ಓಡೋ.. ಓಡೋ.. ಓಡೋ.. ಓಡೋಲೆ..!

ರಷ್ಯಾ ತನ್ನ ಉಗ್ರ ಸ್ವರೂಪ ತೋರಿಸಿದೆ, ತನ್ನ ಶತ್ರು ಉಕ್ರೇನ್ ಹುಟ್ಟಡಗಿಸಲು ಮತ್ತೊಮ್ಮೆ ರಷ್ಯಾ ಭೀಕರ ದಾಳಿ ಮಾಡಿದೆ. ಹೀಗೆ ರಷ್ಯಾ ನಡೆಸಿದ ದಾಳಿಗೆ ಉಕ್ರೇನ್ ಕತ್ತಲಲ್ಲಿ ನರಳಿ, ನರಳಿ ಬದುಕುವ ಪರಿಸ್ಥಿತಿ ಬಂದಿದೆ. ಹಾಗಾದ್ರೆ ರಷ್ಯಾ ಇದೀಗ ದಾಳಿ ಮಾಡಿದ ಪ್ರದೇಶಗಳು ಯಾವುವು? ರಷ್ಯಾ ಯಾವ ರಣತಂತ್ರ ರೂಪಿಸಿ ಈ ರೀತಿಯಾಗಿ ದಾಳಿ ಮಾಡುತ್ತಿದೆ? ಬನ್ನಿ ಈ ಬಗ್ಗೆ ಮಾಹಿತಿ ತಿಳಿಯೋಣ.

ರಷ್ಯಾಗೆ ಈಗ ಉಳಿದಿರುವ ಎರಡು ದಾರಿ ಎಂದರೆ, ಉಕ್ರೇನ್ ದೇಶವನ್ನು ಸಂಪೂರ್ಣ ತನ್ನ ವಶಕ್ಕೆ ಪಡೆಯುವುದು. ಅಥವಾ ಈಗಿರುವ ಪರಿಸ್ಥಿತಿ ನೋಡಿ, ಉಕ್ರೇನ್ ದೇಶವನ್ನ ಪೂರ್ತಿ ನಾಶ ಮಾಡುವುದು. ಹೀಗೆ ತನ್ನ ಎದುರಲ್ಲಿ 2 ಆಯ್ಕೆ ಇಟ್ಟುಕೊಂಡಿರುವ ರಷ್ಯಾ ಸೇನೆಯು, ಉಕ್ರೇನ್ ವಿರುದ್ಧ ವಿನಾಶದ ಅಸ್ತ್ರ ಬಳಸುತ್ತಿದೆ. ಹೀಗೆ ಮಾಡಿದರೆ ಪಕ್ಕದಲ್ಲೇ ಇರುವ ಶತ್ರು ಸೈಲೆಂಟ್ ಆಗುತ್ತಾನೆ, ಹಾಗೇ ಅಮೆರಿಕಗೆ ಕೂಡ ಪಾಠ ಕಲಿಸಿದಂತೆ ಆಗುತ್ತೆ ಅನ್ನೋದು ರಷ್ಯಾ ಲೆಕ್ಕಾಚಾರ.

Allegedly Russia Has Been Fired More Than 50 Missiles Targeting The Ukraine s Power Facilities

20 ವರ್ಷ ಸಮಯ ಬೇಕಾ?

ಅದರಲ್ಲೂ ಉಕ್ರೇನ್ ಮುಂದಿನ 10 & 20 ವರ್ಷಗಳ ಕಾಲ ಯಾವುದೇ ಕಾರಣಕ್ಕೂ ಅಭಿವೃದ್ಧಿ ಆಗದ ರೀತಿ ರಷ್ಯಾ ದಾಳಿಯನ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಬೇಕು ಅಂತಲೇ ಉಕ್ರೇನ್‌ನ ವಿದ್ಯುತ್ ಘಟಕಗಳ ಮೇಲೆಯೇ ದಾಳಿ ಮಾಡುತ್ತಿದೆ ರಷ್ಯಾ ಸೇನೆ. ಈಗ ಕೂಡ ಅಷ್ಟೇ ಉಕ್ರೇನ್ ವಿದ್ಯುತ್ ಘಟಕಗಳ ಟಾರ್ಗೆಟ್ ಮಾಡಿ, ರಷ್ಯಾ ಸೇನೆ ಸುಮಾರು 50ಕ್ಕೂ ಹೆಚ್ಚು ಮಿಸೈಲ್ ಲಾಂಚ್ ಮಾಡಿದೆಯಂತೆ.

ಯುರೋಪ್ ವಿನಾಶದ ಅಂಚಿಗೆ?

ಅಮೆರಿಕದ ಬೆಂಬಲ ಪಡೆದು ರಷ್ಯಾ ವಿರುದ್ಧ ಯುದ್ಧ ಮಾಡುತ್ತಿದ್ದ ಉಕ್ರೇನ್‌ಗೆ ಈಗ ಭಾರಿ ಸಂಕಷ್ಟ ಎದುರಾಗಿದೆ. ಯಾಕಂದ್ರೆ ಒಂದು ಕಡೆ ಅಮೆರಿಕ ಕೂಡ ಕೈಕೊಟ್ಟು ಹೋಗಲು, ಅಂತಿಮ ಹಂತದ ಸಿದ್ಧತೆ ನಡೆಸಿದೆ. ಅಕಸ್ಮಾತ್ ಈ ಬಾರಿ ಜೋ ಬೈಡನ್ ಅಮೆರಿಕದಲ್ಲಿ, ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆ ಆಗದೇ ಇದ್ದರೆ ಉಕ್ರೇನ್ ಕುತ್ತಿಗೆಗೆ ಬರಲಿದೆ. ಹಾಗೇ ಇದೇ ಸಮಯದಲ್ಲಿ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸಿದೆ. ಈ ಮೂಲಕವಾಗಿ, ಎರಡೂ ದೇಶಗಳ ನಡುವೆ ವೈರತ್ವ ಕೂಡ ಬೆಳೆಯುತ್ತಿದೆ. ಇದು ಹೀಗೆ ಮುಂದುವರಿಕೆ ಆಗಿ ಯುರೋಪ್ ಖಂಡದಲ್ಲಿ ವಿನಾಶವೇ ಸೃಷ್ಟಿಯಾಗುವ ಭಯ ಕಾಡುತ್ತಿದೆ.

ದುಡ್ಡು ಕೊಟ್ಟಿದೆ ದೊಡ್ಡಣ್ಣ ಅಮೆರಿಕ!

ಅಮೆರಿಕ ಈಗಾಗಲೇ ದೊಡ್ಡ ಮೊತ್ತದ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪೈಕಿ ಉಕ್ರೇನ್, ತೈವಾನ್ ಮತ್ತು ಇಸ್ರೇಲ್‌ಗೆ ಸೇರಿ ಒಟ್ಟು 95 ಬಿಲಿಯನ್ ಡಾಲರ್ ಹಣದ ಸಹಾಯ ಮಾಡಲು ಮುಂದಾಗಿದೆ. 95 ಬಿಲಿಯನ್ ಡಾಲರ್ ಹಣದಲ್ಲಿ ಉಕ್ರೇನ್ ದೊಡ್ಡ ಮಟ್ಟದಲ್ಲಿಯೇ ಸಹಾಯ ಪಡೆಯಲಿದೆ ಅಮೆರಿಕ ಹೀಗೆ ನೀಡುತ್ತಿರುವ ಸಹಾಯದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರವು ಸೇರಿದ್ದು, ಕ್ಷಿಪಣಿ ವ್ಯವಸ್ಥೆಗಳನ್ನು ಕೂಡ ಉಡುಗೊರೆಯಾಗಿ ನೀಡುತ್ತಿದೆ. ಆದರೆ ಅಮೆರಿಕದ ಬಳಿ ಕೂಡ ಹಣ ಖಾಲಿ ಆಗುತ್ತಿದ್ದು, ಮುಂದೆ ಉಕ್ರೇನ್‌ಗೆ ಸಹಾಯ ಮಾಡುತ್ತಾ? ಎನ್ನುವ ಅನುಮಾನ ಮೂಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+