Ukraine: ಉಕ್ರೇನ್ ಸೇನೆಗೆ ಮತ್ತೊಂದು ಆಘಾತ ನೀಡಿದ ರಷ್ಯಾ, ಮತ್ತಷ್ಟು ಹಳ್ಳಿಗಳು ವಶಕ್ಕೆ!
ರಷ್ಯಾ ಸೇನೆ ಉಕ್ರೇನ್ ವಿರುದ್ದ ತನ್ನ ರಣಭೀಕರ ದಾಳಿ ಮುಂದುವರಿಸಿದ್ದು, ಈ ರೀತಿ ನಡೆಸುತ್ತಿರುವ ದಾಳಿ ಪರಿಣಾಮ ಈಗಾಗಲೇ ನೂರಾರು ಅವಾಂತರ ಎದುರಾಗಿವೆ. ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 3.5 ವರ್ಷಗಳೇ ಕಂಪ್ಲೀಟ್ ಆಗಿದೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ ಒಂದೆರಡು ದಿನಗಳಲ್ಲಿ ಯುದ್ಧ ನಿಲ್ಲಲಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 3.5 ವರ್ಷ ಮುಗಿಸಿ ಮುಂದೆ ನುಗ್ಗುತ್ತಿದೆ. ಇಂತಹ ಸಮಯದಲ್ಲೇ ರಷ್ಯಾ ಸೇನೆ ಮತ್ತೊಂದು ಶಾಕ್ ಕೊಟ್ಟಿದೆ!
ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಭೀಕರವಾಗಿದ್ದು, ಎಲ್ಲೆಲ್ಲೂ ರಕ್ತವನ್ನೇ ಚೆಲ್ಲಾಡುವಂತೆ ಮಾಡಿದೆ. ಹೀಗೆ ರಷ್ಯಾ & ಉಕ್ರೇನ್ ರಣಭೀಕರ ಕಾಳಗ ದಿನದಿಂದ ದಿನಕ್ಕೆ ಭಯಾನಕ ಸ್ವರೂಪ ಪಡೆಯುತ್ತಾ ಸಾಗಿರುವ ಸಮಯದಲ್ಲೇ ಕೋಟ್ಯಂತರ ಜನ ನರಳಿ ಹೋಗಿದ್ದಾರೆ. ಉಕ್ರೇನ್ ಮಿಲಿಟರಿಯ ವಿರುದ್ಧ ರಷ್ಯಾ ರಿವೇಂಜ್ ತೆಗೆದುಕೊಳ್ಳುತ್ತಿದೆ ಅಂತಾ ಹೇಳುವಾಗಲೇ ಇದೀಗ ಉಕ್ರೇನ್ ಸೇನೆ ತನ್ನ ದೇಶದ ಇನ್ನಷ್ಟು ಜಾಗ ಕಳೆದುಕೊಂಡು ನರಳುತ್ತಿದೆ. ಅದರಲ್ಲೂ ತನ್ನದೇ ನೆಲದ, ಸಂಪೂರ್ಣ ಮಧ್ಯಭಾಗದ ಮೇಲೂ ಉಕ್ರೇನ್ ಸೇನೆ ನಿಯಂತ್ರಣ ಕಳೆದುಕೊಂಡಿದೆಯಾ?

ಯುದ್ಧ... ಯುದ್ಧ... ಯುದ್ಧ...
ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ ನೀಡಿದ್ದಂತೆ, ಉಕ್ರೇನ್ ವಿರುದ್ಧ ಈಗ ನಡೆಯುತ್ತಿರುವ ಘೋರ ಯುದ್ಧ ಯಾವುದೇ ಕಾರಣಕ್ಕೆ ನಿಲ್ಲಲ್ಲ. ಅದರಲ್ಲೂ ಅಮೆರಿಕ & ನ್ಯಾಟೋ ಜೊತೆ ಸೇರಲು ಹೊರಟಿದ್ದ ಇದೇ ಉಕ್ರೇನ್‌ಗೆ ಯಾವುದೇ ರೀತಿ ವಿನಾಯಿತಿ ಇರಲ್ಲ ಎಂದು ಪುಟಿನ್ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿ ಮಾಡಿತ್ತು. ಹೀಗಾಗಿಯೇ, ರಷ್ಯಾದ ಸೇನೆ ತನ್ನ ನೆಲದ ಮೇಲೆ ಹಾರಿಸಿದ ಡ್ರೋನ್‌ಗಳನ್ನು ನಿಯಂತ್ರಣ ಮಾಡುವುದೇ ಉಕ್ರೇನ್ ಸೇನೆಗೆ ದೊಡ್ಡ ಕೆಲಸವಾಗಿ ಹೋಗಿದೆ. ಇಷ್ಟೆಲ್ಲಾ ಕೆಲಸದ ನಡುವೆ ಮತ್ತಷ್ಟು ದಾಳಿ ನಡೆಸಿರುವ ರಷ್ಯಾ ಸೇನೆ ಈಗ, ಉಕ್ರೇನ್ ನೆಲದಲ್ಲಿ ಇನ್ನಷ್ಟು ಅವಾಂತರ ಸೃಷ್ಟಿ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ.












Click it and Unblock the Notifications