Ukraine War: ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಉಕ್ರೇನ್ ಬಸ್ ಉಡೀಸ್, 9 ನಾಗರಿಕರ ಸಾವು?

ರಷ್ಯಾ & ಉಕ್ರೇನ್ ನಡುವೆ ಜಗಳ ನಿಲ್ಲುತ್ತಿಲ್ಲ, ಇಬ್ಬರ ಈ ತಿಕ್ಕಾಟದ ಪರಿಣಾಮ ಈಗಾಗಲೇ ಲಕ್ಷ ಲಕ್ಷ ಜನ ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ಈಗಾಗಲೇ ಯುರೋಪ್ ಸರ್ವನಾಶ ಆಗಿ ಹೋಗಿದೆ. ಇಷ್ಟೆಲ್ಲಾ ಗಲಭೆ ನಡೆದು, ಹಿಂಸಾಚಾರ ಭುಗಿಲೆದ್ದರೂ ಯುದ್ಧ ನಿಲ್ಲಿಸಲು ರಷ್ಯಾ & ಉಕ್ರೇನ್ ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಇಷ್ಟೆಲ್ಲದರ ನಡುವೆ ಇಂದು ರಷ್ಯಾ ನಡೆಸಿರುವ ಡ್ರೋನ್ ದಾಳಿಯಲ್ಲಿ ಉಕ್ರೇನ್ ಬಸ್ ಉಡೀಸ್ ಆಗಿದ್ದು, 9 ನಾಗರಿಕರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರಷ್ಯಾ ಸೇನೆ ಬೇಕು ಅಂತಲೇ ಉಕ್ರೇನ್ ಬಸ್‌ನ ಟಾರ್ಗೆಟ್ ಮಾಡಿ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಹೀಗೆ ರಷ್ಯಾ ಕಡೆಯಿಂದ ಹಾರಿದ್ದ ಡ್ರೋನ್ ಒಂದು ನೇರ ಉಕ್ರೇನ್ ಪ್ರಜೆಗಳು ಪ್ರಯಾಣ ಮಾಡುತ್ತಿದ್ದ ಬಸ್ ಮೇಲೆ ದಾಳಿ ಮಾಡಿದೆ. ಪರಿಣಾಮ ಒಟ್ಟು 9 ನಾಗರಿಕರು ಬಲಿಯಾಗಿದ್ದು, ಇನ್ನೂ ಹಲವರ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಪ್ರಮಾಣ ಏರಿಕೆ ಕಾಣುವ ಭಯ ಕೂಡ ಕಾಡುತ್ತಿದೆ. ಮತ್ತೊಂದು ಕಡೆ ಈ ಘಟನೆ ಹಿನ್ನೆಲೆ ಇದೀಗ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿದೆ. ಅಲ್ಲದೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಅಂತಾ ಇದೀಗ ಜಾಗತಿಕವಾಗಿ ಮತ್ತಷ್ಟು ಒತ್ತಡ ಹೆಚ್ಚಾಗಿದೆ.

Allegedly 9 Civilians Has Been Killed In Russian Drone Strike On Ukrainian Bus

ಅಮೆರಿಕ ಖಡಕ್ ಕ್ರಮ ಕೈಗೊಳ್ಳುತ್ತಾ?

ಡೊನಾಲ್ಡ್ ಟ್ರಂಪ್ ಈಗಾಗಲೇ ರಷ್ಯಾ ಜೊತೆಗೆ ಹಲವು ಬಾರಿ ಮಾತುಕತೆ ನಡೆಸಿದ್ದು, ಯುದ್ಧ ನಿಲ್ಲಿಸಬೇಕು ಅಂತಾ ಒತ್ತಡ ಹಾಕುತ್ತಿದ್ದಾರೆ. ಹೀಗಿದ್ದರೂ ಯುದ್ಧ ನಿಂತಿಲ್ಲ, ಬದಲಾಗಿ ಈ ಫೈಟಿಂಗ್ ಮತ್ತೊಂದು ಹಂತಕ್ಕೆ ಹೋಗುತ್ತಿದ್ದು ಭಾರಿ ದೊಡ್ಡ ಕಲಹ ಏರ್ಪಟ್ಟಿದೆ. ಹೀಗಾಗಿ ಇದೀಗ ಪ್ರಪಂಚದ ಮೂಲೆ ಮೂಲೆಯಲ್ಲು ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ಆಕ್ರೋಶದ ಕಹಳೆ ಮೊಳಗಿದೆ. ಅಲ್ಲದೆ ಇದೀಗ ರಷ್ಯಾ ಸೇನೆ ಉಕ್ರೇನ್ ನಾಗರಿಕರನ್ನು ಬಲಿ ತೆಗೆದುಕೊಂಡ ಘಟನೆ ಹಿನ್ನೆಲೆ ಅಮೆರಿಕ ಖಡಕ್ ಕ್ರಮ ಕೈಗೊಳ್ಳುತ್ತಾ? ಎಂಬ ಪ್ರಶ್ನೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+