ಲೆಬನಾನ್ ವಿರುದ್ಧ ಯರ್ರಾಬಿರ್ರಿ ದಾಳಿ ಮಾಡುತ್ತಿರುವ ಇಸ್ರೇಲ್ ಮಿಲಿಟರಿ?

ಇಸ್ರೇಲ್ & ಲೆಬನಾನ್ ನಡುವೆ ನಡೆಯುತ್ತಿರುವ ಘೋರ ಕದನ ಮತ್ತೊಂದು ಹಂತಕ್ಕೆ ಈಗ ಹೋಗಿ ಮುಟ್ಟುತ್ತಿದೆ. ಜಾಗತಿಕ ಮಟ್ಟದಲ್ಲಿ ಭಯ ಹುಟ್ಟಿಸಿರುವ ಯುದ್ಧ ಇದಾಗಿದ್ದು, ಈ ಕಾರಣಕ್ಕೆ ಇರಾನ್ & ಇಸ್ರೇಲ್ ಕೂಡ ಪರಸ್ಪರ ಕ್ಷಿಪಣಿ ದಾಳಿ ಮಾಡಿದ್ದವು. ಇದೆಲ್ಲ ಮೀರಿ ಇದೀಗ ತನ್ನ ಶತ್ರುಗಳ ನಾಶಕ್ಕೆ ಒನ್‌ಲೈನ್ ಅಜೆಂಡಾ ಇಟ್ಟುಕೊಂಡು ಮುಂದೆ ನುಗ್ಗುತ್ತಿರುವ ಇಸ್ರೇಲಿ ಮಿಲಿಟರಿ, ಇದೀಗ ಲೆಬನಾನ್ ನೆಲದ ಮೇಲೆ ಯರ್ರಾಬಿರ್ರಿ ದಾಳಿ ಮಾಡ್ತಾ ಇರುವ ಆರೋಪ ಕೇಳಿಬಂದಿದೆ.

ಲೆಬನಾನ್ ನೆಲದಲ್ಲಿ ಕಳೆದ ಒಂದು ತಿಂಗಳಿಂದ ಬರೀ ರಕ್ತಪಾತ ನಡೆಯುತ್ತಿದೆ. ಮೊದಲಿಗೆ ಆ ದೇಶದಲ್ಲಿ ಪೇಜರ್ಸ್ & ವಾಕಿಟಾಕಿ ಬ್ಲಾಸ್ಟ್ ಆಗಿ ಹತ್ತಾರು ಜನ ಮೃತಪಟ್ಟರು. ಈ ವೇಳೆ ನೂರಾರು ಜನರು, ಗಂಭೀರವಾಗಿ ಗಾಯಗೊಂಡು ಈಗಲೂ ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಹೀಗಿದ್ದಾಗ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದಾರೆ, ಹೀಗಾಗಿ ನಾವು ಕೂಡ ದಾಳಿ ಮಾಡುತ್ತೇವೆ ಅಂತಾ ಇಸ್ರೇಲ್ ಮುಂದೆ ನುಗ್ಗುತ್ತಿದೆ. ಇಂತಹ ಸಮಯದಲ್ಲೇ ಲೆಬನಾನ್ ಈಗ ನರಕವಾಗಿ ಬದಲಾಗುತ್ತಿದ್ದು, ಗಾಜಾ ಪಟ್ಟಿಯ ಸ್ವರೂಪ ಪಡೆಯುತ್ತಿದೆ.

Allegedly Israel Is Attacking On Lebanon Very Aggressively

2,300ಕ್ಕೂ ಹೆಚ್ಚು ಜನರ ಜೀವ...

ಹಿಜ್ಬುಲ್ಲಾ & ಇಸ್ರೇಲ್ ನಡುವೆ ಯುದ್ಧ ಶುರುವಾದ ನಂತರ ಲೆಬನಾನ್ ದೇಶದಲ್ಲಿ ಶವಗಳ ರಾಶಿಯೇ ಬೀಳುತ್ತಿದೆ. ಇಸ್ರೇಲ್ ವಿರುದ್ಧ ಇದೀಗ ಕೇಳಿಬಂದಿರುವ ಆರೋಪದ ಪ್ರಕಾರವೇ, ಇಸ್ರೇಲ್ ದಾಳಿ ಆರಂಭವಾದ ನಂತರ ಲೆಬನಾನ್‌ನಲ್ಲಿ ಒಟ್ಟಾರೆ 2,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೇ ನೂರಾರು ಜನರು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ನರಳುತ್ತಿದ್ದಾರೆ. ಇಷ್ಟಾದರೂ, ತನ್ನ ದಾಳಿಯನ್ನು ಇಸ್ರೇಲ್ ಸೇನೆ ಮತ್ತಷ್ಟು ಹೆಚ್ಚು ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಇಸ್ರೇಲ್‌ಗೆ ಅಮೆರಿಕದಿಂದ ಎಚ್ಚರಿಕೆ?

ದಕ್ಷಿಣ ಗಾಜಾದಲ್ಲಿ ಯುದ್ಧದ ಕಾರಣಕ್ಕಾಗಿ, ಹಿಂಸಾಚಾರ ಹೆಚ್ಚಾಗಿರುವ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕ ಈ ವಿಚಾರದಲ್ಲಿ ಕಠಿಣ ನಿಲುವು ತಳೆದಿದ್ದು, ಸೂಕ್ತ ಕ್ರಮಕ್ಕೆ ಇಸ್ರೇಲ್ ಎದುರು ಆಗ್ರಹಿಸಿದೆ. ಹೀಗಾಗಿ ನಮ್ಮ ಈ ಮಾತನ್ನು ಕೇಳದೇ ಇದ್ದರೆ ಪರಿಸ್ಥಿತಿ ಸರಿಯಾಗಿ ಇರಲ್ಲ ಎಂದು ಇಸ್ರೇಲ್‌ಗೆ ಪತ್ರ ಬರೆದಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಎಚ್ಚರಿಸಿದ್ದಾರೆ. ಹಾಗೇ ಅಮೆರಿಕದ ಭದ್ರತಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್‌ ಕೂಡ ಇಸ್ರೇಲ್‌ಗೆ ಈ ಬಗ್ಗೆ ವಾರ್ನಿಂಗ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+