Russia & Ukraine War: ಭೀಕರ ಕ್ಷಿಪಣಿ ದಾಳಿಗೆ 17 ಅಮಾಯಕರು ಬಲಿ

ಉಕ್ರೇನ್ ವಿರುದ್ಧ ರಷ್ಯಾ ತನ್ನ ದಾಳಿಯನ್ನು ಭೀಕರಗೊಳಿಸಿ, ಕಂಡ ಕಂಡ ಜಾಗಕ್ಕೆ ಕೈಗೆ ಸಿಕ್ಕ ಕ್ಷಿಪಣಿಗಳನ್ನ ಹಾರಿಸುತ್ತಿದೆ. ಈಗಾಗಲೇ ಭಾಗಶಃ ಉಕ್ರೇನ್ ನಗರಗಳು ಧೂಳ್ ಧೂಳ್ ಆಗಿದ್ದು, ಇಷ್ಟಾದರೂ ರಷ್ಯಾ ತಣ್ಣಗಾಗಿಲ್ಲ. ಇಂದು ಕೂಡ ಅಷ್ಟೇ ರಷ್ಯಾ ಸೇನೆ ನಡೆಸಿದ ಮಿಸೈಲ್ ಅಟ್ಯಾಕ್‌ಗೆ 17 ಅಮಾಯಕರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಾಳಿಯ ಭೀಕರತೆ ಹೇಗಿತ್ತು ಎಂದರೆ, ಮಿಸೈಲ್ ಬಿದ್ದ ಜಾಗ ಸ್ಮಶಾನವಾಗಿ ಬದಲಾಗಿದೆ.

ರಷ್ಯಾ ಪೂರ್ವ ಉಕ್ರೇನ್‌ನ ನಗರ ಕೋಸ್ಟಿಯಾಂಟಿನಿವ್ಕಾ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಅಂತ ಹೇಳಲಾಗಿದೆ. ಈ ಘಟನೆಯಲ್ಲಿ 17 ಜನರು ಜೀವ ಕಳೆದುಕೊಂಡಿದ್ದಾರೆ. ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಈ ಬಗ್ಗೆ ಆರೋಪವನ್ನ ಮಾಡಿದ್ದಾರೆ. ರಷ್ಯಾ ನಡೆಸಿದ ದಾಳಿಯಿಂದ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಆದರೆ ಈ ಬಗ್ಗೆ ರಷ್ಯಾ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮತ್ತೊಂದು ಕಡೆ ಉಕ್ರೇನ್ ಸೇನೆಯಿಂದ ಪ್ರತಿಕಾರವಾಗಿ, ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಯುವ ಭೀತಿ ಎದುರಾಗಿದೆ.

russian-missile-attack

ಯುದ್ಧ ಭೂಮಿಗೆ ಹತ್ತಿರದ ಜಾಗ

ಅಷ್ಟಕ್ಕೂ ಇದೀಗ ದಾಳಿ ನಡೆದಿರುವ ಉಕ್ರೇನ್ ನಗರ ಕೋಸ್ಟಿಯಾಂಟಿನಿವ್ಕಾ, ಯುದ್ಧದ ಭೀಕರತೆ ಹೆಚ್ಚಾಗಿರುವ ಗಡಿ ಪ್ರದೇಶದ ಸಮೀದಲ್ಲೇ ಇದೆ. ಹೀಗಾಗಿ ಬೇಕು ಅಂತಲೇ ಇದೇ ಜಾಗದ ಮೇಲೆ ಮಿಸೈಲ್ ಅಟ್ಯಾಕ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ವೇಳೆ ಗಾಯಗೊಂಡ ಉಕ್ರೇನ್ ನಾಗರಿಕರಿಗೆ ಚಿಕಿತ್ಸೆ ಮುಂದುವರಿದಿದೆ. ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ದಾಳಿ ಮೂಲಕ ಮತ್ತೆ ಉಕ್ರೇನ್ ಹಾಗೂ ರಷ್ಯಾ ನಡುವೆ ಕಿಚ್ಚು ಹೆಚ್ಚಾಗಿದೆ. ಉಕ್ರೇನ್ ಪಡೆಗಳು ಮತ್ತೆ ಡ್ರೋನ್ ಮೂಲಕ ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ದಾಳಿ ನಡೆಸುವ ಭೀತಿ ಇದೆ.

ದಾಳಿಗೆ ಬಲಿಯಾದವರ ಪೈಕಿ ಮಕ್ಕಳು ಕೂಡ ಸೇರಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ ಹಲವು ತಿಂಗಳ ಅಂತರದಲ್ಲಿ ನಡೆಸಿರುವ ಅತ್ಯಂತ ಭೀಕರ ದಾಳಿ ಇದಾಗಿದೆ. ಉಕ್ರೇನ್ ಸೇನೆ ಕೂಡ ಈಗ ಪ್ರತಿಕಾರದ ಮಾತನ್ನಾಡಿದೆ. ಹಾಗೇ ರಷ್ಯಾ ಪಡೆಗಳು ಎಸ್-300 ಕ್ಷಿಪಣಿ ವ್ಯವಸ್ಥೆ ಮೂಲಕ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ಈಗ ದಾಳಿ ನಡೆದಿರುವ ನಗರದ ಮಾರುಕಟ್ಟೆಯ ಬಳಿ ಎಲ್ಲಾ ನಾಶವಾಗಿ ಹೋಗಿದೆ. ಜನರ ಓಡಾಟ ಹೆಚ್ಚಾಗಿರುವ ಕಾರಣ ದಾಳಿ ನಂತರ ಸಾಕಷ್ಟು ಸಾವು ನೋವು ಸಂಭವಿಸಿದೆ. ಅಕ್ಕಪಕ್ಕದ ಕಟ್ಟಡಗಳಿಗೂ ಭಾಗಶಃ ಹಾನಿ ಉಂಟಾಗಿದೆ.

ಆಹಾರ ಪದಾರ್ಥವೂ ಮಣ್ಣುಪಾಲು

ರಷ್ಯಾ ಮತ್ತು ಉಕ್ರೇನ್ ತಿಕ್ಕಾಟದಲ್ಲಿ ಸಾಮಾನ್ಯರು ಪರದಾಡುತ್ತಿದ್ದಾರೆ. ಯುದ್ಧವು ಶುರುವಾದ ನಂತರ ಆಹಾರದ ಅಭಾವ ಎದುರಾಗಿರುವ ವೇಳೆ ಕಿರಿಕ್ ಜೋರಾಗಿದೆ. ಬಂದರು ನಗರದ ಮೇಲೆ ತೀವ್ರ ದಾಳಿ ನಡೆಯುತ್ತಿರುವ ಕಾರಣ ಉಕ್ರೇನ್‌ಗೆ ಸರಬರಾಜು ಮಾಡುತ್ತಿದ್ದ ವಸ್ತುಗಳು ಕೂಡ ನಿಂತು ಹೋಗಿವೆ. ಹೀಗಾಗಿ ಅಮೆರಿಕ & ನ್ಯಾಟೋ ಒಕ್ಕೂಟವು ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನ ಇಡೀ ಜಗತ್ತೇ ಕಾದು ನೋಡುತ್ತಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಉಕ್ರೇನ್‌ನ ಪ್ರಮುಖ ನಗರಗಳು ಕೂಡ ರಷ್ಯಾ ದಾಳಿಗೆ ತತ್ತರಿಸಿ ಹೋಗಿವೆ.

ಉಕ್ರೇನ್ ಸೇನೆ ಪ್ರತಿಕಾರ ತೀರಿಸಿಕೊಳ್ಳುತ್ತಾ?

ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡುತ್ತಿದೆ. ಇಷ್ಟು ಸಾಲದು ಎಂಬಂತೆ ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿದೆ. ಈ ಕಾರಣಕ್ಕೆ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿ, ಉಕ್ರೇನ್‌ನ ಹೃದಯ ಭಾಗಗಳಿಗೆ ಆಘಾತ ನೀಡುತ್ತಿದೆ. ಆದರೆ ಇಬ್ಬರ ಜಗಳದಲ್ಲಿ ಏನೂ ಅರಿಯದ ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಲಕ್ಷ ಲಕ್ಷ ಅಮಾಯಕರು ಬಲಿಯಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+