Russia & Ukraine: ಸೈಲೆಂಟ್ ಆಗಿರದೆ ಘೋರ ಎಡವಟ್ಟು ಮಾಡಿಕೊಂಡನಾ ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್?

ಕಿಮ್ ಜಾಂಗ್ ಉನ್ ಪದೇ ಪದೇ ಕಿರಿಕ್ ಮಾಡುವುದನ್ನು ನೋಡಿದ್ದೀವಿ & ಕೇಳಿದ್ದೀವಿ ಕೂಡ. ಆದರೆ ಇದೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಾನು ಮಾಡಿಕೊಂಡ ಎಡವಟ್ಟಿನ ಪರಿಣಾಮ ಇದೀಗ ತನ್ನದೇ ದೇಶದ ಸೈನಿಕರಿಗೆ ಸಾವಿನ ಬಲೆ ಎಣೆದುಬಿಟ್ಟನಾ? ಎಂಬ ಪ್ರಶ್ನೆ ಮೂಡಿದೆ. ಹೌದು ಇಂತ ಅನುಮಾನ ಮೂಡಲು ಬಲವಾದ ಕಾರಣ ಕೂಡ ಇದೆ. ಅದು ಯಾಕೆ ಅಂತಾ ಮುಂದೆ ತಿಳಿಯೋಣ ಬನ್ನಿ.

ಉತ್ತರ ಕೊರಿಯಾ & ರಷ್ಯಾ ದೋಸ್ತಿ ಮಾಡಿಕೊಂಡು ಇದೀಗ ಉಕ್ರೇನ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂಗತಿ ನಿಮಗೆಲ್ಲಾ ಗೊತ್ತು. ಈ ವಿಚಾರದಲ್ಲಿ ಕಿಮ್ ಜಾಂಗ್ ಉನ್ ಇದೀಗ ಭಾರಿ ದೊಡ್ಡ ಎಡವಟ್ಟು ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಅದು ಹೇಗೆ ಅಂದರೆ, ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಸೇನೆಗಾಗಿ ಸುಮಾರು 10,000 ಉತ್ತರ ಕೊರಿಯಾದ ಸೈನಿಕರನ್ನು ಕಳಿಸಿದ್ದಾನೆ ಕಿಮ್ ಜಾಂಗ್ ಉನ್. ಆದರೆ ಇದೇ ನಿರ್ಧಾರ ಈಗ ಭಾರಿ ದೊಡ್ಡ ಎಡವಟ್ಟಿಗೂ ಕಾರಣವಾಗಿದೆ.

Allegedly North Korean Soldiers Are Suffering In War Against The Ukraine

ಸರ್ವಾಧಿಕಾರಿ ಮಾಡಿಕೊಂಡ ಎಡವಟ್ಟು!

ಹೌದು, ಇದೀಗ ಉಕ್ರೇನ್ ನೆಲದಲ್ಲಿ ರಷ್ಯಾ ದೊಡ್ಡ ಯುದ್ಧ ನಡೆಸುತ್ತಿದ್ದು ಈ ಯುದ್ಧದಲ್ಲಿ ರಷ್ಯಾ ಈಗಾಗಲೇ ಲಕ್ಷಾಂತರ ಸೈನಿಕರನ್ನು ಕಳೆದುಕೊಂಡಿರುವ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕೆ ಉತ್ತರ ಕೊರಿಯಾ ಸುಮಾರು 10,000 ಸೈನಿಕರನ್ನು ರಷ್ಯಾ ಪರವಾಗಿ ಮತ್ತು ಉತ್ತರ ಕೊರಿಯಾ ವಿರುದ್ಧ ಹೋರಾಡಲು ಕಳಿಸಿತ್ತು. ಹೀಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾಗೆ ಬೆಂಬಲವಾಗಿ ನಿಂತು ಸೈನಿಕರನ್ನು ಕಳುಹಿಸಿದ್ದ. ಆದರೆ ಈ ಸೈನಿಕರೆಲ್ಲಾ ಒಬ್ಬೊಬ್ಬರಾಗಿ ಜೀವ ಬಿಡುತ್ತಿದ್ದಾರಂತೆ!

ರಷ್ಯಾ ಕೊಟ್ಟ ಏಟಿಗೆ ಉಕ್ರೇನ್ ಶೇಕ್!

ಉಕ್ರೇನ್ ಪರಿಸ್ಥಿತಿ ಹೇಗೆ ಆಗಿದೆ ಅಂದ್ರೆ, ಸದ್ಯಕ್ಕೆ ಯುದ್ಧ ನಿಂತರೆ ಸಾಕಪ್ಪಾ... ಸಾಕು... ಅಂತಿದ್ದಾರೆ ಅಲ್ಲಿನ ಜನರು. ಆದರೆ ಉಕ್ರೇನ್ ಅಧ್ಯಕ್ಷ ಮಾತ್ರ ಯುದ್ಧ ನಿಲ್ಲಿಸುವ ವಿಚಾರದಲ್ಲಿ ಎಡವಟ್ಟು, ಎಡವಟ್ಟು ಆಲೋಚನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಉಕ್ರೇನ್ ಇದೇ ರೀತಿಯಾಗಿ ನಿಲುವು ಹೊಂದಿದ್ದರೆ ಇನ್ನೇನು ಮತ್ತಷ್ಟು ಕಠಿಣ ಪರಿಸ್ಥಿತಿ ಗ್ಯಾರಂಟಿ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಮೀರಿ ಸ್ವತಃ ರಷ್ಯಾ ಈಗ ಸಂಧಾನ ಮಾತುಕತೆಗೆ ಸಿದ್ಧವಾಗಿರುವುದು ಕುತೂಹಲ ಮೂಡಿಸಿದೆ.

ಜೋ ಬೈಡನ್ ನಿಲುವು & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಹಠ ಜಗತ್ತಿನ ನಿದ್ದೆಗೆಡಿಸಿತ್ತು. ಯಾಕಂದ್ರೆ ಯಾವ ಕ್ಷಣದಲ್ಲಿ ಘೋರ ಯುದ್ಧ ನಡೆದು ಜಗತ್ತಿನಲ್ಲಿ ಮತ್ತೊಮ್ಮೆ ಮಹಾಯುದ್ಧ ಆರಂಭವಾಗುತ್ತೋ? ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ 3ನೇ ಮಹಾಯುದ್ಧ ಭೀತಿಯಲ್ಲಿ ಜಗತ್ತು ನರಳಾಡುತ್ತಿದೆ. ರಷ್ಯಾ & ಉಕ್ರೇನ್ ಯುದ್ಧವು ಈ ಭಯಕ್ಕೆ ಪೆಟ್ರೋಲ್ ಸುರಿದು ಮತ್ತಷ್ಟು ಬೆಂಕಿ ಹಾಕುತ್ತಿತ್ತು. ಆದರೆ ಇದೀಗ ರಷ್ಯಾ ಅಧ್ಯಕ್ಷರು ತಮ್ಮ ಮನಸ್ಸು ಬದಲಾಯಿಸಿದ ರೀತಿ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+