ಜಗತ್ತಿಗೇ ಹೊಗೆ ಹಾಕಿಸಲು ಮಧ್ಯಪ್ರಾಚ್ಯದ ದೇಶಗಳು ಸಜ್ಜು? ಕೋಳಿ ಜಗಳದಿಂದ 3ನೇ ಮಹಾಯುದ್ಧ ಗ್ಯಾರಂಟಿ?

ಇಸ್ರೇಲ್ & ಲೆಬನಾನ್‌ ನಡುವೆ ಹೊತ್ತಿಕೊಂಡಿರುವ ಕಿಚ್ಚು ಇದೀಗ ಕಾಡ್ಗಿಚ್ಚೇ ಆಗಿ ಹೋಗಿದೆ. ಅದೆಷ್ಟು ಹೇಳಿದರೂ ಇಸ್ರೇಲ್ & ಲೆಬನಾನ್‌ ಮಾತು ಕೇಳುತ್ತಿಲ್ಲ. ಇದರ ಪರಿಣಾಮ ಇದೀಗ ಇಡೀ ಜಗತ್ತಿಗೆ ಭಯ ಶುರುವಾಗಿದೆ. ಯಾಕಂದ್ರೆ ಇಸ್ರೇಲ್ & ಲೆಬನಾನ್‌ ಕಿತ್ತಾಡುತ್ತಿರುವ ರೀತಿ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಘೋರ ಕಾಳಗ ನಡೆಯುವ ಭಯ ಆವರಿಸಿದೆ. ಇಂತಹ ಸಮಯದಲ್ಲೇ ಸುಮ್ಮನೆ ಕೂರದ ಹಿಜ್ಬುಲ್ಲಾ ಬಂಡುಕೋರರ ಸಂಘಟನೆಯು ದಿಢೀರ್ ಇಸ್ರೇಲ್ ಪ್ರಮುಖ ನಗರದ ಮೇಲೆ ಕ್ಷಿಪಣಿ ಉಡಾಯಿಸಿದೆ.

ಹೌದು, ಎಲ್ಲಾ ತಣ್ಣಗಾಗುತ್ತಿದೆ ಅಂತಾ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯದಲ್ಲೇ ಈ ಹಿಜ್ಬುಲ್ಲಾ ಬಂಡುಕೋರರ ಸಂಘಟನೆ ಮತ್ತೆ ಬಾಲ ಬಿಚ್ಚಿದೆ ಎಂಬ ಆರೋಪ ಕೇಳಿಬಂದಿದೆ. ಇಸ್ರೇಲ್ ನಗರದ ಮೇಲೆಯೇ ಹಿಜ್ಬುಲ್ಲಾ ಭೀಕರ ದಾಳಿ ನಡೆಸಿದ್ದು, ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಾಗೇ ಟೆಲ್‌ ಅವಿವ್‌ ನಗರದ ಮೇಲೆ ಕ್ಷಿಪಣಿ ಉಡಾಯಿಸಿದ ಪರಿಣಾಮ ಈಗ ಭಾರಿ ದೊಡ್ಡ ಪ್ರಮಾಣದಲ್ಲಿ ಇಸ್ರೇಲ್‌ಗೆ ನಷ್ಟವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಇಬ್ಬರ ನಡುವೆ ನಡೆಯುತ್ತಿರುವ ಕಿತ್ತಾಟವು ಮತ್ತೊಂದು ಹಂತಕ್ಕೆ ಹೋಗುತ್ತಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ಯುದ್ಧ ಸಾರಿದ ಸಮಯದಲ್ಲೇ ಹೊಸ ಸಮಸ್ಯೆ ಶುರುವಾಗಿದೆ.

Allegedly Hezbollah Attacked On The Israel Main City

ಇಸ್ರೇಲ್ ದೇಶದಲ್ಲಿ ಸೈರನ್‌ ಸದ್ದು!

ಹಿಜ್ಬುಲ್ಲಾ ಬಂಡುಕೋರರು ಮಿಸೈಲ್ಸ್ ಹಾರಿಸಿದ ನಂತರ ದಿಢೀರ್ ಸೈರನ್‌ ಸದ್ದು ಮೊಳಗಿ ನಡುಕ ಶುರುವಾಗಿತ್ತು. ಟೆಲ್ ಅವಿವ್ ಮಾತ್ರವಲ್ಲದೆ ಇಸ್ರೇಲ್‌ನ ಕೇಂದ್ರ ಸ್ಥಾನದಲ್ಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಸೈರನ್‌ ಸದ್ದು ಭಯದ ವಾತಾವರಣ ಹುಟ್ಟು ಹಾಕಿತ್ತು. ತಕ್ಷಣವೇ ಅಲರ್ಟ್ ಆಗಿದ್ದ ಇಸ್ರೇಲ್ ಕ್ಷಿಪಣಿ ನಿರೋಧಕ ವ್ಯವಸ್ಥೆಯು, ತಕ್ಷಣಕ್ಕೆ ಹಿಜ್ಬುಲ್ಲಾ ಬಂಡುಕೋರರು ದಾಳಿ ಮಾಡಿದ್ದ ಕ್ಷಿಪಣಿಗಳನ್ನ ಆಕಾಶದಲ್ಲೇ ಧ್ವಂಸ ಮಾಡಿದೆ ಎನ್ನಲಾಗಿದೆ. ಹೀಗಾಗಿ ಸಾವು & ನೋವಿನ ವರದಿ ಆಗಿಲ್ಲವಾದರೂ, ಕಟ್ಟಡಗಳಿಗೆ ಮತ್ತು ವಾಹನಗಳಿಗೆ ಕ್ಷಿಪಣಿ ಬಡಿದಿವೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಸಾವಿನ ಸಂಖ್ಯೆ 560ಕ್ಕೆ ಏರಿಕೆ

ಇಸ್ರೇಲ್ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಿದೆ, ಯಾಕಂದ್ರೆ ಗಾಜಾ ಪಟ್ಟಿ ಯುದ್ಧದೊಂದಿಗೆ ಹಿಜ್ಬುಲ್ಲಾ ಜತೆಗೂ ಕಿರಿಕ್ ಶುರುವಾಗಿದೆ. ಹೀಗಾಗಿ ಲೆಬನಾನ್ ವಿರುದ್ಧ ಕೂಡ ದಾಳಿ ಮಾಡ್ತಿದೆ. ಲೆಬನಾನ್ ದೇಶದ ನೂರಾರು ಜಾಗಗಳನ್ನು ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ ಮಾಡುತ್ತಿದೆ. ಈ ಪೈಕಿ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಸದಸ್ಯರು ಹಾಗೂ ಮುಖಂಡರ ಕಥೆಯನ್ನೇ ಮುಗಿಸಿ ಹಾಕಲು ಇದೀಗ ಇಸ್ರೇಲ್ ಸಜ್ಜಾದಂತೆ ಕಾಣುತ್ತಿದೆ. ಹೀಗಾಗಿಯೇ ದಾಳಿ ತೀವ್ರತೆಯ ಪಡೆದುಕೊಂಡಿದೆ. ನೋಡ ನೋಡುತ್ತಲೇ ಲೆಬನಾನ್ ನೆಲದಲ್ಲಿ ಸಾವಿನ ಸಂಖ್ಯೆಯು 560ಕ್ಕೆ ಏರಿಕೆಯಾಗಿದ್ದು, ಹಿಜ್ಬುಲ್ಲಾದ ಮತ್ತೊಬ್ಬ ಕಮಾಂಡರ್ ಜೀವ ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+