ಶಾಲೆ ಮೇಲೆ ದಾಳಿ ಮಾಡಿದ ಇಸ್ರೇಲ್? 28 ಜನರು ಬಲಿ??

ಗಾಜಾ ಮೇಲೆ ಇಸ್ರೇಲ್ ದೇಶದ ದಾಳಿ ತೀವ್ರಗೊಂಡಿದ್ದು, ನಿರಾಶ್ರಿತ ಶಿಬಿರಗಳ ಮುಖವನ್ನ ಕೂಡ ನೋಡದೆ ಇಸ್ರೇಲ್‌ನ ಮಿಲಿಟರಿ ಅಟ್ಯಾಕ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಅದರಲ್ಲೂ ದಿಢೀರ್ ಗಾಜಾ ಪಟ್ಟಿ ಶಾಲೆಯೊಂದರ ಒಳಗೆ, ಆಶ್ರಯ ಪಡೆದಿದ್ದ ನಿರಾಶ್ರಿತರ ಮೇಲೆ ಕೂಡ ಇಸ್ರೇಲ್ ಘೋರ ದಾಳಿ ನಡೆಸಿದೆ. ಇದರಿಂದಾಗಿ ಸುಮಾರು 28 ಜನಗಳು ಬಲಿ ಆಗಿದ್ದಾರೆ, ಎಂದು ಗಂಭೀರ ಆರೋಪ ಮಾಡಲಾಗಿದೆ. ಅದರಲ್ಲೂ ಹಮಾಸ್ ಮುಖ್ಯಸ್ಥನ ಸಾವಿನ ಬೆನ್ನಲ್ಲೇ ಇಂತಹ ಗಂಭೀರ ಆರೋಪ ಸಂಚಲನ ಸೃಷ್ಟಿ ಮಾಡಿದೆ.

ಇಸ್ರೇಲ್ ಸೇನೆ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಮುಂದಿನ ದಿನಗಳಲ್ಲಿ ಗಾಜಾ ಪಟ್ಟಿ ಸಂಪೂರ್ಣ ನಾಶವಾಗಿ ಹೋಗುವ ಭಯ ಕಾಡುತ್ತಿದೆ. ಅದರಲ್ಲೂ ಇಸ್ರೇಲ್ ದಾಳಿ ಹೊಡೆತಕ್ಕೆ ಈಗಾಗಲೇ ಹತ್ತಿರ ಹತ್ತಿರ ಅರ್ಧ ಲಕ್ಷ ಜನರು ಗಾಜಾ ಪಟ್ಟಿಯಲ್ಲಿ ಬಲಿಯಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೂಡ ಇದೆ. ಹೀಗಿದ್ದಾಗಲೇ ನಿರಾಶ್ರಿತರು ಇದ್ದ ಶಾಲೆ ಮೇಲೆ ಕೂಡ ಈ ರೀತಿಯಾಗಿಯೇ ಇಸ್ರೇಲ್ ಸೇನೆ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಮಧ್ಯ ಪ್ರಾಚ್ಯ ಇದೀಗ ಮತ್ತಷ್ಟು ಉಗ್ರವಾಗಿದ್ದು, ಮುಂದಿನ ದಿನಗಳನ್ನು ನೆಪಿಸಿಕೊಂಡು ಜನರು ಆತಂಕ ಹೊರ ಹಾಕುತ್ತಿದ್ದಾರೆ.

Allegedly 28 Killed In Gaza After Israeli Military Attack On A School

ಇಸ್ರೇಲ್‌ ಹಾಗೂ ಇರಾನ್‌ ಯುದ್ಧ?

ಪದೇ ಪದೇ ಗಾಜಾ ಪಟ್ಟಿ ಮೇಲೆ ಈ ರೀತಿಯಾಗಿ ಇಸ್ರೇಲ್ ದಾಳಿ ಮಾಡ್ತಿರುವುದು ಇರಾನ್ ರೊಚ್ಚಿಗೇಳುವಂತೆ ಮಾಡಿದೆ. ಅದರಲ್ಲಿಯೂ ಹಮಾಸ್ ಮುಖ್ಯಸ್ಥನ ಹತ್ಯೆ ಕೂಡ ನಡೆದಿದೆ. ಗಾಜಾದಲ್ಲಿ ಅಡಗಿದ್ದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್‌ ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಇಸ್ರೇಲ್‌ ಸೇನೆ ವಿಡಿಯೊ ಹಾಗೂ ಫೋಟೊಗಳನ್ನು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದೆ. ಇಷ್ಟೆಲ್ಲ ಘಟನೆ ಬೆನ್ನಲ್ಲೇ ಯಹೂದಿ ರಾಷ್ಟ್ರ ಇಸ್ರೇಲ್ ಮೇಲೆ ಇರಾನ್‌ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಸುಳಿವು ನೀಡಿದೆ. ಮತ್ತೊಂದು ಕಡೆ ಶಾಲೆ ಮೇಲೆ ಕೂಡ ಇಸ್ರೇಲ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ.

ಗಾಜಾ ಯುದ್ಧ ನಿಲ್ಲಿಸುತ್ತಾ ಇಸ್ರೇಲ್?

ಅದು ಅಕ್ಟೋಬರ್ 7, 2023 ಯಾರೂ ಊಹಿಸದ ಘಟನೆ ನಡೆದಿತ್ತು. ಎರಡು ದೇಶಗಳ ಮಧ್ಯೆ ಇದೇ ದಿನ ಭೀಕರ ಯುದ್ಧ ಶುರುವಾಗಿತ್ತು. ಇಸ್ರೇಲ್ ಹಾಗೂ ಹಮಾಸ್ ದಿಢೀರ್ ಯುದ್ಧ ಬೆಂಕಿ ಹೊತ್ತಿಕೊಂಡಿತ್ತು. ಬಡಿದಾಟವು ಕೂಡ ಶುರುವಾಗಿತ್ತು. ಹೀಗೆ ಅಲ್ಲಿ ಹಿಂಸಾಚಾರ ಶುರುವಾಗಿ ಈಗ ಬರೋಬ್ಬರಿ 1 ವರ್ಷ ಕಳೆದು ಹೋಗಿದೆ. ಹೀಗಿದ್ದಾಗ ಈ ಯುದ್ಧಕ್ಕೆ ಕಾರಣವಾಗಿದ್ದವನ ಹತ್ಯೆ ಮಾಡಿರುವ ಇಸ್ರೇಲ್ ಯುದ್ಧ ನಿಲ್ಲಿಸುತ್ತಾ? ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+