Gaza War: ಗಾಜಾ ಸ್ಥಿತಿ ಮತ್ತಷ್ಟು ಸೂಕ್ಷ್ಮ, ಇಸ್ರೇಲ್ ಸೇನೆಯಿಂದ ಮುಂದುವರಿದ ದಾಳಿ
ಗಾಜಾ ಪಟ್ಟಿಯಲ್ಲಿ ಯುದ್ಧ ನಿಲ್ಲುತ್ತಿಲ್ಲ, ಒಂದು ಕಡೆ ಹಮಾಸ್ ಹಠ ಬಿಟ್ಟು ಒಪ್ಪಂದವನ್ನ ಮಾಡಿಕೊಳ್ಳುತ್ತಿಲ್ಲ. ಇನ್ನೊಂದು ಕಡೆ, ಇಸ್ರೇಲ್ ಕೂಡ ತನ್ನ ದಾಳಿಯನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಗಾಜಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಯುತ್ತಿದ್ದು ತಲ್ಲಣವೇ ಸೃಷ್ಟಿ ಆಗಿದೆ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಇನ್ನಷ್ಟು ಹೆಚ್ಚಾಗಿದ್ದು, ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.
ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತಂದರು ಅನ್ನುವಂತೆ ಹಾಮಾಸ್ & ಇಸ್ರೇಲ್ ನಡುವೆ ಮಾತುಕತೆ ಮೂಲಕ ಸರಿ ಹೋಗಬಹುದಾಗಿದ್ದ ವಿಚಾರ ಈಗಾಗಲೇ ಅರ್ಧ ಲಕ್ಷಕ್ಕೂ ಹೆಚ್ಚು ಜನರ ಜೀವ ಬಲಿ ಹಾಕುವಂತೆ ಆಗಿದೆ. ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿರುವ ಯುದ್ಧ ಈಗಾಗಲೇ ಸಾಮಾನ್ಯ ಜನರ ಬದುಕು ಬೀದಿಗೆ ತಂದಿದೆ ಎಂಬ ಆರೋಪದ ನಡುವೆ ಮತ್ತೆ, ಭೀಕರ ಘಟನೆಯೊಂದು ಇದೀಗ ಗಾಜಾ ಪಟ್ಟಿಯಲ್ಲಿ ನಡೆದು ಹೋಗಿದೆ. ಇದು ಮಧ್ಯಪ್ರಾಚ್ಯ ಭಾಗದಲ್ಲಿ ಇನ್ನಷ್ಟು ನೆಮ್ಮದಿ ಕೆಡಿಸಿದೆ.

ಗಾಜಾ ಪಟ್ಟಿಯಲ್ಲಿ 44 ಜನರ ಸಾವು?
ಇಸ್ರೇಲ್ ಸೇನೆ ದಾಳಿ ಮಾಡುತ್ತಿರುವ ಪರಿಣಾಮ, ಈಗ ಗಾಜಾ ಪಟ್ಟಿಯಲ್ಲಿ ತೀವ್ರ ರಕ್ತಪಾತವಾಗಿ ಹೋಗಿದೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ ಹೆಚ್ಚಾಗಿ ಮಕ್ಕಳು, ಮಹಿಳೆಯರು ಮೃತಪಟ್ಟು ಪರಿಸ್ಥಿತಿ ಗಂಭೀರವಾಗಿದೆ. ಇಸ್ರೇಲ್ ದಾಳಿಯ ಪರಿಣಾಮ 44 ಜನ ಮೃತಪಟ್ಟು ಹಲವರು ಗಂಭೀರವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೂಲಕ ಗಾಜಾ ಪಟ್ಟಿಯ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ. ಹಾಗೇ ಇನ್ನೊಂದು ಕಡೆ, ಸಂಧಾನ ಮಾಡಿಸುವ ಯತ್ನ ಕೂಡ ಮುಂದುವರಿದಿದೆ. ಆದರೆ ಸಂಧಾನ ನಡೆಸುವ ಪ್ರಯತ್ನಗಳು ಫಲ ನೀಡುತ್ತಿಲ್ಲ.












Click it and Unblock the Notifications