Israel & Gaza: ಇಸ್ರೇಲ್ ಬಾಂಬ್ ದಾಳಿಯಲ್ಲಿ ಮತ್ತೆ 10 ಜನರು ಬಲಿ?
ಗಾಜಾ ಪಟ್ಟಿಯಲ್ಲಿ ಹಮಾಸ್ & ಇಸ್ರೇಲ್ ಸೇನೆಯ ನಡುವೆ ಬಡಿದಾಡುವುದು ಇರಲಿ, ಅತ್ತ ಸಾಮಾನ್ಯ ಜನರ ಜೀವ ಹೋಗುತ್ತಿರುವುದು ಮಾತ್ರ ನಿಂತಿಲ್ಲ. ಇಬ್ಬರ ನಡುವೆ ಯುದ್ಧ ಶುರು ಆಗಿ ಸುಮಾರು ಒಂದೂವರೆ ವರ್ಷವೇ ಕಳೆದಿದ್ದರೂ, ಶಾಂತಿ ಮಾತ್ರ ನೆಲೆಸಿಲ್ಲ. ಕೇಲ ದಿನ ಮಾತ್ರ ಯುದ್ಧಕ್ಕೆ ಬ್ರೇಕ್ ಹಾಕಿ, ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ನೋಡ ನೋಡುತ್ತಲೇ ಮತ್ತೆ ಯುದ್ಧದ ಬೆಂಕಿ ಹೊತ್ತಿಕೊಂಡು ದೊಡ್ಡ ಸಮಸ್ಯೆ ಆಗಿದೆ.
ದಕ್ಷಿಣ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ತನ್ನ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಿರುವ ಕಾರಣ ಇಸ್ರೇಲ್ ಬಾಂಬ್ ದಾಳಿಯಲ್ಲಿ ಮತ್ತೆ 10 ಜನರು ಬಲಿಯಾಗಿದ್ದಾರೆ ಎಂದು ಭಾರಿ ಗಂಭೀರ ಆರೋಪ ಮಾಡಲಾಗಿದೆ. ದಕ್ಷಿಣ ಗಾಜಾ ಪಟ್ಟಿ ಯುದ್ಧ ಶುರುವಾದ ನಂತರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಬದಲಾಗಿದ್ದು, ಮೊದಲಿಗೆ ನಿರಾಶ್ರಿತರು ಇಲ್ಲಿಗೆ ಬಂದಿದ್ದರು. ಆದರೆ ನಂತರ, ನಿರಾಶ್ರಿತರು ಬೇರೆ ಕಡೆ ಓಡಿ ಹೋಗುವಂತೆ ಆಗಿತ್ತು. ಈ ಮೂಲಕ ಇಸ್ರೇಲ್ & ಹಮಾಸ್‌ನ ನಡುವೆ ನಡೆಯುತ್ತಿರುವ ಗಲಾಟೆ ಕ್ಷಣಕ್ಷಣಕ್ಕೂ ನೂರಾರು ಜೀವ ಬಲಿ ಪಡೆಯುತ್ತಿದೆ.

ಗಾಜಾ ಪಟ್ಟಿಯಲ್ಲಿ ತೀವ್ರ ರಕ್ತಪಾತ?
ಹೀಗೆಲ್ಲಾ ಇಸ್ರೇಲ್ ಸೇನೆ ದಾಳಿ ಮಾಡುತ್ತಿರುವ ಪರಿಣಾಮ ಇದೀಗ ಗಾಜಾ ಪಟ್ಟಿಯಲ್ಲಿ ತೀವ್ರ ರಕ್ತಪಾತವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ ಅತಿಹೆಚ್ಚು ಮಕ್ಕಳು, ಮಹಿಳೆಯರು ಮೃತಪಟ್ಟು ಪರಿಸ್ಥಿತಿ ಗಂಭೀರವಾಗಿದೆ. ಮಧ್ಯಪ್ರಾಚ್ಯ ದೇಶಗಳು ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸುತ್ತಿದ್ದು, ಭವಿಷ್ಯದಲ್ಲಿ ಅಮೆರಿಕಗೆ ಹೊಸ ತಲೆನೋವು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಇಸ್ರೇಲ್ & ಹಮಾಸ್ ತಿಕ್ಕಾಟಕ್ಕೆ ಬ್ರೇಕ್ ಹಾಕಲು ಚಿಂತನೆ ಕೂಡ ನಡೆದಿದೆ. ಡೊನಾಲ್ಡ್ ಟ್ರಂಪ್ ಎದುರು ಇದೀಗ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಬೇಕಾದ ಸವಾಲಿನ ಜೊತೆಗೆ ಉಕ್ರೇನ್ & ರಷ್ಯಾ ಯುದ್ಧವೂ ಸುತ್ತಿಕೊಂಡಿದೆ.
ಯುದ್ಧ ಶುರುವಾಗಿದ್ದು ಯಾವಾಗ?
ಹಮಾಸ್ & ಇಸ್ರೇಲ್ ಮಧ್ಯೆ ಘೋರ ಕಾಳಗ ನಡೀತ್ತಿದ್ದು, ಈ ಇಬ್ಬರ ನಡುವಿನ ತಿಕ್ಕಾಟ ಕೊನೆಗೆ ಗಾಜಾ ಪಟ್ಟಿ ಸರ್ವನಾಶ ಮಾಡುತ್ತಿದೆ. ಹೀಗೆ ಗಾಜಾ & ಇಸ್ರೇಲ್ ನಡುವಿನ ಫೈಟಿಂಗ್ ಕಾರಣಕ್ಕೆ 2023ರ ಅಕ್ಟೋಬರ್ ತಿಂಗಳಲ್ಲಿ ಘೋರ ಯುದ್ಧ ಆರಂಭವಾಗಿತ್ತು. ಯುದ್ಧದ ಪರಿಣಾಮವಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಜನ ಬಲಿಯಾಗಿದ್ದಾರೆ ಎಂಬ ಆರೋಪವೂ ಇದೆ. ಹೀಗಿದ್ದರೂ ಯುದ್ಧಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಕೆಲವು ದಿನ ಸೈಲೆಂಟ್ ಆಗಿದ್ದ ಯುದ್ಧ ಈಗ ಮತ್ತೆ ಆರ್ಭಟಿಸುತ್ತಿದೆ.












Click it and Unblock the Notifications