Israel & Iran War: ಇರಾನ್ ಪರಮೋಚ್ಛ ನಾಯಕನ ಹತ್ಯೆಗೆ ಇಸ್ರೇಲ್ ತಯಾರಿ?
ಇಸ್ರೇಲ್ & ಇರಾನ್ ನಡುವೆ ಮತ್ತೊಮ್ಮೆ ಕಿಚ್ಚು ಹೊತ್ತಿದ್ದು, ಇದಕ್ಕೆಲ್ಲಾ ಕಾರಣವಾಗಿರುವುದು ಇಸ್ರೇಲ್ ಪ್ರಧಾನಿ ನಿವಾಸದ ಬಳಿ ನಡೆದ ಭೀಕರ ದಾಳಿ. ಈಗಾಗಲೇ ಕೆಂಡದ ಮೇಲೆ ಕೂತಿದ್ದ ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಈ ಘಟನೆ ದಿಢೀರ್ ಸೀಮೆ ಎಣ್ಣೆ ಸುರಿದಂತೆ ಆಗಿದೆ. ಈ ಹಿನ್ನೆಲೆ ಇಸ್ರೇಲ್ ಕೂಡ ತನ್ನ ಶತ್ರುಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದು, ಇಸ್ರೇಲ್ ಪ್ರಧಾನಿ ತಂಟೆಗೆ ಬರುವವರು ಯಾರೇ ಆದರೂ ಸೇಡು ಗ್ಯಾರಂಟಿ ಅಂತಾ ಹೇಳಿದೆ. ಇದೇ ಸಮಯದಲ್ಲಿ, ಇರಾನ್ ಪರಮೋಚ್ಛ ನಾಯಕನ ಹತ್ಯೆಗೂ ಇಸ್ರೇಲ್ ತಯಾರಿ? ಎಂಬ ಪ್ರಶ್ನೆ ಹಲ್‌ಚಲ್ ಎಬ್ಬಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಸಮೀಪ ದಾಳಿ ನಡೆಸಿ, ದೊಡ್ಡ ಕೃತ್ಯಕ್ಕೆ ಕೈಹಾಕಿದ್ದರು ಬಂಡುಕೋರರು. ಈ ಹಿನ್ನೆಲೆ ರೊಚ್ಚಿಗೆದ್ದಿರುವ ಇಸ್ರೇಲ್ ಸೇನೆ & ಇಸ್ರೇಲ್‌ನ ಗುಪ್ತಚರ ಇಲಾಖೆ ಇದೀಗ ಇರಾನ್ ವಿರುದ್ಧ ಗುಡುಗಿದೆ. ಅಲ್ಲದೆ ಶೀಘ್ರದಲ್ಲೇ ನಾವು ರಿವೇಂಜ್ ತೆಗೆದುಕೊಳ್ಳುವುದು ಗ್ಯಾರಂಟಿ ಎಂಬ ಮಾತನ್ನ ಕೂಡ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಸಮೀಪ ದಾಳಿ ನಡೆಸಿದ ವಿಚಾರವನ್ನು ಇದೀಗ ಇಸ್ರೇಲ್ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಈ ದಾಳಿಯನ್ನು, ಬೆಂಜಮಿನ್ ನೆತನ್ಯಾಹು ಹತ್ಯೆಗೆ ಮಾಡಿದ ಪ್ರಯತ್ನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇರಾನ್ ಸುಪ್ರೀಂ ಲೀಡರ್ ಮೇಲೆಯೇ ಟಾರ್ಗೆಟ್ ಇಟ್ಟು ದಾಳಿಗೆ ಸನ್ನದ್ಧವಾಗಿದೆ ಇಸ್ರೇಲ್.

ಇಸ್ರೇಲ್ ಹಾಕಿರುವ ಸ್ಕೆಚ್ ಏನು?
ಕೆಲವು ದಿನಗಳ ಹಿಂದಷ್ಟೇ ಅಲಿ ಖಮೇನಿ ಹತ್ಯೆಗೆ ಯತ್ನ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಆ ನಂತರ ಇರಾನ್ ನೇರವಾಗಿ ಇಸ್ರೇಲ್ ನೆಲದ ವಿರುದ್ಧ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನ ಬಳಸಿ ದಾಳಿಗೆ ಪ್ರಯತ್ನ ಮಾಡಿತ್ತು. ಈ ಬೆಳವಣಿಗೆ ಜಾಗತಿಕವಾಗಿ ಕೂಡ ದೊಡ್ಡ ತಲೆನೋವು ತಂದಿಟ್ಟಿತ್ತು, ಕೊನೆಗೆ ಎರಡೂ ದೇಶಗಳು ಸೈಲೆಂಟ್ ಆಗಿದ್ದರೂ ಯುದ್ಧದ ಭೀತಿ ಮಾತ್ರ ಕಾಡುತ್ತಲೇ ಇದೆ. ಮತ್ತೊಂದು ಕಡೆ ಇರಾನ್ ದೇಶದ ಪರಮೋಚ್ಛ ನಾಯಕ ಅಲಿ ಖಮೇನಿ ಹತ್ಯೆಗೆ ಕೂಡ ಇಸ್ರೇಲ್ ಸ್ಕೆಚ್ ಹಾಕಿದೆ ಎಂಬ ಆರೋಪವು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಈ ಘಟನೆ ನಡೆದರೆ ದೊಡ್ಡ ಅನಾಹುತವು ಕೂಡ ಎದುರಾಗಬಹುದು ಎಂಬ ಆತಂಕ ಮೂಡಿದೆ.
ಮುಂದಿನ ಪರಿಸ್ಥಿತಿ ಏನು ಗುರೂ?
ಒಟ್ನಲ್ಲಿ ಜಗತ್ತು ಶಾಂತವಾಗಿ ಬದುಕಬೇಕು, ಈ ಮೂಲಕ ಜಾಗತಿಕ ಮಟ್ಟದಲ್ಲಿ ಶಾಂತಿಯ ಸಹಬಾಳ್ವೆ ನಡೆಯಬೇಕು ಎಂಬುದು ವಿಶ್ವಸಂಸ್ಥೆ ಆಸೆಯಾಗಿದೆ. ಆದರೆ ಅತ್ತ ಬಂಡುಕೋರರ ಗುಂಪು ಕಿರಿಕ್ ಮಾಡಿದರೆ, ಇತ್ತ ಇಸ್ರೇಲ್ ಕೂಡ ಉಗುರಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಳ್ಳುತ್ತಿದೆ ಎಂಬ ಆರೋಪ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತಿಕ್ಕಾಟ & ಜಗಳಕ್ಕೂ ಕಾರಣವಾಗುವ ಭಯ ಆವರಿಸಿದೆ.












Click it and Unblock the Notifications