ಲೆಬನಾನ್ ಆಯ್ತು & ಗಾಜಾ ಕೂಡ ಆಯ್ತು ಇದೀಗ ಸಿರಿಯಾ ಮೇಲೂ ಇಸ್ರೇಲ್ ಅಟ್ಯಾಕ್!
ಇಸ್ರೇಲ್ ಮಿಲಿಟರಿ ಅದೆಷ್ಟು ಬುದ್ಧಿ ಹೇಳಿದರೂ ಸೈಲೆಂಟ್ ಆಗುತ್ತಿಲ್ಲ, ತನ್ನ ಶತ್ರುಗಳನ್ನು ನಾಶ ಮಾಡುವ ನೆಪದಲ್ಲಿ ಮಧ್ಯಪ್ರಾಚ್ಯ ಭಾಗದ ಹಲವು ದೇಶಗಳ ವಿರುದ್ಧ ಘೋರ ದಾಳಿ ನಡೆಸುತ್ತಿದೆ ಎಂಬ ಆರೋಪ ಇದೆ. ಇಸ್ರೇಲ್ ಸೇನೆಯ ಈ ವರ್ತನೆ ಈಗಾಗಲೇ ಗಾಜಾ ಪಟ್ಟಿ ಹಾಗೂ ಲೆಬನಾನ್ ದೇಶಗಳನ್ನು ನರಕ ಮಾಡಿದೆ. ಇದೇ ಸಮಯದಲ್ಲಿ ಸಿರಿಯಾ ವಿರುದ್ಧ ಕೂಡ ಇಸ್ರೇಲಿ ಮಿಲಿಟರಿ ಕೆಂಗಣ್ಣು ಬೀರಿದ್ದು, ಭೀಕರ ದಾಳಿ ಆರಂಭ ಮಾಡಿದೆ!
ಇಸ್ರೇಲ್ ಕಣ್ಣಿಗೆ ಇದೀಗ ಜಗತ್ತು ಯಾವ ರೀತಿ ಕಾಣುತ್ತಿದೆಯೋ ಗೊತ್ತಿಲ್ಲ, ಆದರೆ ಯುದ್ಧ ಬೇಡ ಬೇಡ ಅಂದ್ರೂ ತನ್ನ ಹಠ ಮುಂದುವರಿಸಿರುವ ಇಸ್ರೇಲ್ ದಾಳಿ ನಡೆಸುತ್ತಿದೆ. ಹೀಗೆ, ಇಸ್ರೇಲ್ ಕೈಗೊಳ್ಳುತ್ತಿರುವ ಒಂದೊಂದು ನಿರ್ಧಾರ ಕೂಡ ಸಂಚಲನ ಸೃಷ್ಟಿ ಮಾಡುತ್ತಿದೆ. ಈಗಾಗಲೇ ಒಟ್ಟು ಎರಡು ದೇಶಗಳ ವಿರುದ್ಧ ಯುದ್ಧ ಸಾರಿ ಕಿತ್ತಾಡುತ್ತಿರುವ ಇಸ್ರೇಲ್ ಸೇನೆ ದಿಢೀರ್ ಮತ್ತೊಂದು ದೇಶದ ವಿರುದ್ಧ ಕೂಡ ದಾಳಿ ಆರಂಭಿಸಿ ಹೊಸ ಯುದ್ಧದ ಮುನ್ಸೂಚನೆ ನೀಡಿದೆ.

ಮತ್ತೊಂದು ಯುದ್ಧದ ಕಾರ್ಮೋಡ!
ಹೌದು, ಸಿರಿಯಾ ಮೇಲೆ ಕೂಡ ಇದೀಗ ಇಸ್ರೇಲ್ ಭೀಕರ ದಾಳಿ ಶುರು ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಸಿರಿಯ ದೇಶದ ಲತಾಕಿಯ ಮೇಲೆ ಇಸ್ರೇಲ್ ಪಡೆಗಳು ವಾಯು ದಾಳಿ ನಡೆಸಿದೆ ಎಂಬ ಆರೋಪ ಮಾಡಲಾಗಿದೆ. ಲತಾಕಿಯ ಸಿಟಿಯಲ್ಲಿ ಇರುವ ಸಿರಿಯಾ ದೇಶದ ಶಸ್ತ್ರಾಸ್ತ್ರ ಸಂಗ್ರಹದ ಮೇಲೆ ಗುರಿ ಇಟ್ಟು ಈ ರೀತಿಯಾಗಿ ದಾಳಿ ನಡೆದಿರುವ ಆರೋಪ ಇದಾಗಿದೆ. ಈ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಂದು ಯುದ್ಧವು ಆರಂಭ ಆಗುವ ಕಾರ್ಮೋಡ ಆವರಿಸಿದೆ.
2,300ಕ್ಕೂ ಹೆಚ್ಚು ಜನರ ಜೀವ...
ಹಿಜ್ಬುಲ್ಲಾ & ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ ಲೆಬನಾನ್ ದೇಶದಲ್ಲಿ ಶವಗಳ ರಾಶಿಯೇ ಬೀಳುತ್ತಿದೆ. ಇಸ್ರೇಲ್ ವಿರುದ್ಧ ಇದೀಗ ಕೇಳಿಬಂದಿರುವ ಆರೋಪದ ಪ್ರಕಾರವೇ, ಇಸ್ರೇಲ್ ದಾಳಿ ಆರಂಭವಾದ ನಂತರ ಲೆಬನಾನ್‌ನಲ್ಲಿ ಒಟ್ಟಾರೆ 2,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೇ ನೂರಾರು ಜನರು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ನರಳುತ್ತಿದ್ದಾರೆ. ಇಷ್ಟಾದರೂ, ತನ್ನ ದಾಳಿಯನ್ನು ಇಸ್ರೇಲ್ ಸೇನೆ ಮತ್ತಷ್ಟು ಹೆಚ್ಚು ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಸಿರಿಯಾ ದೇಶದ ಮೇಲೆ ಕೂಡ ಈಗ ಇಸ್ರೇಲ್ ಸೇನೆ ದಾಳಿ ಆರಂಭ ಮಾಡಿರುವುದು ಸಹಜವಾಗಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಅಮೆರಿಕ ಈ ವಿಚಾರದಲ್ಲಿ ಏನು ಹೇಳುತ್ತೆ ಎಂಬ ಕುತೂಹಲ ಮೂಡಿದೆ.












Click it and Unblock the Notifications