Gaza War: ಆಂಬುಲೆನ್ಸ್ ಮೇಲೆ ಗುಂಡಿನ ದಾಳಿ ನಡೆಸಿದೆ ಇಸ್ರೇಲ್ ಮಿಲಿಟರಿ?
ಗಾಜಾಪಟ್ಟಿ ಜನ ಏನು ತಪ್ಪು ಮಾಡಿದ್ದರೋ ಗೊತ್ತಿಲ್ಲ, ಹಮಾಸ್ & ಇಸ್ರೇಲ್ ಗಲಾಟೆಯ ನಡುವೆ ಸಿಲುಕಿ ನರಳಿ ಹೋಗಿದ್ದಾರೆ. ಒಂದು ಕಡೆ ಯುದ್ಧ ನಿಂತ ಖುಷಿಯಲ್ಲಿದ್ದ ಅಲ್ಲಿನ ಪ್ರಜೆಗಳಿಗೆ ಮತ್ತೆ ಆಘಾತ ಎದುರಾಗಿದೆ, ದಿಢೀರ್ ಹಮಾಸ್ & ಇಸ್ರೇಲ್ ನಡುವೆ ವಿವಾದವು ಭುಗಿಲೆದ್ದು ಹಿಂಸಾಚಾರ ಸ್ಫೋಟಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಮೇಲೆ ಗುಂಡಿನ ದಾಳಿ ಮಾಡಿತಾ ಇಸ್ರೇಲ್ ಮಿಲಿಟರಿ?
ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಮೊಳಗಿರುವಾಗ ಯುದ್ಧ ನಿಲ್ಲುತ್ತೆ ಎಂಬ ಕನಸು ಛಿದ್ರವಾಗಿ ಹೋಗಿದೆ. ಗಾಜಾ ಪಟ್ಟಿಯಲ್ಲಿ 2025ರ ಆರಂಭದಲ್ಲಿ ಯುದ್ಧವನ್ನ ತಾತ್ಕಾಲಿಕವಾಗಿ ನಿಲ್ಲಿಸಿದರೂ ಆ ನಂತರ ಮತ್ತೆ ಹಿಂಸಾಚಾರ ಸ್ಫೋಟಗೊಂಡಿದೆ. ಹೀಗಾಗಿ ಭಾರಿ ಘೋರ ಹಿಂಸಾಚಾರಕ್ಕೆ ಸಾವಿರಾರು ಜನರ ಜೀವ ಬಲಿಯಾಗಿದೆ. ಈ ನಡುವೆ ಇಸ್ರೇಲ್ ಸೇನೆ ಗಾಜಾ ಪಟ್ಟಿಯಲ್ಲಿ ನಿಯಮ ಮೀರುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬಂದಿದ್ದು, ಆಂಬುಲೆನ್ಸ್ ಮೇಲೆ ಕೂಡ ಭೀಕರ ಗುಂಡಿನ ದಾಳಿ ನಡೆಸಿದ ಆರೋಪ ಇದೀಗ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಗಾಜಾ ಪಟ್ಟಿಯಲ್ಲಿ ನರಕ ದರ್ಶನ
ಅಂದಹಾಗೆ ಮಧ್ಯಪ್ರಾಚ್ಯ ಇದೀಗ ಕೊತ ಕೊತ ಕುದಿಯುವ ಸಮಯದಲ್ಲೇ ಇಸ್ರೇಲ್ ಮತ್ತಷ್ಟು ರೊಚ್ಚಿಗೇಳುತ್ತಾ ದಾಳಿ ನಡೆಸುತ್ತಿದೆ. ಹಮಾಸ್ ನಾಯಕರು, ಮುಖ್ಯಸ್ಥರ ಹತ್ಯೆಗೆ ಇಸ್ರೇಲ್ ಸೇನೆ ಘೋರ ಕಾರ್ಯಾಚರಣೆ ಆರಂಭ ಮಾಡಿದೆ. ಇದರ ಪರಿಣಾಮ ಈಗಾಗಲೇ ನಲುಗಿ ಹೋಗಿರುವ ಗಾಜಾ ಪಟ್ಟಿಯಲ್ಲಿ ಇನ್ನಷ್ಟು ಸಂಚಲನ ಸೃಷ್ಟಿಯಾಗಿದ್ದು, ಎಲ್ಲೆಂದರಲ್ಲಿ ಬಾಂಬ್ ಬೀಳುತ್ತಿವೆ. ಹೀಗೆ ಗಾಯಗೊಂಡ ಜನರನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಆಂಬುಲೆನ್ಸ್‌ಗಳ ಮೇಲೆ ಕೂಡ ದಾಳಿ ನಡೆಯುತ್ತಿರುವ ಆರೋಪ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ವಿಶ್ವಸಂಸ್ಥೆಗೂ ಶುರುವಾಯ್ತು ಹೊಸ ಸಮಸ್ಯೆ!
ಒಟ್ನಲ್ಲಿ ಗಾಜಾ ಪಟ್ಟಿಯಲ್ಲಿ ಅಕ್ಷರಶಃ ಇದೀಗ ನರಕದರ್ಶನ ಆಗುತ್ತಿದ್ದು, ಜನರು ಈಗಾಗಲೇ ಊರು ಬಿಟ್ಟು ಬೇರೆ ಬೇರೆ ಜಾಗಗಳಿಗೆ ಹೋಗುವ ಸ್ಥಿತಿ ಇದೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಗಾಜಾ ಪಟ್ಟಿಯನ್ನು ಅಮೆರಿಕದ ವಶಕ್ಕೆ ಪಡೆಯುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆಗ ತಾನೆ ಯುದ್ಧ ನಿಂತಿದ್ದ ಸಮಯದಲ್ಲಿ ಟ್ರಂಪ್ ಈ ರೀತಿಯಾಗಿ ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿ ಮಾಡಿತ್ತು.
ಇದೀಗ ಮತ್ತೆ ಯುದ್ಧದ ಬೆಂಕಿ ಹೊತ್ತಿಕೊಂಡಿದೆ, ಮಕ್ಕಳು & ಮಹಿಳೆಯರು ಸೇರಿದಂತೆ ವೃದ್ಧರ ಸಮೇತ ಎಲ್ಲರೂ ಈಗ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗುತ್ತಿದ್ದಾರೆ. ವಿಶ್ವಸಂಸ್ಥೆ ಕೂಡ ಯುದ್ಧ ಮತ್ತೆ ಶುರುವಾಗಿರುವ ಕಾರಣಕ್ಕೆ ಕಂಗಾಲಾಗಿ ಹೋಗಿದ್ದು, ಮುಂದೆ ಏನು ಮಾಡಬೇಕಪ್ಪಾ? ಅನ್ನೋ ಚಿಂತೆ ಮಧ್ಯಪ್ರಾಚ್ಯ ದೇಶಗಳಿಗೆ ಶುರುವಾಗಿದೆ.












Click it and Unblock the Notifications