Israel & Hamas: ಹಮಾಸ್ ನಾಯಕನನ್ನು ಹತ್ಯೆ ಮಾಡಿದ ಇಸ್ರೇಲ್ ಸೇನೆ

ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಈಗಾಗಲೇ ಗಾಜಾ ಪಟ್ಟಿ ಪ್ರದೇಶವನ್ನು ಸರ್ವನಾಶ ಮಾಡಿ ಬಿಟ್ಟಿದೆ. ಹೀಗಿದ್ದಾಗ ಹೆಂಗೋ ಒದ್ದಾಡಿ ಯುದ್ಧಕ್ಕೆ ಬ್ರೇಕ್ ಹಾಕಲಾಗಿದ್ದು, ಕದನ ವಿರಾಮ ಘೋಷಣೆ ಮಾಡಲಾಗಿದೆ. ಗಾಜಾ ಪಟ್ಟಿಯಲ್ಲಿ ಬರೀ ಕುಸಿದು ಬಿದ್ದ ಕಟ್ಟಡ ಹಾಗೂ ಶವಗಳ ರಾಶಿ ಕಾಣುತ್ತಿದೆ. ಇಂತಹ ಸಮಯದಲ್ಲೇ ಲೆಬನಾನ್ ನೆಲದಲ್ಲಿ ಇಸ್ರೇಲ್‌ನ ಸೇನೆ ಹಮಾಸ್ ನಾಯಕನನ್ನು ಹತ್ಯೆ ಮಾಡಿದೆ.

ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಮತ್ತಷ್ಟು ಭಯಾನಕ ಸ್ವರೂಪ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಒತ್ತಡ ಹೇರಿ, ಗಾಜಾ ಪಟ್ಟಿಯಲ್ಲಿ ಇದೀಗ ಶಾಂತಿ ನೆಲೆಸುವಂತೆ ಮಾಡಲಾಗಿದೆ. ಇಸ್ರೇಲ್ ವಾಯು ಸೇನೆ ದಾಳಿಗೆ ಗಾಜಾ ಪಟ್ಟಿ ನಗರ ನರಕವಾಗಿದ್ದು, ಜನರೆಲ್ಲಾ ಚಲ್ಲಾಪಿಲ್ಲಿ ಆಗಿದ್ದಾರೆ. ಇದು ಹೇಗೋ ಸರಿ ಹೋಯಿತು ಅನ್ನುವಾಗಲೇ ಗಾಜಾ ಪಕ್ಕದಲ್ಲೇ ಇರುವ ಲೆಬನಾನ್‌ನಲ್ಲಿ ಹಮಾಸ್ & ಇಸ್ರೇಲ್ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಹಾಗಾದ್ರೆ ಏನಿದು ಹೊಸ ಆತಂಕ? ಮಧ್ಯಪ್ರಾಚ್ಯ ಮತ್ತೆ ಕೊತ ಕೊತ ಅಂತಿದೆಯಾ? ಮುಂದೆ ಓದಿ.

Allegedly Israel Is Killed Hamas Leader In Lebanon

ಹಮಾಸ್ ಮುಖಂಡರೇ ಇಸ್ರೇಲ್ ಟಾರ್ಗೆಟ್?

ಹೌದು, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ ಮೇಲೆ ಡ್ರೋನ್ ದಾಳಿ ನಡೆಸಿದೆ. ಇಸ್ರೇಲ್ ಹೀಗೆ ನಡೆಸಿದ ಅಟ್ಯಾಕ್ ಹಮಾಸ್‌ಗೆ ಮತ್ತೆ ಭಯ ಹುಟ್ಟಿಸಿದ್ದು, ಲೆಬನಾನ್ ಘಟಕದ ಹಮಾಸ್ ಮುಖ್ಯಸ್ಥ ಕೂಡ ಮೃತಪಟ್ಟಿರುವುದು ಕನ್ಫರ್ಮ್ ಆಗಿದೆ. ಮೃತ ಹಮಾಸ್ ಮುಖ್ಯಸ್ಥನನ್ನು ಮೊಹಮ್ಮದ್ ಶಹೀನ್ ಎಂದು ಗುರುತಿಸಲಾಗಿದೆ. ಇರಾನ್ ಬೆಂಬಲಿತ ದಾಳಿಯಲ್ಲಿ ಶಹೀನ್ ಕೃತ್ಯ ಸಾಬೀತು ಆಗಿತ್ತು ಎಂದು ಇಸ್ರೇಲ್ ಆರೋಪ ಮಾಡಿದೆ. ಹೀಗಾಗಿ ಲೆಬನಾನ್ ಜಾಗದಲ್ಲಿ ಕೂಡ ಹೊಸ ಯುದ್ಧದ ಆತಂಕ ಆವರಿಸಿದೆ.

ಯುದ್ಧದ ಬಳಿಕ ಗಾಜಾ ವಶಕ್ಕೆ?

ಗಾಜಾ ಪಟ್ಟಿಯ ಪ್ರಜೆಗಳು ಈಗಲೂ ಭೀಕರ ಯುದ್ಧದ ಭಯದಿಂದ ಹೊರಗೆ ಬಂದಿಲ್ಲ. 2023, ಅಕ್ಟೋಬರ್ 7 ರಂದು ಹಮಾಸ್ ಕ್ಷಿಪಣಿ ದಾಳಿಯನ್ನು ನಡೆಸಿ, ಇಸ್ರೇಲ್ ಸೇನೆ ಕೆಣಕುವ ಕೆಲಸ ಮಾಡಿತ್ತು. ಆ ನಂತರ ಗಾಜಾ & ಇಸ್ರೇಲ್ ಮಧ್ಯೆ ರಣಭೀಕರ ಯುದ್ಧ ಆರಂಭ ಆಗಿತ್ತು. ಹೀಗೆ ಯುದ್ಧ ಶುರುವಾದ ನಂತರ ಸಾಲು ಸಾಲು ಸಮಸ್ಯೆ ಎದುರಾಗಿಬಿಟ್ಟವು. ಈ ಕಾರಣಕ್ಕೆ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡಿ, ಕೆಲ ದಿನಗಳ ಹಿಂದಷ್ಟೇ ಕದನ ವಿರಾಮ ಘೋಷಣೆ ಮಾಡಲಾಗಿದೆ. ಆದರೆ ಈ ಸಮಯದಲ್ಲಿ ಲೆಬನಾನ್ ದೇಶದಲ್ಲಿ ಹೊಸ ತಿಕ್ಕಾಟ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+