ಉಕ್ರೇನ್ ಡ್ಯಾಂ ಢಮಾರ್! ಡೆಡ್ಲಿ ಬಾಂಬ್ ಹಾಕಿದ್ದು ರಷ್ಯಾನಾ?
ಖೆರ್ಸನ್: ಉಕ್ರೇನ್ ನೆಲದಲ್ಲಿ ರಕ್ತಪಾತದ ಜೊತೆಗೆ ಭೀಕರ ಯುದ್ಧಕ್ಕೂ ರಣಕಹಳೆ ಮೊಳಗಿದೆ. ಶತ್ರು ಸರ್ವನಾಶಕ್ಕೆ ತೊಡೆತಟ್ಟಿ ರೊಚ್ಚಿಗೆದ್ದಿರುವ ರಷ್ಯಾ ಪಡೆಗಳು, ಉಕ್ರೇನ್‌ನ ಬೃಹತ್ ಡ್ಯಾಂ ಬ್ಲಾಸ್ಟ್ ಮಾಡಿದ ಆರೋಪ ಕೇಳಿಬಂದಿದೆ. ಹೀಗಾಗಿ ಉಕ್ರೇನ್‌ನ ನೂರಾರು ಹಳ್ಳಿಗಳು ದಿಢೀರ್ ನುಗ್ಗಿಬಂದ ಪ್ರವಾಹದಲ್ಲಿ ಮುಳುಗಿ ಹೋಗಿದ್ದು, ಲಕ್ಷಾಂತರ ಜನರ ಜೀವನ ಅತಂತ್ರವಾಗಿದೆ.
ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಈ ಜಲಾಶಯ ಸೋವಿಯತ್ ಕಾಲದ ನಿರ್ಮಾಣ ಮಾಡಿದ್ದರು. ಈಗಾಗಲೇ ಹತ್ತಾರು ವರ್ಷಗಳ ಆಯಸ್ಸು ಮುಗಿಸಿದ್ದ ಡ್ಯಾಂಗೆ ರಷ್ಯಾ ಸೇನೆ ಕುತ್ತು ತಂದಿರುವ ಆರೋಪ ಕೇಳಿಬಂದಿದೆ. 1956ರ ನಿರ್ಮಾಣವಾಗಿದ್ದ ಊ ಡ್ಯಾಂಗೆ ಭಾರಿ ಪ್ರಮಾಣದ ಸ್ಫೋಟಕ ಇಟ್ಟು ಬ್ಲಾಸ್ಟ್ ಮಾಡಲಾಗಿದ್ದು, ರಷ್ಯಾ ಮಾತ್ರ ನಾನು ಇಂತಹ ಕೆಲಸ ಮಾಡಲ್ಲ, ಮಾಡಿಲ್ಲ ಅಂತಿದೆ. ಆದರೆ ಇವರಿಬ್ಬರ ಕಿತ್ತಾಟದಲ್ಲಿ ಲಕ್ಷಾಂತರ ಅಮಾಯಕರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ (Russia Ukraine War).

500 ಜನರ ಹತ್ಯೆ ಬಳಿಕ ಡ್ಯಾಂ ಬ್ಲಾಸ್ಟ್?
ಮೊನ್ನೆ ಮೊನ್ನೆ ತಾನೆ ರಷ್ಯಾ ಸೇನೆ ಉಕ್ರೇನ್‌ನ 500 ಸೈನಿಕರನ್ನ ಹತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಇದು ಹಸಿಯಾಗಿರುವ ಸಂದರ್ಭದಲ್ಲೇ ಮತ್ತೊಂದು ಭೀಕರ ಕೃತ್ಯ ನಡೆದಿದ್ದು, ಬ್ಲಾಸ್ಟ್ ಬಗ್ಗೆ ಉಕ್ರೇನ್ ಅಧ್ಯಕ್ಷ ರೊಚ್ಚಿಗೆದ್ದಿದ್ದಾರೆ. ಹಾಗೇ ಅಮೆರಿಕ & ಯುರೋಪ್ ಒಕ್ಕೂಟ ಕೂಡ ಈ ಘಟನೆ ಬಳಿಕ ರೊಚ್ಚಿಗೆದ್ದು, ರಷ್ಯಾ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇನ್ನೊಂದು ಕಡೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದು, ಜಗತ್ತಿಗೇ ರಷ್ಯಾ ಸೇನೆ ಕೃತ್ಯ ತೋರಿಸಲು ಮುಂದಾಗಿದ್ದಾರೆ. ಹಾಗಾದ್ರೆ ಝೆಲೆನ್ಸ್ಕಿ ಹೇಳಿದ್ದೇನು? ಮುಂದೆ ಓದಿ.
ರಷ್ಯಾಗೆ ಉಗ್ರರ ಪಟ್ಟ ಕಟ್ಟಿದ ಉಕ್ರೇನ್!
ಹೌದು ಉಕ್ರೇನ್ ಡ್ಯಾಂ ಸ್ಫೋಟದ ಬಳಿಕ ರೊಚ್ಚಿಗೆದ್ದಿರುವ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ಸೇನೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ರಷ್ಯಾ ಉಗ್ರರು ಜಲಾಶಯದ ಮೇಲೆ ದಾಳಿ ಮಾಡಿದ್ದಾರೆ. ಹೀಗೆ ಮಾಡಿದ ಮಾತ್ರಕ್ಕೆ ಉಕ್ರೇನ್ ಸೋಲುವುದಿಲ್ಲ. ಕ್ಷಿಪಣಿ, ಜಲಯುದ್ಧದಿಂದ ನಮ್ಮನ್ನು ಗೆಲ್ಲಲು ಆಗುವುದಿಲ್ಲ ಎಂದು ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಹಾಗೇ ಉಕ್ರೇನ್‌ನ ಅಧ್ಯಕ್ಷೀಯ ಆಡಳಿತದ ಮುಖ್ಯಸ್ಥ, ಡ್ಯಾಂ ಸ್ಫೋಟವನ್ನ ರಷ್ಯಾ ಪಡೆಗಳು ಮಾಡಿದ ಪರಿಸರ ಹತ್ಯೆ ಎಂದು ಕರೆದಿದ್ದಾರೆ. ಹೀಗೆ ಎರಡೂ ರಾಷ್ಟ್ರಗಳ ತಿಕ್ಕಾಟ ಮತ್ತಷ್ಟು ತಾರಕಕ್ಕೆ ಏರಿದಂತಾಗಿದೆ.
Russian terrorists. The destruction of the Kakhovka hydroelectric power plant dam only confirms for the whole world that they must be expelled from every corner of Ukrainian land. Not a single meter should be left to them, because they use every meter for terror. It’s only… pic.twitter.com/ErBog1gRhH
— Володимир Зеленський (@ZelenskyyUa) June 6, 2023
ಯಾವ ಪ್ರದೇಶಗಳು ಮುಳುಗಡೆ ಆಗಲಿವೆ?
ಇದೀಗ ಸ್ಫೋಟಗೊಂಡಿರುವ ಖೆರ್ಸನ್ ಜಲಾಶಯ ನಿರ್ಮಾಣವಾಗಿದ್ದು 1956ರಲ್ಲಿ. ಸುಮಾರು 240 ಕಿಲೋ ಮೀಟರ್ ವಿಸ್ತಾರದವರೆಗೆ ತನ್ನ ವ್ಯಾಪ್ತಿ ಹಿಗ್ಗಿಸಿಕೊಳ್ಳುತ್ತಿತ್ತು ಈ ಜಲಾಶಯ. ಈಗ ಇಂತಹ ಬೃಹತ್ ಜಲಾಶಯ ಸ್ಫೋಟಗೊಂಡಿರುವ ಪರಿಣಾಮ, ಡ್ನಿಪ್ರೊದ ಪಶ್ಚಿಮ ದಂಡೆಯಲ್ಲಿ ಬರುವ ನೂರಾರು ಹಳ್ಳಿಗಳಿಗೆ ಅಪಾಯ ಎದುರಾಗಿದೆ. ಸತತ ಹತ್ತಾರು ಗಂಟೆಗಳ ಕಾಲ ಇದೇ ರೀತಿ ಪ್ರವಾಹದಂತೆ ನೀರು ಹರಿದು ಹೋಗಲಿದ್ದು, ಅಪಾಯದಲ್ಲಿ ಇರುವ ಹಳ್ಳಿಗಳ ಜನರನ್ನು ಸ್ಥಳಾಂತರ ಮಾಡುತ್ತೇವೆ ಎಂದು ಉಕ್ರೇನ್ ತಿಳಿಸಿದೆ. ಹಾಗೇ ಡ್ಯಾಂ ಬ್ಲಾಸ್ಟ್ ಆಗುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಮಾಡಿದೆ.

ಒಂದೇ ಸೆಕೆಂಡ್‌ನಲ್ಲಿ ಡ್ಯಾಂ ಢಮಾರ್!
ಅಂದಹಾಗೆ ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಜಲಾಶಯ ಸ್ಫೋಟದ ಬಳಿಕ ಜನ ಆತಂಕದಲ್ಲೇ ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಇನ್ನೊಂದು ಕಡೆ ಕ್ಷಣಕ್ಷಣಕ್ಕೂ ಪರಿಸ್ಥಿತಿ ಕೈಮೀರುತ್ತಿದೆ. ಆದ್ರೆ ಡ್ಯಾಂ ಬ್ಲಾಸ್ಟ್ ಆಗುವ ವಿಡಿಯೋ ಜನರನ್ನ ಇನ್ನಷ್ಟು ರೊಚ್ಚಿಗೆಬ್ಬಿಸಿದೆ. ಖೆರ್ಸನ್ ಡ್ಯಾಂ ಸ್ಫೋಟಗೊಳ್ಳುವ ವಿಡಿಯೋ ಎನ್ನಲಾದ ಫುಟೇಜ್ ಒಂದು ವೈರಲ್ ಆಗುತ್ತಿದೆ. ಸಿಸಿ ಕ್ಯಾಮೆರಾ ವಿಡಿಯೋ ಪ್ರಕಾರ, ಕ್ಷಣಮಾತ್ರದಲ್ಲಿ ಸ್ಫೋಟ ಸಂಭವಿಸಿ ನೂರಾರು ಟಿಎಂಸಿ ನೀರು ಹೊರಗೆ ನುಗ್ಗುತ್ತದೆ. ನೋಡ ನೋಡುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಯಾಗಿದೆ.
#BREAKING: The moment that the Nova Kakhovka dam was blown up was purportedly captured on video. If this footage is real, it would certainly refute claims that there was no explosion. pic.twitter.com/GMaarExZEn
— Ukraine Front Lines (@EuromaidanPR) June 6, 2023
ಉಕ್ರೇನ್ ಅಧ್ಯಕ್ಷರ ಎಮರ್ಜೆನ್ಸಿ ಮೀಟಿಂಗ್!
ಡ್ಯಾಂ ಧ್ವಂಸಗೊಳಿಸಿ ಕೆಳ ಭಾಗದಲ್ಲಿದ್ದ ಉಕ್ರೇನ್ ಪಡೆಗಳ ಮೇಲೆ ದಾಳಿ ನಡೆಸಲು ರಷ್ಯಾ ಸೇನೆ ಸ್ಕೆಚ್ ಹಾಕಿತ್ತು. ಈ ಕಾರಣಕ್ಕೆ ಡ್ಯಾಂ ಬ್ಲಾಸ್ಟ್ ಮಾಡಿದೆ ರಷ್ಯಾ ಅನ್ನೋದು ಉಕ್ರೇನ್ ಸೇನೆಯ ಆರೋಪ. ಮತ್ತೊಂದ್ಕಡೆ ಡ್ಯಾಂ ಸ್ಫೋಟ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಾಷ್ಟ್ರೀಯ ಭದ್ರತೆ & ರಕ್ಷಣಾ ಮಂಡಳಿಯ ಎಮರ್ಜೆನ್ಸಿ ಮೀಟಿಂಗ್ ಕೂಡ ಕರೆದು ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಸೇಡಿನ ತವಕದಲ್ಲಿ ಇರುವ ಉಕ್ರೇನ್ ಸೇನೆ, ರಷ್ಯಾ ಮೇಲೆ ಮತ್ತೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಒಬ್ಬರಿಗೆ ಒಬ್ಬರು ಬಾಂಬ್ ಎಸೆಯುತ್ತಾ, ಸರ್ವನಾಶದ ಮುನ್ಸೂಚನೆ ನೀಡುತ್ತಿದ್ದಾರೆ.
ನ್ಯಾಟೋ ವಿಚಾರಕ್ಕೆ ಶುರುವಾಗಿದ್ದ ಯುದ್ಧ!
ಯುದ್ಧ ಶುರುವಾಗಿದ್ದು ಕೂಡ ಇದೇ ರೀತಿ, ಉಕ್ರೇನ್ ಸೇನೆಯನ್ನು ನ್ಯಾಟೋ ಒಕ್ಕೂಟಕ್ಕೆ ಅಮೆರಿಕ ಸೆಳೆಯುತ್ತಿದೆ. ಹೀಗೆ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇನೆ ಸೇರಿದರೆ ರಷ್ಯಾಗೆ ಈ ಘಟನೆಯಿಂದ ಹಿನ್ನಡೆ ಎದುರಾಗಲಿದೆ. ಇದೇ ಕಾರಣಕ್ಕೆ ಯುದ್ಧ ಸಾರಿದ್ದೇವೆ ಎಂದು ರಷ್ಯಾ ಹೇಳಿತ್ತು. ಈಗ ನೋಡಿದರೆ ಉಕ್ರೇನ್ ಅಧ್ಯಕ್ಷ ಅಮೆರಿಕದ ನಾಯಕರಿಗೆ ಮತ್ತು ಸೇನೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇದು ರಷ್ಯಾ ಅಧ್ಯಕ್ಷರಿಗೆ ಕೆಟ್ಟ ಕೋಪ ತರಿಸಿ, ಯುದ್ಧವನ್ನ ಮತ್ತಷ್ಟು ಎಳೆದಾಡುವಂತೆ ಮಾಡುತ್ತಿದೆ.

ಲಕ್ಷಾಂತರ ಅಮಾಯಕರು ಬೀದಿಗೆ
ಉಕ್ರೇನ್ ಯುದ್ಧ ಆರಂಭವಾದ ನಂತರ ಈಗಾಗಲೇ 1 ಚಳಿಗಾಲ ಕಳೆದಿದೆ. ತೀವ್ರ ಚಳಿಯ ಪ್ರದೇಶವಾದ ಉಕ್ರೇನ್ ದೇಶದಲ್ಲಿ ಚಳಿಗಾಲದಲ್ಲಿ ಮನೆ ಇದ್ರು ಬದುಕೋದು ಕಷ್ಟ ಕಷ್ಟ. ಪರಿಸ್ಥಿತಿ ಹೀಗಿದ್ದಾಗ, ಯುದ್ಧದ ಪರಿಣಾಮ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಇವರು ಬದುಕಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರದ್ದೋ ಜಗಳಕ್ಕೆ, ಇನ್ಯಾರದ್ದೋ ಪ್ರತಿಷ್ಠೆಗೆ ಲಕ್ಷಾಂತರ ಜನ ಊಟ ನಿದ್ದೆ ಇಲ್ಲದೆ ಉಕ್ರೇನ್ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ಇವರೆಲ್ಲಾ ರಷ್ಯಾ & ಉಕ್ರೇನ್ ಯುದ್ಧಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ನಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ಮತ್ತೊಂದು ಅನಗತ್ಯ ಘಟನೆ ನಡೆದೇ ಹೋಗಿದೆ. ಉಕ್ರೇನ್ ಯುದ್ಧ ಶುರುವಾದ ಸಂದರ್ಭದಲ್ಲೇ ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಜ್ಜಾಗಿ ಬಂದಂತೆ ಕಾಣುತ್ತಿದೆ. ರಷ್ಯಾದ ಯುದ್ಧ ತಂತ್ರ & ಉಕ್ರೇನ್ ವಿರುದ್ಧ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವ ರೀತಿ ನೋಡಿದರೆ ಸಾಕು ಅನುಮಾನ ಬಾರದೆ ಇರದು. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಸೇನೆಯೇ ತನ್ನ ಡ್ಯಾಂ ಮೇಲೆ ದಾಳಿ ಮಾಡಿದೆ ಅನ್ನೋದು ಉಕ್ರೇನ್ ಆರೋಪ. ಆದರೆ ರಷ್ಯಾ ಪಡೆಗಳು ಈ ಆರೋಪವನ್ನ ನಿರಾಕರಿಸುತ್ತಿವೆ. ಹೀಗಾಗಿ ಪರಿಸ್ಥಿತಿ ಕಗ್ಗಂಟಾಗಿ ಉಳಿದುಬಿಟ್ಟಿದೆ.












Click it and Unblock the Notifications