Israel-Iran War: ಇಸ್ರೇಲ್ ವಿರುದ್ಧ ಪರಮಾಣು ಬಾಂಬ್ ಹಾಕಲು ಸಿದ್ಧವಾದ ಇರಾನ್?
ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಯಾವುದೇ ಕಾರಣಕ್ಕೂ ಹಿಡಿತಕ್ಕೇ ಸಿಗದಂತೆ ಕಾಣುತ್ತಿದೆ. ಯಾಕಂದ್ರೆ ಒಂದು ಕಡೆ ಇಸ್ರೇಲ್ ಹಠ ಬಿಟ್ಟು ಶಾಂತಿ ಮಾತುಕತೆಗೆ ಮುಂದಾಗುತ್ತಿಲ್ಲ, ಹಾಗೇ ಇನ್ನೊಂದು ಕಡೆ ಇರಾನ್ ತನ್ನ ಬಳಿ ಇರುವ ವಿನಾಶಕಾರಿ ಅಸ್ತ್ರ ಹೊರಗೆ ತೆಗೆದು ಇಸ್ರೇಲ್‌ಗೆ ಬೆದರಿಕೆ ಹಾಕುವುದನ್ನ ನಿಲ್ಲಿಸುತ್ತಿಲ್ಲ. ಹೀಗಾಗಿ ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧ ನಡೆದು, ನಾಶವಾಗಿ ಹೋಗುವ ಮುನ್ಸೂಚನೆ ಇದೀಗ ಸಿಗುತ್ತಿರುವ ಸಮಯದಲ್ಲೇ ಇರಾನ್ ಬಗ್ಗೆ ಸ್ಪೋಟಕ ಮಾಹಿತಿ ಓಡಾಡುತ್ತಿದೆ. ಹಾಗಾದ್ರೆ, ಇಸ್ರೇಲ್ ವಿರುದ್ಧ ಪರಮಾಣು ಬಾಂಬ್ ಹಾಕಲು ಸಿದ್ಧವಾಯ್ತಾ ಇರಾನ್?
ಹೌದು, ಇರಾನ್ ದೇಶದ ಬಳಿ ಪರಮಾಣು ಸ್ಥಾವರಗಳು ಇದ್ದು & ವ್ಯವಸ್ಥಿತವಾಗಿ ಇರಾನ್ ದೇಶ ತನ್ನ ಬಳಿ ಪರಮಾಣು ಅಸ್ತ್ರಗಳನ್ನ ಸಿದ್ಧಮಾಡಿಕೊಂಡು ನಿಂತಿದೆ ಎಂಬ ಆರೋಪ ಇದೆ. ಅದರಲ್ಲೂ ತನ್ನ ಸುತ್ತಮುತ್ತ ಬರೀ ಶತ್ರುಗಳನ್ನೇ ಸೃಷ್ಟಿಸಿಕೊಂಡಿರುವ ಇರಾನ್ ದೇಶದಲ್ಲಿ, ಪರಮಾಣು ಅಸ್ತ್ರದ ಅಗತ್ಯತೆ ಇದೆ ಎಂಬ ವಾದ ಮೊದಲಿನಿಂದ ಕೂಡ ಇತ್ತು. ಹೀಗಿದ್ದಾಗ, ಇತ್ತೀಚೆಗೆ ಇಸ್ರೇಲ್ ವಿರುದ್ಧ ಇರಾನ್ ದೊಡ್ಡ ಯುದ್ಧ ಸಾರಿದಂತೆ ಕಾಣುತ್ತಿದೆ. ಹೀಗೆ ಎಲ್ಲ ಬೆಳವಣಿಗೆ ನಡುವೆ ದಿಢೀರ್ ಇರಾನ್ ದೇಶ ಯಾರಿಗೂ ತಿಳಿಯದಂತೆ ರಹಸ್ಯವಾಗಿ ನೆಲದಲ್ಲಿ ಪರಮಾಣು ಬಾಂಬ್ ಪರೀಕ್ಷೆ ನಡೆಸಿದೆಯಾ? ಎಂಬ ಪ್ರಶ್ನೆ ಮೂಡಿದೆ.

ಇರಾನ್ ಸಮೀಪದಲ್ಲಿ ಪರಮಾಣು ಬಾಂಬ್...
ಇಸ್ರೇಲ್ ವಿರುದ್ಧ ಇರಾನ್ ಪರಮಾಣು ಬಾಂಬ್ ಹಾಕುತ್ತಾ? ಈ ಮೂಲಕ ಇರಾನ್ ಭೂಮಿ ನಾಶಕ್ಕೆ ಮುನ್ನುಡಿ ಬರೆಯುತ್ತಾ? ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. ಈ ಪ್ರಶ್ನೆ ಇದೀಗ ಯಾಕೆ ಅಂದ್ರೆ, ಇರಾನ್ ದೇಶದ ಸೆಮ್‌ನನ್ ಪ್ರಾಂತ್ಯದ ಅರದಾನ್ ನಗರದ ಸುತ್ತಮುತ್ತಲೂ ದಿಢೀರ್ ಭೂಕಂಪನ ಅನುಭವ ಆಗಿದೆ ಎಂದು ವರದಿಯಾಗಿದೆ. ಈ ಭೂಕಂಪನ ಇದೀಗ ಹೊಸ ಭಯ ಹುಟ್ಟು ಹಾಕಿದ್ದು, ಪರಮಾಣು ಅಸ್ತ್ರದ ಬೆದರಿಕೆ ಸೃಷ್ಟಿಸಿದೆ.
ಮೊನ್ನೆ ಅಂದ್ರೆ ಅಕ್ಟೋಬರ್ 5 ರ ಶನಿವಾರ ಈ ರೀತಿಯಾಗಿ ಭೂಕಂಪನ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಾಗಿದೆ. ಯಾಕಂದ್ರೆ ಪರಮಾಣು ಬಾಂಬ್ ಪರೀಕ್ಷೆ ಸಮಯದಲ್ಲಿ ಭೂಮಿ ಕಂಪಿಸುವ ಘಟನೆಗಳು ಈ ಹಿಂದೆ ಕೂಡ ನಡೆದಿದ್ದವು. ಅದರಲ್ಲೂ ಪರಮಾಣು ಬಾಂಬ್ ಅಂದ್ರೆ ನ್ಯೂಕ್ಲಿಯರ್ ಬಾಂಬ್‌ಗಳು ತುಂಬಾ ಶಕ್ತಿಶಾಲಿ ಆಗಿದ್ದು ಭೂಮಿ ಆ ತೀವ್ರತೆಗೆ ನಡುಗುತ್ತದೆ. ಈಗ ಕೂಡ ಅದೇ ರೀತಿ ಇರಾನ್ ದೇಶದ ಪರಮಾಣು ಬಾಂಬ್ ಪರೀಕ್ಷೆಗೆ ಭೂಮಿ ನಡುಗಿದೆಯಾ?
ಇಸ್ರೇಲ್ ಕೈಬಿಟ್ಟ ದೊಡ್ಡಣ್ಣ ಅಮೆರಿಕ?
ಅಂದಹಾಗೆ ಇಸ್ರೇಲ್ ಈಗ ಗಾಜಾ, ಲೆಬನಾನ್, ಇರಾನ್, ಸಿರಿಯಾ ವಿರುದ್ಧ ದೊಡ್ಡ ಯುದ್ಧ ಮಾಡುತ್ತಿದೆ. ಪರಿಸ್ಥಿತಿ ಕೈಮೀರಿದಾಗ ಅಮೆರಿಕ ಇದೀಗ ಇಸ್ರೇಲ್ ಸೇನೆಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದನ್ನೇ ನಿಲ್ಲಿಸಲಿದೆಯಾ? ಎಂಬ ಪ್ರಶ್ನೆಯು ಮೂಡಿದೆ. ಹಾಗೇ ಈ ಕುರಿತು ಇದೀಗ ಒತ್ತಡಗಳು ಕೂಡ ಅಮೆರಿಕದ ಮೇಲೆ ಹೆಚ್ಚಾಗುತ್ತಿದೆ. ಅಲ್ಲದೆ ಇದರಿಂದ ಅಮೆರಿಕ & ಇಸ್ರೇಲ್ ಸಂಬಂಧ ಏನಾಗಲಿದೆ? ಎಂಬ ಚರ್ಚೆಯೂ ನಡೆಯುತ್ತಿದೆ. ಅಕಸ್ಮಾತ್ ಅಮೆರಿಕ ಕೈಬಿಟ್ಟು ಕೂತರೆ ಇಸ್ರೇಲ್ ಪರಿಸ್ಥಿತಿ ಊಹೆಗೂ ನಿಲುಕುವುದಿಲ್ಲ.












Click it and Unblock the Notifications