ಗಾಜಾ ಪಟ್ಟಿ ರಣರಣ.. ಇಸ್ರೇಲ್ ದಾಳಿಗೆ ನರಳಿ ಹೋದವರು ಎಷ್ಟು ಜನ?
ಇಸ್ರೇಲ್ & ಹಮಾಸ್ ನಡುವೆ ಹೊತ್ತಿಕೊಂಡಿರುವ ಬೆಂಕಿ ದೊಡ್ಡ ಕಾಡ್ಗಿಚ್ಚೇ ಆಗಿದೆ. ಹೀಗೆ ತಿಕ್ಕಾಟ ಜೋರಾದ ಸಮಯದಲ್ಲೇ ಯುದ್ಧ ನಿಲ್ಲಿಸಲು ಜಗತ್ತಿನ ನೂರಾರು ದೇಶಗಳು ತಮ್ಮ ತಮ್ಮ ಪ್ರಯತ್ನ ಆರಂಭಿಸಿವೆ. ಆದರೂ ಯುದ್ಧ ನಿಲ್ಲುತ್ತಿಲ್ಲ, ಗಾಜಾ ಪಟ್ಟಿ ಪ್ರದೇಶದಲ್ಲೀಗ ಶಾಂತಿ ಮೂಡುತ್ತಿಲ್ಲ. ಹೀಗಿದ್ದಾಗ ಇಸ್ರೇಲ್ & ಹಮಾಸ್ ನಡುವೆ ಗಲಾಟೆ ಶುರುವಾದ ನಂತರ ಈವರೆಗೂ ಎಷ್ಟು ಸಾವಿರ ಜನರು ಜೀವ ಬಿಟ್ಟಿದ್ದಾರೆ ಗೊತ್ತಾ? ಆ ಭಯಾನಕ ಸತ್ಯ ಸಂಚಲನ ಸೃಷ್ಟಿ ಮಾಡಿದೆ.
ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ನಡೆಸುತ್ತಿರುವ ದಾಳಿ ನಿಲ್ಲಿಸುವುದು ಕಷ್ಟದ ಕೆಲಸವಾಗಿದೆ. ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆದರೂ ಅದು ಸಕ್ಸಸ್ ಆಗುತ್ತಿಲ್ಲ. ಬದಲಾಗಿ ಈ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ. ಹೀಗಾಗಿ ಗಾಜಾ ಪಟ್ಟಿ ನಗರದಲ್ಲಿ ಜನರು ಕೂಡ ತೀವ್ರ ನರಳುತ್ತಿದ್ದು, ಹತ್ತಾರು ಸಾವಿರ ಮಕ್ಕಳು ಸೇರಿದಂತೆ ಸುಮಾರು 40000ಕ್ಕೂ ಹೆಚ್ಚು ಜನರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇಸ್ರೇಲ್ ಯಾರ ಮಾತನ್ನು ಕೇಳುತ್ತೆ?
ಅಮೆರಿಕ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ದೇಶಗಳ ಸಲಹೆಯನ್ನೂ ಇಸ್ರೇಲ್ ಧಿಕ್ಕರಿಸಿದೆ. ಇಸ್ರೇಲ್ ತನ್ನ ದಾಳಿಯನ್ನ ಮತ್ತಷ್ಟು ಹೆಚ್ಚಿಸುವ ಮೂಲಕ ಪ್ಯಾಲೆಸ್ತೀನ್ ಮೇಲೆ & ಗಾಜಾ ಪಟ್ಟಿ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಮುಂದಾದಂತೆ ಕಾಣ್ತಿದೆ. ಅದ್ರಲ್ಲೂ ಇಸ್ರೇಲ್ ಈಗ ದಕ್ಷಿಣ ಗಾಜಾ ಪಟ್ಟಿಯ ಪ್ರದೇಶ ಖಾನ್ ಯೂನಿಸ್ ನಗರದ ಮೇಲೆ ಭೀಕರ ಅಟ್ಯಾಕ್ ಆರಂಭ ಮಾಡಿದೆ ಹೀಗೆ ಇಸ್ರೇಲ್ ಸೇನೆ ದಾಳಿ ಆರಂಭ ಮಾಡಿದ್ದರಿಂದ ಸುಮಾರು 70,000ಕ್ಕೂ ಹೆಚ್ಚು ಜನ ಊರು ಬಿಟ್ಟು ಓಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಅದರಲ್ಲೂ 40000ಕ್ಕೂ ಹೆಚ್ಚು ಜನರು ಇಸ್ರೇಲ್ ದಾಳಿಗೆ ಬಲಿಯಾಗಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ.
ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?
ಒಟ್ನಲ್ಲಿ ಜಾಗತಿಕವಾಗಿ ಯುದ್ಧಗಳು ತೀವ್ರ ತಲ್ಲಣ ಸೃಷ್ಟಿ ಮಾಡಿವೆ. ಅದರಲ್ಲೂ ಆರ್ಥಿಕ & ಸಾಮಾಜಿಕ ಪರಿಸ್ಥಿತಿ ಕೂಡ ಹಾಳಾಗಿರುವ ಸಮಯದಲ್ಲೇ ಯುದ್ಧಗಳು ಮತ್ತಷ್ಟು ಹಿಂಸೆಗೂ ಕಾರಣವಾಗುತ್ತಿವೆ. ಹೀಗಾಗಿ ಸಾಕಷ್ಟು ಆಕ್ರೋಶ ಕೂಡ ಮೊಳಗಿದ್ದು, ಇಸ್ರೇಲ್ & ಹಮಾಸ್ ಯುದ್ಧಕ್ಕೆ ಬ್ರೇಕ್ ಬೀಳಬೇಕು. ಅದರಲ್ಲೂ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಮಿಲಿಟರಿ ಹೀಗೆ ನಡೆಸುತ್ತಿರುವ ರಣ ಭೀಕರ ದಾಳಿಗೆ ಅಂತ್ಯ ಹಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಆದರೆ ಇಸ್ರೇಲ್ ಮಾತ್ರ ಯುದ್ಧ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ.












Click it and Unblock the Notifications