ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿದ ರಷ್ಯಾ, ಬಾಲಕಿ ಬಲಿ & ಹಲವರಿಗೆ ಗಾಯ

ಉಕ್ರೇನ್ & ರಷ್ಯಾ ನಡುವಿನ ತಿಕ್ಕಾಟದಲ್ಲಿ ಬಲಿಯಾಗುತ್ತಿರುವ ಅಮಾಯಕ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ರಷ್ಯಾ ಸೇನೆ ಇದೀಗ ರೊಚ್ಚಿಗೆದ್ದು ಅಟ್ಯಾಕ್ ಮಾಡುತ್ತಾ ಇದ್ದು, ಉಕ್ರೇನ್ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಯುದ್ಧದಲ್ಲಿ ಪಾಶ್ಚಿಮಾತ್ಯ ದೇಶಗಳು ಕೈಜೋಡಿಸಿವೆ ಎಂದು ಆರೋಪ ಮಾಡುತ್ತಿರುವ ರಷ್ಯಾ ತನ್ನ ದಾಳಿಯ ತೀವ್ರತೆ ಹೆಚ್ಚು ಮಾಡುತ್ತಿದೆ. ಅದೇ ರೀತಿ ಇದೀಗ ರಷ್ಯಾ ಸೇನೆ ಹಾರಿಸಿರುವ ಸ್ಫೋಟಕ ವಸ್ತು ಬಾಲಕಿಯನ್ನು ಬಲಿ ಪಡೆದು, ಹಲವರನ್ನು ಆಸ್ಪತ್ರೆ ಸೇರುವಂತೆ ಮಾಡಿದೆ.

ರಷ್ಯಾ ಯಾವಾಗ ಉಕ್ರೇನ್ ವಿರುದ್ಧ ದಾಳಿ ಮಾಡಲು ನಿರ್ಧಾರ ಮಾಡಿತ್ತೋ ಆ ಕ್ಷಣದಿಂದ ಇಡೀ ಜಗತ್ತಿನ ನೆಮ್ಮದಿ ಹಾಳಾಗಿ ಹೋಗಿದೆ, ಎಂಬುದು ಪಾಶ್ಚಿಮಾತ್ಯ ದೇಶಗಳ ಆರೋಪ. ಆದರೆ ರಷ್ಯಾ ಮಾತ್ರ, ತನ್ನ ಸುರಕ್ಷತೆಗಾಗಿ ಈ ರೀತಿ ಉಕ್ರೇನ್ ವಿರುದ್ಧ ದಾಳಿ ಮಾಡಿದ್ದೇವೆ ಎನ್ನುತ್ತಿದೆ. ಹೀಗಿದ್ದಾಗಲೇ ಉಕ್ರೇನ್ ನೆಲದ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡಿದೆ ರಷ್ಯಾ ಮಿಲಿಟರಿ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗ ಮೈದಾನ ಒಂದಕ್ಕೆ ಬಿದ್ದಿರುವ ರಷ್ಯಾದ ಬಾಂಬ್ ಮತ್ತು ಕಟ್ಟಡ ಒಂದಕ್ಕೆ ಬಡಿದ ರಷ್ಯಾ ಸೇನೆ ಕ್ಷಿಪಣಿ ಎಂತಹ ಅನಾಹುತ ಸೃಷ್ಟಿ ಮಾಡಿದೆ ಗೊತ್ತಾ?

Allegedly Girl Killed And Several Got Injured In Ukraine After The Russian Attack

ರಷ್ಯಾ ದಾಳಿಯಲ್ಲಿ 59 ಜನ...

ಉಕ್ರೇನ್ ದೇಶದ ಪ್ರಮುಖ ನಗರಗಳ ಪೈಕಿ ಒಂದಾಗಿರುವ ಖಾರ್ಕೀವ್ ನಗರದ ಮೇಲೆ ಈಗ ರಷ್ಯಾ ಸೇನೆಯು ಕೆಂಗಣ್ಣು ಬೀರಿದೆ. ಯಾಕಂದ್ರೆ ರಷ್ಯಾ ದೇಶದ ಗಡಿಯಲ್ಲೇ ಈ ನಗರ ಇದ್ದು ದಾಳಿ ಮಾಡಲು ಅನುಕೂಲ ಒದಗಿಸಿದೆ. ಹೀಗಿದ್ದಾಗ ರಷ್ಯಾ ಸೇನೆಯು ಈ ನಗರದ ಮೇಲೆ ಮನಸ್ಸಿಗೆ ಬಂದ ರೀತಿ ಮಿಸೈಲ್ & ಬಾಂಬ್ ದಾಳಿ ನಡೆಸುತ್ತಿದೆ. ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಖಾರ್ಕೀವ್ ನಗರ ನಲುಗಿ ಹೋಗಿದ್ದು, ರಷ್ಯಾ ಒಂದೇ ದಿನ ನಡೆಸಿದ ದಾಳಿಯಲ್ಲಿ ಸುಮಾರು 7 ಜನ ಮೃತಪಟ್ಟು 59 ಜನ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ರಷ್ಯಾ ಅಬ್ಬರಕ್ಕೆ ಉಕ್ರೇನ್ ಉಡೀಸ್?

ಒಟ್ನಲ್ಲಿ ರಷ್ಯಾ & ಉಕ್ರೇನ್ ಮಧ್ಯೆ ತಿಕ್ಕಾಟ ಪ್ರತಿಕ್ಷಣ ಹೆಚ್ಚಾಗುತ್ತಲೇ ಇದ್ದು, ಜನ ನಲುಗಿದ್ದಾರೆ. ಅದ್ರಲ್ಲೂ ರಷ್ಯಾ ಮಿಲಿಟರಿ ಇದೀಗ ಉಕ್ರೇನ್ ನೆಲದ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಾ ತನ್ನ ಆಕ್ರೋಶ ಹೊರ ಹಾಕುತ್ತಿದೆ. ಈ ಸಮಯದಲ್ಲಿ, ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ಬೆಂಬಲಕ್ಕೆ ನಿಂತಿವೆ ಎಂಬುದು ರಷ್ಯಾ ಆರೋಪ. ರಷ್ಯಾ ಸೇನೆ ಇದರ ಬಗ್ಗೆ ಮತ್ತಷ್ಟು ಆಕ್ರೋಶಗೊಂಡು ದಾಳಿಯ ತೀವ್ರತೆಯನ್ನ ಹೆಚ್ಚು ಮಾಡಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ಗಲಾಟೆ ಪರಿಣಾಮ ಸಾಮಾನ್ಯ ಜನರು ನಲುಗಿ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+