ಇಸ್ರೇಲ್ ದಾಳಿಯಿಂದ ಗಾಜಾಪಟ್ಟಿ ಪ್ರದೇಶದಲ್ಲಿ ಮತ್ತೆ ರಕ್ತಪಾತ.. ಒಂದೇ ದಾಳಿಗೆ 39 ಜನರು ಬಲಿ?
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಕದನಕ್ಕೆ ಇದೀಗ ಗಾಜಾ ಪಟ್ಟಿ ಭಾಗ ನರಳಿ ಹೋಗಿದೆ. ಅದರಲ್ಲೂ ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಗಾಜಾ ಭಾಗದಲ್ಲಿ ದಾಳಿಗಳು ನಡೆಯುತ್ತಿವೆ. ಹೀಗಿದ್ದಾಗ ನಿನ್ನೆ ಒಂದೇ ದಿನ ದಿಢೀರ್ ಇಸ್ರೇಲ್ ನಡೆಸಿರುವ ಭೀಕರ ದಾಳಿಗೆ 39 ಜನರು ಬಲಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈಗಾಗಲೇ ಅನ್ನ & ನೀರು ಇಲ್ಲದೆ ನರಳುತ್ತಿದ್ದ ಗಾಜಾ ಪಟ್ಟಿ ಜನರಿಗೆ ಇದು ಆಘಾತ ನೀಡಿದೆ.
ಇಸ್ರೇಲ್ & ಹಮಾಸ್ ನಡುವಿನ ಸಂಘರ್ಷ ಜಗತ್ತಿನ ನೆಮ್ಮದಿಗೆ ಬೆಂಕಿ ಹಚ್ಚಿದೆ. ಯಾಕಂದ್ರೆ ಇಬ್ಬರ ನಡುವೆ ನಡೆಯುತ್ತಿರುವ ತಿಕ್ಕಾಟ ಜೋರಾಗುತ್ತಿದೆ. ಎಲ್ಲಿ ನೋಡಿದರೂ ಬರೀ ಹಿಂಸೆ ಹಿಂಸೆ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗಲೇ ಇಸ್ರೇಲ್ ಕೂಡ ಯುದ್ಧ ನಿಲ್ಲಿಸಿ, ಮಾತುಕತೆ ನಡೆಸಲು ಸಿದ್ಧವಾಗಿಲ್ಲ. ಇನ್ನೊಂದು ಕಡೆ ಹಮಾಸ್ ಕೂಡ ಹಠವನ್ನೇ ಮುಂದುವರಿಸಿದೆ. ಹೀಗೆ ಇಬ್ಬರ ಜಗಳದಲ್ಲಿ ಬಲಿಯಾಗುತ್ತಿರುವುದು ಮಾತ್ರ ಅಮಾಯಕರು ಎಂಬ ಆಕ್ರೋಶ ಸ್ಫೋಟಗೊಂಡಿದೆ. ಇಷ್ಟೆಲ್ಲದರ ನಡುವೆ ಮತ್ತೊಮ್ಮೆ ಇಸ್ರೇಲ್ ಸೇನೆಯಿಂದ ಭೀಕರ ದಾಳಿ ನಡೆದಿದ್ದು ಸುಮಾರು 39 ಜನ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

39,600 ಜನರು ಯುದ್ಧಕ್ಕೆ ಬಲಿ?
ಗಾಜಾ ಪಟ್ಟಿ ಪ್ರದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರೆ, ಅಲ್ಲಿನ ಮಕ್ಕಳು ಈಗ ಒಂದೇ ಒಂದು ವಿಮಾನ ಹಾರಾಡಿದರು ಸಾಕು ಹೆದರಿ ಅಳುವ ಪರಿಸ್ಥಿತಿ ಇದೆ. ಯಾಕೆ ಅಂದ್ರೆ ಈವರೆಗೂ ಗಾಜಾ ಪಟ್ಟಿ ಭಾಗದಲ್ಲಿ ಸುಮಾರು 39,600ಕ್ಕೂ ಹೆಚ್ಚು ಜನರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಹಾಗೇ ಸಾವಿನ ಸರಪಳಿ ಕೂಡ ಮುಂದುವರಿದಿದೆ. ಹೀಗಾಗಿ ಭಯದ ವಾತಾವರಣ ನಿರ್ಮಾಣ ಆಗಿದೆ. ಹೀಗಿದ್ದರೂ ಯುದ್ಧ ಮಾತ್ರ ತಣ್ಣಗಾಗುತ್ತಿಲ್ಲ.












Click it and Unblock the Notifications