3rd World War: ಪರಮಾಣು ಅಸ್ತ್ರ ಬಳಸಲು ಸಿದ್ಧವಾಗಿದೆಯಾ ರಷ್ಯಾ?

ಒಂದು ಕಡೆ ಉಕ್ರೇನ್ ತಾನು ಕಳೆದುಕೊಂಡ ಪ್ರದೇಶಗಳನ್ನು ಒಂದೊಂದಾಗಿ ಮತ್ತೆ ತನ್ನ ವಶಕ್ಕೆ ಪಡೆಯುತ್ತಿದೆ. ಹೀಗಾಗಿ ರಷ್ಯಾ ಯುದ್ಧದಲ್ಲಿ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಈ ಸಂದರ್ಭದಲ್ಲೇ ಅಮೆರಿಕ ಮತ್ತು ನ್ಯಾಟೋ ದೇಶಗಳು ಉಕ್ರೇನ್ ಬೆನ್ನಿಗೆ ನಿಂತಿವೆ. ಇದೆಲ್ಲ ನೋಡಿ ನೋಡಿ ರೊಚ್ಚಿಗೆದ್ದಿರುವ ರಷ್ಯಾ ಭೀಕರ ದಾಳಿಗೆ ಸಿದ್ಧವಾಗಿದೆಯಾ? ಎಂಬ ಭಯ ಆವರಿಸಿದೆ. ಇದೇ ಸಂದರ್ಭದಲ್ಲಿ 3ನೇ ಮಹಾಯುದ್ಧ ಮಾತುಗಳು ಕೂಡ ಕೇಳಿಬಂದಿವೆ.

ಇಂತಹ ಒಂದು ಅನುಮಾನ ಜಾಗತಿಕ ಸಮುದಾಯವನ್ನು ಗಟ್ಟಿಯಾಗಿ ಕಾಡುತ್ತಿದೆ. ರಷ್ಯಾ ತನ್ನ ಪ್ರದೇಶಗಳನ್ನ ಒಂದೊಂದಾಗಿ ಕಳೆದುಕೊಂಡು, ಆಕ್ರೋಶ ಹೊರಹಾಕುತ್ತಿರುವ ವೇಳೆ ಆತಂಕ ಕಾಡ್ತಿದೆ. ಏಕೆಂದರೆ ರಷ್ಯಾ ಈಗಾಗಲೇ ಭಾರಿ ಪ್ರಮಾಣದ ಪರಮಾಣು ಅಸ್ತ್ರವನ್ನು ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿದೆ. ರಷ್ಯಾ ದೋಸ್ತ್ ಬೆಲಾರಸ್ ಗಡಿಯಲ್ಲಿ ಎಲ್ಲಾ ಪರಮಾಣು ಅಸ್ತ್ರಗಳನ್ನ ಸಾಲಾಗಿ ನಿಲ್ಲಿಸಿರುವ ವೇಳೆ ಹೊಸ ಭಯ ಆವರಿಸಿದೆ. ಅಕಸ್ಮಾತ್ ಈ ಭಯ ನಿಜವಾದರೆ ಜಗತ್ತು 3ನೇ ಮಹಾಯುದ್ಧದ ಭೀತಿಯಲ್ಲಿ ಸಿಲುಕುವುದು ಪಕ್ಕಾ.

big-counter-attack-against-ukraine

ರಷ್ಯಾ ಕೈಯಲ್ಲಿದ್ದ ಜಾಗ ಉಕ್ರೇನ್‌ಗೆ

ಅಷ್ಟಕ್ಕೂ ಭೀಕರ ಯುದ್ಧವು ಶುರುವಾಗಿ ಒಂದೂವರೆ ವರ್ಷ ಕಳೆದಿದ್ದು, ಉಕ್ರೇನ್ ತನ್ನ ಕೈಯಿಂದ ಸಾಕಷ್ಟು ಜಾಗಗಳನ್ನ ಕಳೆದುಕೊಂಡಿತ್ತು. ಅದರಲ್ಲೂ ಕ್ರಿಮಿಯಾ ಸುತ್ತಮುತ್ತ ಇರುವ ಪ್ರದೇಶಗಳನ್ನು ಕಳೆದುಕೊಂಡು ಪರದಾಡಿತ್ತು. ಆದರೆ ಕೆಲ ದಿನಗಳಿಂದ ಉಕ್ರೇನ್ ಸೇನೆ ಮತ್ತೆ ತನ್ನ ಪ್ರದೇಶಗಳನ್ನು ವಾಪಸ್ ಪಡೆಯುತ್ತಿದೆ. ಹೀಗಾಗಿ ಭಯ ಆವರಿಸುತ್ತಿದೆ. ರಷ್ಯಾ ಈಗ ಉಕ್ರೇನ್ ವಿರುದ್ಧ ಉಗ್ರ ದಾಳಿ ನಡೆಸಲಿದೆ ಎಂಬ ಭಯವೂ ಕಾಡುತ್ತಿದೆ. ಈ ಪೈಕಿ ಪರಮಾಣು ದಾಳಿ ಭೀತಿ ಯುರೋಪ್ ಎದೆ ನಡುಗಿಸಿದೆ.

ಬೆಲಾರಸ್ ಗಡಿಯಲ್ಲಿ ರಷ್ಯಾಗೆ ಸೇರಿದ ಭಾರಿ ಪ್ರಮಾಣದ ಪರಮಾಣು ಅಸ್ತ್ರಗಳು ನಿಂತಿವೆ. ಬೆಲಾರಸ್‌ನಲ್ಲಿ ರಷ್ಯಾ ಪರಮಾಣು ಶಸ್ತ್ರಾಸ್ತ್ರ ನಿಯೋಜಿಸುವ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿ, ತೊಡೆತಟ್ಟಿತ್ತು. ಆದರೆ ಅಮೆರಿಕ ಅದೆಂತಹ ಮಾತನ್ನೇ ಹೇಳಿದರೂ ರಷ್ಯಾ ತಿರುಗೇಟು ನೀಡಿ ಹಠ ಸಾಧಿಸಿತ್ತು. ಈ ಮೂಲಕ ಅಮೆರಿಕ ಎಚ್ಚರಿಕೆಗೆ ಡೋಂಟ್ ಕೇರ್ ಅಂದಿತ್ತು. ಬೆಲಾರಸ್ ಗಡಿಯಿಂದ ಕೇವಲ 200 ಕಿಲೋ ಮೀಟರ್ ದೂರದಲ್ಲಿ ಉಕ್ರೇನ್‌ನ ಕೀವ್ ರಾಜಧಾನಿ ಇದ್ದು, ರಷ್ಯಾ ರೊಚ್ಚಿಗೆದ್ದು ಪರಮಾಣು ಅಸ್ತ್ರ ಬಳಸಿದರೆ ಮುಂದಿನ ಕಥೆ ಏನು? ಎಂಬ ಅತಂಕ ಯುರೋಪ್ ರಾಷ್ಟ್ರಗಳಲ್ಲಿ ಮನೆ ಮಾಡಿದೆ.

big-counter-attack-against-ukraine

ಉಡಾಯಿಸಿದ ರಷ್ಯಾ ಟ್ಯಾಂಕರ್ ಪ್ರದರ್ಶನ!

ಈಗಾಗಲೇ ರಷ್ಯಾಗೆ ಸೇರಿದ ನೂರಾರು ಟ್ಯಾಂಕರ್‌ಗಳನ್ನು ತಾನು ಧ್ವಂಸ ಮಾಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉಕ್ರೇನ್‌ನ ರಾಜಧಾನಿಯಲ್ಲಿ ರಷ್ಯಾ ಸೇನೆಗೆ ಸೇರಿದ ಯುದ್ಧ ಟ್ಯಾಂಕರ್‌ಗಳನ್ನ ಪ್ರದರ್ಶನ ಮಾಡಲಾಗಿದೆ. ಛಿದ್ರ ಛಿದ್ರವಾಗಿರುವ ರಷ್ಯಾ ಟ್ಯಾಂಕರ್‌ಗಳ ಎದುರಿಗೆ ಉಕ್ರೇನ್ ನಾಗರಿಕರು ಸೆಲ್ಫಿ ತೆಗೆದುಕೊಂಡು ನಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹೀಗೆ ರಷ್ಯಾ ವಿರುದ್ಧ ಉಕ್ರೇನ್ ರಿವೇಂಜ್ ತೆಗೆದುಕೊಳ್ಳುತ್ತಿದೆ. ಆದ್ರೆ ಭಯ ಇದಲ್ಲ, ಪರಮಾಣು ಬಾಂಬ್‌ಗಳದ್ದು.

ರಷ್ಯಾ ಬಳಿ ಇದೆ ಭಯಾನಕ ಅಸ್ತ್ರಗಳು

ಎಸ್-400 ಎಂಬ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಶತ್ರು ದೇಶಗಳನ್ನ ಇನ್ನಿಲ್ಲದಂತೆ ಕಾಡುತ್ತೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಯುದ್ಧದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿತ್ತು. ಆದರೆ ಡ್ರೋನ್ ದಾಳಿ ಮೂಲಕ ರಷ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಉಕ್ರೇನ್ ಯತ್ನಿಸಿತ್ತು. ಇದೆಲ್ಲಾ ನಡೆಯದ ಕಾರಣ ಅಮೆರಿಕ ಮತ್ತು ನ್ಯಾಟೋ ದೇಶಗಳು ನೀಡಿದ್ದ ಅತ್ಯಾಧುನಿಕ ಅಸ್ತ್ರಗಳ ನೆರವಿನಿಂದ ಮುನ್ನುಗ್ಗುತ್ತಿದೆ.

ಈಗ ಹೊಸ ಹುಮ್ಮಸ್ಸಿನಲ್ಲಿ ತಾನು ಕಳೆದುಕೊಂಡಿದ್ದ ಜಾಗಗಳನ್ನ ಮತ್ತೆ ವಶಕ್ಕೆ ಪಡೆದಿದೆ ಉಕ್ರೇನ್. ಇದಿಷ್ಟು ಒಂದು ಕಡೆಯಾದರೆ ರಷ್ಯಾ ಈಗ ಉಕ್ರೇನ್ ವಿರುದ್ಧ ಏನೋ ದೊಡ್ಡ ಪ್ರತಿ ದಾಳಿಗೆ ಸ್ಕೆಚ್ ಹಾಕಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ತನ್ನ ಬತ್ತಳಿಕೆಯಲ್ಲಿ ಬಾಕಿ ಇರುವ ಡೆಡ್ಲಿ ವೆಪನ್ಸ್ ಬಳಸುವ ಬಗ್ಗೆ ರಷ್ಯಾ ಚಿಂತಿಸಿದೆ ಅನ್ನುವ ಆರೋಪ ಕೂಡ ಸೇರಿದೆ. ಹೀಗಾಗಿ ಉಕ್ರೇನ್ ಗಡಿಯಲ್ಲಿ ಸೈನಿಕರು ಅಲರ್ಟ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+