Gaza War: ಗಾಜಾ ಮೇಲೆ ಇಸ್ರೇಲ್ ದಾಳಿ ಆರೋಪ, ಪತ್ರಕರ್ತ ಸಾವು?
ಗಾಜಾ ಪಟ್ಟಿಯಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು, ಭಾರಿ ರಕ್ತಪಾತ ಆಗುತ್ತಿದೆ. ಈಗಾಗಲೇ 52,900ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎನ್ನುವ ಆರೋಪ ಇದ್ದು, ಸಾಕಷ್ಟು ತಿಕ್ಕಾಟವೂ ನಡೆಯುತ್ತಿದೆ. ಮಧ್ಯಪ್ರಾಚ್ಯ ದೇಶಗಳು ಈ ವಿಚಾರದಲ್ಲಿ ಒಡೆದ ಮನೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಇಂತಹ ಸಮಯದಲ್ಲೇ ಗಾಜಾ ಮೇಲೆ ಇಸ್ರೇಲ್ ದಾಳಿ ಆರೋಪ ಕೇಳಿ ಬಂದಿದ್ದು, ಈ ಘಟನೆಯಲ್ಲಿ ಪತ್ರಕರ್ತ ಮೃತಪಟ್ಟರಾ?
ಅಯ್ಯಯ್ಯೋ... ಯುದ್ಧ ಮತ್ತಷ್ಟು ಹೆಚ್ಚಾಗುತ್ತಿದೆ.. ಹಿಂಸಾಚಾರದ ಬೆಂಕಿಯಲ್ಲಿ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಜನ ಜೀವ ಬಿಟ್ಟಿದ್ದಾರೆ. ನೋಡ ನೋಡುತ್ತಲೇ ಲೆಕ್ಕವಿಲ್ಲದಷ್ಟು ಮಕ್ಕಳು ಊಟ & ನೀರು ಇಲ್ಲದೆ ಸಾವನ್ನಪ್ಪಿವೆ ಎಂಬ ಗಂಭೀರ ಆರೋಪ ಕೂಡ ಇದೆ. ಹೀಗೆ ಇಸ್ರೇಲ್ & ಹಮಾಸ್ ನಡುವಿನ ತಿಕ್ಕಾಟದಲ್ಲಿ ಗಾಜಾ ಪಟ್ಟಿ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿದೆ. ಹೀಗಿದ್ದಾಗಲೇ ಪತ್ರಕರ್ತರು ಕೂಡ ಗಾಜಾ ಪಟ್ಟಿಯಲ್ಲಿ ಸುರಕ್ಷಿತವಾಗಿ ಇಲ್ಲ ಎಂಬ ಆರೋಪ ಮಾಡಲಾಗಿದೆ. ಅದರಲ್ಲೂ ಗಾಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಇಸ್ರೇಲ್ ಸೇನೆಯು ಭೀಕರ ದಾಳಿ ನಡೆಸಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಹಿಂಸಾಚಾರದ ಬೆಂಕಿಯಲ್ಲಿ ಗಾಜಾ ಧಗಧಗ...
ಇಸ್ರೇಲ್ ಮಿಲಿಟರಿ ಸೈಲೆಂಟ್ ಆಗುತ್ತಿಲ್ಲ, ಶತ್ರುಗಳನ್ನ ನಾಶ ಮಾಡುವ ನೆಪದಲ್ಲಿ ಮಧ್ಯಪ್ರಾಚ್ಯ ಭಾಗದ ಹಲವು ದೇಶಗಳ ವಿರುದ್ಧ ಘೋರ ದಾಳಿ ನಡೆಸ್ತಿದೆ ಎಂಬ ಆರೋಪವೂ ಇದೆ. ಇಸ್ರೇಲ್ ಸೇನೆಯ ಈ ವರ್ತನೆ ಈಗಾಗಲೇ ಗಾಜಾ ಪಟ್ಟಿ & ಅಕ್ಕಪಕ್ಕದ ದೇಶಗಳನ್ನ ನರಕ ಮಾಡಿದೆ ಎಂಬ ಆರೋಪ ಇದೆ. ಇಂತಹ ಸಮಯದಲ್ಲೇ, ಗಾಜಾ ಆಸ್ಪತ್ರೆಗಳ ಮೇಲೆ ಕೂಡ ಭೀಕರ ಅಟ್ಯಾಕ್ ನಡೆಯುತ್ತಿರುವ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಗಾಯಾಳುಗಳು ಜೀವ ಬಿಡುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವನ್ನ ಗಾಜಾ ಮಾಡುತ್ತಿದೆ.












Click it and Unblock the Notifications