Russia & Ukraine War: ದಿವಾಳಿ ಭೀತಿಯಲ್ಲಿ ರಷ್ಯಾ ವಿಮಾನಯಾನ ಸಂಸ್ಥೆಗಳು? ಕಾರಣ ತಿಳಿಯಿರಿ

ರಷ್ಯಾ & ಉಕ್ರೇನ್ ನಡುವೆ ಹೊತ್ತಿರುವ ಬೆಂಕಿ ಆರುತ್ತಿಲ್ಲ. ಸುಮಾರು 1,000 ದಿನಗಳಿಂದ ತೀವ್ರವಾಗಿ ಬಡಿದಾಡುತ್ತಾ, ಒದ್ದಾಡುತ್ತಿರುವ ರಷ್ಯಾ & ಉಕ್ರೇನ್ ದೊಡ್ಡ ವಿನಾಶದ ಕಡೆಗೆ ಹೆಜ್ಜೆ ಹಾಕುತ್ತಿವೆ ಎಂಬ ಗಂಭೀರ ಆರೋಪ ಇದೆ. ಇಂತಹ ಆರೋಪಗಳ ನಡುವೆ ರಷ್ಯಾದ ವಿಮಾನಯಾನ ಸಂಸ್ಥೆಗಳ ಬಗ್ಗೆ ಸ್ಫೋಟಕ ಮಾಹಿತಿ ಒಂದು ಓಡಾಡುತ್ತಿದೆ. ಹಾಗಾದ್ರೆ ಈಗ ರಷ್ಯಾದ ವಿಮಾನಯಾನ ಸಂಸ್ಥೆಗಳಿಗೆ ಆಗಿರುವುದು ಏನು? ಬನ್ನಿ ತಿಳಿಯೋಣ.

ಉಕ್ರೇನ್ ವಿರುದ್ಧ ರಷ್ಯಾ ಸೇನೆ ಯುದ್ಧ ಘೋಷಣೆ ಮಾಡಿದ ನಂತರ, ತನ್ನ ಶಕ್ತಿ ಮೀರಿ ಎಲ್ಲ ರೀತಿ ಎಫರ್ಟ್ ಹಾಕಿ ಹೋರಾಟ ನಡೆಸುತ್ತಿದೆ. ಹೀಗೆ ರಷ್ಯಾ ಈಗಾಗಲೇ ಲಕ್ಷಾಂತರ ಸೈನಿಕರನ್ನ ಕಳೆದುಕೊಂಡು ಪರದಾಡುತ್ತಿದೆ ಎಂಬ ಅರೋಪಗಳು ಕೂಡ ಇವೆ. ಹೀಗಿದ್ದಾಗ ರಷ್ಯಾದಲ್ಲಿ ಪ್ರವಾಸೋದ್ಯಮ ನೆಲಕಚ್ಚಿದ್ದು, ಪಾಶ್ಚಿಮಾತ್ಯ ದೇಶಗಳ ಜೊತೆಗಿನ ಬಾಂಧವ್ಯ ಕೂಡ ಪೂರ್ತಿ ಹಾಳಾಗಿ ಹೋಗುತ್ತಿದೆ. ಇಷ್ಟೆಲ್ಲದರ ಪರಿಣಾಮ ಇದೀಗ ರಷ್ಯಾದ ವಿಮಾನಯಾನ ಸಂಸ್ಥೆಗಳು ಸಾಲದ ಸುಳಿಗೆ ಸಿಲುಕಿ...

Allegedly Russian Airlines Face Potential Bankruptcy After The War Against Ukraine

ಯುದ್ಧದ ನಂತರ ಭಾರಿ ಸಂಕಷ್ಟ!

ಉಕ್ರೇನ್ & ರಷ್ಯಾ ನಡುವೆ ಯುದ್ಧ ಶುರುವಾದ ನಂತರ ಒಂದು ಕಡೆ ಉಕ್ರೇನ್ ದೇಶದಲ್ಲಿ, ಭಾರಿ ಪ್ರಮಾಣದ ವಿನಾಶಕಾರಿ ಬಾಂಬ್‌ಗಳು ಬೀಳುತ್ತಿವೆ. ಇದರ ಪರಿಣಾಮ ಉಕ್ರೇನ್ ನೆಲ ನಾಶವಾಗಿ ಹೋಗ್ತಿದೆ. ಮತ್ತೊಂದು ಕಡೆ ರಷ್ಯಾ ದೇಶದಲ್ಲಿ ಇರುವ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಪ್ರವಾಸೋದ್ಯಮ ನಂಬಿ ಬದುಕು ಕಟ್ಟಿಕೊಂಡ ಹಲವು ಸಂಸ್ಥೆಗಳು ಈಗ ದಿವಾಳಿ ಆಗುವ ಹಂತ ತಲುಪಿವೆ ಎನ್ನಲಾಗಿದೆ.

ರಷ್ಯಾ ವಿರುದ್ಧ ನಿಷೇಧ ಅಸ್ತ್ರ!

ಉಕ್ರೇನ್ ವಿರುದ್ಧ ಯುದ್ಧ ಶುರುವಾದ ನಂತರ ರಷ್ಯಾ ಹಲವಾರು ಸಂಕಷ್ಟ ಎದುರಿಸುತ್ತಿದ್ದು, ಪರಿಸ್ಥಿತಿ ಕೂಡ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದೆ. ರಷ್ಯಾ ದೇಶದಲ್ಲಿ ಈ ಯುದ್ಧಕ್ಕೂ ಮೊದಲು ಪ್ರವಾಸೋದ್ಯಮ ತುಂಬಾ ಚನ್ನಾಗಿ ನಡೆಯುತ್ತಿತ್ತು. ಆದರೆ ಉಕ್ರೇನ್ ವಿರುದ್ಧದ ಯುದ್ಧ ಶುರುವಾದ ನಂತರ ರಷ್ಯಾ ವಿರುದ್ಧ ಸಾಕಷ್ಟು ನಿಷೇಧ ವಿಧಿಸಲಾಗಿದೆ. ಹೀಗಿದ್ದಾಗ ರಷ್ಯಾಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಕೂಡ ಕುಸಿದು ಬಿದ್ದಿದ್ದು, ರಷ್ಯಾ ಮೂಲದ 30ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುವ ಭೀತಿ ಆವರಿಸಿದೆ.

ಒಟ್ನಲ್ಲಿ ಉಕ್ರೇನ್ ವಿರುದ್ಧದ ಯುದ್ಧ ರಷ್ಯಾಗೆ ಸಾಕಷ್ಟು ರೀತಿಯಲ್ಲಿ ಸಮಸ್ಯೆ ನೀಡುತ್ತಿದ್ದು, ಹಲವು ರೀತಿಯಲ್ಲಿ ಕೈಸುಟ್ಟುಕೊಂಡು ನರಳುತ್ತಿದೆ ರಷ್ಯಾ. ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಮುಳುಗಿ ಹೋಗುತ್ತಿರುವ ರಷ್ಯಾ ವಿಮಾನ ಸಂಸ್ಥೆಗಳಿಗೆ ಮರುಜೀವ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+