ಗಾಜಾ ವಿರುದ್ಧ ಮತ್ತಷ್ಟು ಭೀಕರ ದಾಳಿ ನಡೆಸಿದ ಇಸ್ರೇಲ್... 20ಕ್ಕೂ ಹೆಚ್ಚು ಜನರು ಬಲಿ?

ಎಲ್ಲಿ ನೋಡಿದರೂ ಪೀಸ್ ಪೀಸ್ ಆಗಿ ಬಿದ್ದ ಕಟ್ಟಡಗಳು, ನಗರದ ತುಂಬಾ ಶವಗಳು ಕೊಳೆತ ವಾಸನೆ. ಕುಡಿಯಲು ನೀರು ಸಿಗುವುದಿಲ್ಲ, ತಿನ್ನಲು ಅನ್ನ ಮೊದಲೇ ಇಲ್ಲ. ಎಲ್ಲಾ ಕಡೆ ಬರೀ ಬಾಂಬ್ ಸದ್ದು, ಅದನ್ನ ಬಿಟ್ಟರೆ ಸ್ಮಶಾನ ಮೌನ.

ಇದು ಯಾವುದೋ ಸಿನಿಮಾ ಸೀನ್ ಅಲ್ಲ, ಆದರೆ ಇದು ಗಾಜಾ ಪಟ್ಟಿಯ ಸದ್ಯದ ವಾಸ್ತವ. ಯಾಕಂದ್ರೆ ಇಸ್ರೇಲ್ & ಗಾಜಾ ನಡುವೆ ಘೋರ ಯುದ್ಧ ನಡೆಯುತ್ತಿದ್ದು ಇದರ ಪರಿಣಾಮ ಗಾಜಾ ಪಟ್ಟಿ ಜನರು ನರಳಿ ಹೋಗಿದ್ದಾರೆ. ಹೀಗಾಗಿ ಊರು ಬಿಡಲು ಸಿದ್ಧವಾದ್ರೂ ಪ್ರಯೋಜನ ಆಗಿಲ್ಲ. ಇಂತಹ ಸಮಯದಲ್ಲಿ ಇಸ್ರೇಲ್ ಏನು ಮಾಡಿದೆ ಗೊತ್ತಾ?

Allegedly More Than 20 People Killed In Israel Attack On The Gaza

40,000ಕ್ಕೂ ಹೆಚ್ಚು ಜನರು ಯುದ್ಧಕ್ಕೆ

ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಗೆ ಈಗಾಗಲೇ ಭಾಗಶಃ ಗಾಜಾ ನಗರ ಹಾಳಾಗಿ ಹೋಗಿದ್ದು, ಜನರು ಕೂಡ ಅರ್ಧ ಜೀವ ಉಳಿಸಿಕೊಂಡು ನರಳುತ್ತಿದ್ದಾರೆ. ಇದರ ಜೊತೆಗೆ ಸುಮಾರು 40,000ಕ್ಕೂ ಹೆಚ್ಚು ಜನರು ಯುದ್ಧಕ್ಕೆ ಬಲಿಯಾದ ಆರೋಪ ಕೇಳಿಬಂದಿದೆ.

ಇಂತಹ ಸಮಯದಲ್ಲೇ ಈಗ ಇಸ್ರೇಲ್ ಮತ್ತೊಂದು ಘೋರ ದಾಳಿ ನಡೆಸಿದ್ದು, ಇದರ ಪರಿಣಾಮ 20ಕ್ಕೂ ಹೆಚ್ಚು ಜನರು ಒಂದೇ ಕಡೆ ಜೀವ ಬಿಟ್ಟಿರುವ ಆರೋಪ ಕೇಳಿಬಂದಿದೆ. ಈಗಾಗಲೇ ಯುದ್ಧದ ಬಲೆಯಲ್ಲಿ ಸಿಲುಕಿ ನರಳಿರುವ ಗಾಜಾ ಜನರಿಗೆ ಈ ಸುದ್ದಿ ಮತ್ತೊಂದು ರೀತಿ ಆಘಾತ ನೀಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆ

ಇಸ್ರೇಲ್ ಮಿಲಿಟರಿ ತನ್ನ ಕಾರ್ಯಾಚರಣೆ ತೀವ್ರಗೊಳಿಸಿ, ಹಮಾಸ್ ನಾಶ ಮಾಡಲು ತನ್ನದೇ ರೀತಿಯ ಆಪರೇಷನ್ ಶುರು ಮಾಡಿದೆ. ಒಂದು ಕಡೆ ಇಸ್ರೇಲ್ ಮಿಲಿಟರಿ ಕೊಡುತ್ತಿರುವ ಈ ಏಟಿಗೆ ನಲುಗಿ ಹೋಗಿರುವ ಹಮಾಸ್ ಸದಸ್ಯರು ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ. ಈ ಸಮಯದಲ್ಲೇ ಇನ್ನೊಂದು ಕಡೆ ಗಾಜಾ ಪಟ್ಟಿ ಭಾಗದಲ್ಲಿ ಹಿಂಸಾಚಾರ ಕೂಡ ಹೆಚ್ಚುತ್ತಿದೆ.

ಇಂತಹ ಸಮಯದಲ್ಲಿ ನಿರಾಶ್ರಿತರ ಶಿಬಿರಗಳು ಕೂಡ ಇಸ್ರೇಲ್ ದಾಳಿಗೆ ಬಲಿಯಾಗುತ್ತಿರುವ ಆರೋಪ ಇದೀಗ ಕೇಳಿಬರುತ್ತಿದೆ. ಹಾಗೇ ಈ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಈ ರೀತಿ ದಾಳಿ ಮಾಡುವ ಬಗ್ಗೆ ಪರ & ವಿರೋಧದ ಚರ್ಚೆ ಕೂಡ ಜೋರಾಗಿದೆ. ಗಾಜಾ ಪಟ್ಟಿಯ ಭಾಗಕ್ಕೆ ನುಗ್ಗಿರುವ ಇಸ್ರೇಲ್ ಸೇನೆ ಈಗಾಗಲೇ ಸುರಂಗ & ಇತರ ಕಡೆಗಳಲ್ಲಿ ಹುಡುಕಾಡಿ ಹಮಾಸ್ ಸದಸ್ಯರ ಜೀವ ತೆಗೆಯುತ್ತಿದೆ. ಅದರಲ್ಲೂ ನಿರಾಶ್ರಿತರ ಶಿಬಿರ ಇರುವ ಕಡೆಗಳಲ್ಲಿ ಕೂಡ ಇದೇ ರೀತಿಯ ಆಪರೇಷನ್ ನಡೆಸುತ್ತಿದೆ ಇಸ್ರೇಲ್ ಸೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+