‘ಹಮಾಸ್’ ಎಂಬ ಹಾವು ಸಾಕಿ ತಾನೇ ಕಚ್ಚಿಸಿಕೊಂಡ ಇಸ್ರೇಲ್ ಪ್ರಧಾನಿ?

ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈವರೆಗೂ 10 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟು, ಸಾವಿರಾರು ಅಮಾಯಕರು ನರಳುತ್ತಿದ್ದಾರೆ. ಅದರಲ್ಲೂ ಗಾಜಾಪಟ್ಟಿ ಇಸ್ರೇಲ್ ಸೇನೆ ದಾಳಿ ಹಿನ್ನೆಲೆ ಅಕ್ಷರಶಃ ನರಕವಾಗಿದೆ. 9 ಸಾವಿರಕ್ಕೂ ಹೆಚ್ಚು ಗಾಜಾಪಟ್ಟಿ ಜನ ಯುದ್ಧಕ್ಕೆ ಈಗ, ಬಲಿಯಾಗಿರುವ ಆರೋಪ ಕೇಳಿಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ತಾನೆ ಸಾಕಿದ್ದ 'ಹಮಾಸ್' ಎಂಬ ಹಾವು ಈಗ ಇಸ್ರೇಲ್‌ಗೆ ಕಚ್ಚಿದೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಪ್ಯಾಲೆಸ್ತೀನ್ ವಿರುದ್ಧ ಇದೇ ಹಮಾಸ್ ಉಗ್ರರನ್ನ ಇಸ್ರೇಲ್ ಹಾಲಿ ಪ್ರಧಾನಿಯಾದ ಬೆಂಜಮಿನ್ ನೆತನ್ಯಾಹು ಸಾಕಿರುವ ಆರೋಪ ಕೇಳಿಬಂದಿತ್ತು. ಅದರಲ್ಲೂ ಗಾಜಾಪಟ್ಟಿಯ ಮೇಲೆ ಮೊಹಮ್ಮದ್ ಅಬ್ಬಾಸ್ ಹಿಡಿತ ಕಡಿಮೆ ಮಾಡಲು ಹಮಾಸ್‌ಗೆ ನೆತನ್ಯಾಹು ಇಂತಹ ಬೆಂಬಲ ನೀಡಿದ್ದರು ಎಂಬ ಆರೋಪ ಪದೇ ಪದೆ ಕೇಳಿಬರುತ್ತಿತ್ತು. ಇದರ ಜೊತೆ ಉಗ್ರರಿಗೆ ಹಣ ಪೂರೈಕೆ ಆಗುವ ರೀತಿ ಬೆಂಜಮಿನ್ ನೆತನ್ಯಾಹು ನೋಡಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಬರುವ ಸಮಯದಲ್ಲೇ ಈಗ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ.

Allegedly Hamas Group Got Help From Israel PM Netanyahu Government

ಅಮೆರಿಕ + ಲಾಡೆನ್ = ಇಸ್ರೇಲ್ + ಹಮಾಸ್?

ನಿಮಗೆಲ್ಲಾ ಗೊತ್ತಿರುವಂತೆ ರಷ್ಯಾ ವಿರುದ್ಧ ರೊಚ್ಚಿಗೇಳಿಸಲು ಲಾಡೆನ್ ರೀತಿಯ ಹಲವರಿಗೆ ಅಮೆರಿಕ ಸಹಾಯ ಮಾಡಿತ್ತು. ಆದರೆ ಕಡೆಗೆ ಆಗಿದ್ದೇನು? ಅದೇ ಒಸಾಮಾ ಬಿನ್ ಲಾಡೆನ್ ಅಮೆರಿಕದ ಮೇಲೆ ದಾಳಿ ಮಾಡಿ, ಸಾವಿರಾರು ಜನರನ್ನು ಕೊಂದು ಹಾಕಿದೆ. ಇದೇ ರೀತಿ, ಇದೀಗ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರ ಕೂಡ ಉಗ್ರರನ್ನು ಪೋಷಣೆ ಮಾಡಿರುವ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪ, ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಬಳಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಹಮಾಸ್‌ಗೆ ಪರೋಕ್ಷವಾಗಿ ಸಹಾಯ?

2021 ರಲ್ಲಿ ನೆತನ್ಯಾಹು ಮತ್ತೆ ಅಧಿಕಾರಕ್ಕೆ ಬಂದ ನಂತರ, ಗಾಜಾಪಟ್ಟಿ ಜನರಿಗೆ ಸುಮಾರು 2,000ದಿಂದ 3,000 ಕೆಲಸದ ಪರವಾನಗಿ ನೀಡಲಾಯಿತು. ನಂತರ ಈ ಸಂಖ್ಯೆ 5,000 ಕ್ಕೆ ಏರಿಕೆ ಆಗಲು ನೆತನ್ಯಾಹು ನಂತರದ ಸರ್ಕಾರ ಕಾರಣವಾಯಿತು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ಜನವರಿ 2023ರಲ್ಲಿ ಮತ್ತೆ ನೆತನ್ಯಾಹು ಅಧಿಕಾರಕ್ಕೆ ಮರಳಿದಾಗ, ಗಾಜಾದ ಜನರಿಗೆ ನೀಡುವ ಕೆಲಸದ ಪರವಾನಗಿಗಳ ಸಂಖ್ಯೆ ಸುಮಾರು 20,000 ಕ್ಕೆ ಏರಿಕೆ ಕಂಡಿದೆ. ಹೀಗೆ ತನ್ನ ತಪ್ಪಿನ ಪರಿಣಾಮವಾಗಿ ನೆತನ್ಯಾಹು ಈಗ ಇಸ್ರೇಲ್ ದೇಶವನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾಕಂದ್ರೆ ಇಸ್ರೇಲ್ ನೆಲದಲ್ಲಿ, ಹೀಗೆ ಕೆಲಸ ಪಡೆದವರು ಹಮಾಸ್ ಪರವಾಗಿ ಹಣದ ಹೊಳೆ ಹರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಮಾಸ್ ಪರ ನಿಲುವು ಉಲ್ಟಾ?

ಅಂದಹಾಗೆ ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್‌ ಮೇಲೆ 5000ಕ್ಕೂ ಹೆಚ್ಚು ರಾಕೆಟ್‌ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್‌ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಇಷ್ಟೆಲ್ಲದರ ನಡುವೆ ಇಸ್ರೇಲ್ ಪ್ರಧಾನಿ ಈ ಹಿಂದೆ ಮಾಡಿದ್ದ ತಪ್ಪಿನ ಬಗ್ಗೆ ಚರ್ಚೆ ಶುರುವಾಗಿದೆ. ಮೊದಲೇ ಹೇಳಿದಂತೆ ಗಾಜಾಪಟ್ಟಿ ಮೇಲೆ, ಪ್ಯಾಲೆಸ್ತೀನಿ ಹಿಡಿತ ತಪ್ಪಿಸಲು ಬೆಂಜಮಿನ್ ನೆತನ್ಯಾಹು ಹೂಡಿದ್ದ ದಾಳ ಈಗ ಸಂಪೂರ್ಣ ಉಲ್ಟಾ ಹೊಡೆದಂತೆ ಕಾಣುತ್ತಿದೆ. ಅದು ಹೇಗೆ ಗೊತ್ತಾ?

Allegedly Hamas Group Got Help From Israel PM Netanyahu Government

ಹಮಾಸ್‌ಗೆ ಸಹಾಯ ಮಾಡಿದ್ದ ಇಸ್ರೇಲ್?

ಬೆಂಜಮಿನ್ ನೆತನ್ಯಾಹು, ಹಿಂದೆ ಗಾಜಾಪಟ್ಟಿ ಭಾಗದಲ್ಲಿ ಹಮಾಸ್ ಅಧಿಕಾರ ಹಿಡಿಯಲು ಸಾಕಷ್ಟು ಸಹಾಯ ಮಾಡಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಹಮಾಸ್ ಉಗ್ರರಿಗೆ ನೆರವಾಗುವ ರೀತಿ ನಿಯಮಗಳನ್ನ ತಂದು. ಹಮಾಸ್ ಉಗ್ರರಿಗೆ ಹಣದ ಹರಿವು ಹೆಚ್ಚಾಗಲು ಬೆಂಜಮಿನ್ ನೆತನ್ಯಾಹು ಪರೋಕ್ಷ ಕಾರಣ ಎಂಬ ಗಂಭೀರ ಆರೋಪ ಕೂಡ ಇದೆ. ಹೀಗೆ ಇಷ್ಟೆಲ್ಲಾ ಆರೋಪಗಳ ನಡುವೆ ಹಮಾಸ್ ಮತ್ತು ಇಸ್ರೇಲ್ ನಡುವೆ ಬೆಂಕಿ ಹೊತ್ತಿದೆ. ಈ ಸಮಯದಲ್ಲೇ ಬೆಂಜಮಿನ್ ನೆತನ್ಯಾಹು ಮಾಡಿದ ಎಡವಟ್ಟು ಬಗ್ಗೆ ಚರ್ಚೆ ಶುರುವಾಗಿದೆ. ಅಲ್ಲದೆ ಇಸ್ರೇಲ್ ಒಳಗೆ ಮೆಲ್ಲಗೆ ಬೆಂಜಮಿನ್ ನೆತನ್ಯಾಹು ವಿರುದ್ಧ ಪ್ರತಿಭಟನೆಗಳು ಕೂಡ ತೀವ್ರವಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+