹೀಗೆ ಉಕ್ರೇನ್ ವಿರುದ್ಧ ದಾಳಿ ಮಾಡುತ್ತಾ ರಷ್ಯಾ ಅಟ್ಟಾಡಿಸಿಕೊಂಡು ಬಾರಿಸುತ್ತಿದೆ. ಹೀಗಿದ್ದಾಗ, ಉಕ್ರೇನ್ ಮನೆ ದೀಪ ಆರಿಸಿದ ರಷ್ಯಾ ಸೇನೆ? ಎಂಬ ಪ್ರಶ್ನೆ ಮೂಡಿದೆ. ಹಾಗಾದ್ರೆ ಈ ಪ್ರಶ್ನೆಗೆ ಉತ್ತರ ಹುಡುಕೋಣ ಬನ್ನಿ.
2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ VS ಉಕ್ರೇನ್ ಯುದ್ಧ, ಈಗಲೂ ಹೊತ್ತಿ ಉರಿಯುತ್ತಿದೆ. ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಡೆಡ್ಲಿ ವಾರ್ ತಣ್ಣಗಾಗಿಲ್ಲ. ಈ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿ ಶತ್ರು ಮೇಲೆ ಎರಗುತ್ತಿದೆ. ಆ ಕಡೆ ಉಕ್ರೇನ್ ಸೇನೆ ಕೈಯಲ್ಲಿ ಕಾಸಿಲ್ಲದೆ ನರಳುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ಎರಡು ಮುಕ್ಕಾಲು ವರ್ಷದಲ್ಲಿ ಅಮೆರಿಕದಿಂದ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯ ಸಿಕ್ಕಿದೆ. ಹೀಗಿದ್ದರೂ ಉಕ್ರೇನ್ ಇನ್ನೂ ಸುಧಾರಿಸಿಕೊಂಡಿಲ್ಲ. ಇಂತಹ ಸಮಯದಲ್ಲಿ ರಷ್ಯಾ ಮತ್ತೊಮ್ಮೆ ಭೀಕರ ಅಟ್ಯಾಕ್ ನಡೆಸಿ, ಉಕ್ರೇನ್ ವಿದ್ಯುತ್ ಮೂಲಗಳಿಗೆ ಬಾಂಬ್ ಹಾಕುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ರಷ್ಯಾ ದಾಳಿಗೆ ಉಕ್ರೇನ್ ಶೇಕ್!
ಉಕ್ರೇನ್ ಸೇನೆಯ ಬುಡ ಅಲುಗಾಡಿಸಲು ರಷ್ಯಾ ಪ್ರತಿಬಾರಿ ಕೂಡ ವಿಚಿತ್ರ ವಿಚಿತ್ರ ಐಡಿಯಾ ಹುಡುಕುತ್ತದೆ. ಈ ಬಾರಿ ಉಕ್ರೇನ್‌ನ ಪ್ರಮುಖ ವಿದ್ಯುತ್ ಸಂಪರ್ಕ ಜಾಲವನ್ನೇ ಧೂಳ್ ಧೂಳ್ ಮಾಡಿರುವ ರಷ್ಯಾ ಸೇನೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ಬಾಂಬ್ ಇಟ್ಟು ಉಡಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಉಕ್ರೇನ್ ರಾಜಧಾನಿ ಕೀವ್ ಮೇಲೆ ಡ್ರೋನ್‌ಗಳ ದಾಳಿ ತೀವ್ರವಾಗಿದ್ದು, ರಷ್ಯಾ ಬಳಿ ಇರುವ ಕ್ಷಿಪಣಿ ವ್ಯವಸ್ಥೆ ಕಂಡು ಉಕ್ರೇನ್ ಕಂಗಾಲಾಗಿ ಹೋಗಿದೆ. ಇದೇ ಕಾರಣಕ್ಕೆ ರಷ್ಯಾ ಹಾರಿಸಿದ್ದ ಕ್ಷಿಪಣಿಗಳನ್ನು ಹೊಡೆದು ಉರುಳಿಸಲು ಈಗ ಉಕ್ರೇನ್ ರಕ್ಷಣಾ ಪಡೆಗಳು 5 ಗಂಟೆ ಪರದಾಡಿವೆ ಎನ್ನಲಾಗಿದೆ.
20ಕ್ಕೂ ಹೆಚ್ಚು ಕಾರುಗಳು ಉಡೀಸ್?
ರಷ್ಯಾ ದಿಢೀರ್ ಹೀಗೆ ಉಕ್ರೇನ್ ವಿರುದ್ಧ ನಡೆಸಿರುವ ದಾಳಿಯಲ್ಲಿ ಇಬ್ಬರಿಗೆ ಗಂಭೀರ ಗಾಯ ಆಗಿದೆ. ಆದರೆ ಈವರೆಗೂ ಸಾವಿನ ಬಗ್ಗೆ ಯಾವುದೇ ವರದಿ ಆಗಿಲ್ಲ. ಮತ್ತೊಂದು ಕಡೆ ಈ ದಾಳಿಗೆ ಹಲವು ಕಟ್ಟಡಗಳು ಹಾನಿಯಾಗಿದ್ದು, 20 ಕಾರುಗಳಿಗೆ ಹಾನಿಯಾಗಿದೆ ಎಂದು ಕೀವ್ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ 6 ಕ್ಷಿಪಣಿಗಳು ಮತ್ತು 78 ಡ್ರೋನ್‌ಗಳ ಮೂಲಕ ದಾಳಿ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಉಕ್ರೇನ್ ಸೇನಾಧಿಕಾರಿಗಳು ಇದೀಗ ಎಲ್ಲೆಲ್ಲೂ ಅಲರ್ಟ್ ಘೋಷಣೆ ಮಾಡಿದ್ದು, ಗಡಿ ಭಾಗದಲ್ಲಿ ಕೂಡ ಹೆಚ್ಚಿನ ನಿಗಾ ವಹಿಸಿದ್ದಾರೆ. ಹೀಗಿದ್ದರೂ ರಷ್ಯಾ ಮಾತ್ರ ತುಂಬಾ ಸುಲಭವಾಗಿ ಉಕ್ರೇನ್‌ನ ಒಳಗೆ ನುಗ್ಗಿ ದಾಳಿ ಮಾಡುತ್ತಿದೆ.












Click it and Unblock the Notifications