ಹೊಡಿ ಮಗ.. ಹೊಡಿ ಮಗ.. ಬಿಡಬೇಡ ಡ್ರೋನ್‌ನ... ರಷ್ಯಾ & ಉಕ್ರೇನ್ ಯುದ್ಧ ಭಯಾನಕ!

ಹಾಕು.. ಹಾಕು.. ಹಾಕು.. ಬೇಕಾಬಿಟ್ಟಿ ಬಾಂಬ್ ಹಾಕು, ಡ್ರೋನ್ ತಗೊಂಡು ಅಟ್ಯಾಕ್ ಮಾಡು.. ಹಿಂಗೆ ರಷ್ಯಾ & ಉಕ್ರೇನ್ ಭರ್ಜರಿಯಾಗಿ ಫೈಟಿಂಗ್ ನಡೆಸುತ್ತಿವೆ. ಆದರೆ ಇಬ್ಬರ ನಡುವಿನ ಈ ಜಗಳ ಜಗತ್ತಿನಾದ್ಯಂತ ಸಿಕ್ಕಾಪಟ್ಟೆ ಭಯ ಹುಟ್ಟು ಹಾಕಿದೆ. ಈಗಾಗಲೇ ಇಬ್ಬರ ಬಡಿದಾಟದ ಪರಿಣಾಮ ಲಕ್ಷಾಂತರ ಜನರು ಜೀವ ಕಳೆದುಕೊಂಡ ಆರೋಪಗಳು ಕೂಡ ಇವೆ. ಹೀಗಿದ್ದಾಗಲೇ ಸುಮ್ಮನೆ ಕೂರದೆ ಉಕ್ರೇನ್ ಬರೋಬ್ಬರಿ 110 ಡ್ರೋನ್‌ಗಳ ಮೂಲಕ ರಷ್ಯಾ ಮೇಲೆ ಅಟ್ಯಾಕ್ ಮಾಡಲು ಮುಂದಾಗಿತ್ತು, ಆಮೇಲೆ ಏನಾಯ್ತು? ಬನ್ನಿ ತಿಳಿಯೋಣ.

ರಷ್ಯಾ ಎಂಬ ದೈತ್ಯ ದೇಶಕ್ಕೆ ಯಾರೂ ಎದುರಾಗುವವರೇ ಇಲ್ಲ ಎನ್ನಬಹುದು. ಅದ್ರಲ್ಲೂ ಅಮೆರಿಕ ರೀತಿಯ ಬೃಹತ್ ದೇಶ ಕೂಡ ರಷ್ಯಾ ಕಂಡರೆ ಹೆದರಿ ಕೂರುತ್ತದೆ. ಹೀಗಿದ್ದರೂ, ಉಕ್ರೇನ್ ಮಾತ್ರ ತನ್ನ ಮೊಂಡು ಹಠವನ್ನ ಬಿಡದೆ ಮುಂದೆ ನುಗ್ಗುತ್ತಿದೆ. ಅಮೆರಿಕ ಸೇರಿದಂತೆ, ನ್ಯಾಟೋ ಒಕ್ಕೂಟದ ದೇಶಗಳು ಇದೀಗ ಉಕ್ರೇನ್ ಪರವಾಗಿ ನಿಂತಿದ್ದು ಈ ಸಪೋರ್ಟ್ ಪಡೆದು ರಷ್ಯಾ ವಿರುದ್ಧ ಉಕ್ರೇನ್ ದಾಳಿ ನಡೆಸುತ್ತಿದೆ.

Allegedly 110 Ukrainian Drones Has Been Destroyed By Russian Military

ಪ್ರಮುಖ ದೇಶಗಳೇ ಈ ವಿಚಾರದಲ್ಲಿ ಬೆಚ್ಚಿ ಬಿದ್ದು, ರಷ್ಯಾ ವಿರುದ್ಧ ಮಾಡನಾಡಲು ಹಿಂದೆ & ಮುಂದೆ ಯೋಚನೆ ಮಾಡುವಾಗ ಅತ್ತ ಉಕ್ರೇನ್ ಮಾತ್ರ ರಷ್ಯಾ ವಿರುದ್ಧ ಮುಂದೆ ಮುಂದೆ ನುಗ್ಗಿ ದಾಳಿಗೆ ಯತ್ನಿಸುತ್ತಿದೆ. ರಷ್ಯಾ ನೆಲದ ಮೇಲೆ ಇದೇ ರೀತಿ ದಾಳಿ ಮಾಡಲು ಮುಂದಾಗಿದ್ದ ಉಕ್ರೇನ್‌ಗೆ ಈಗ ದೊಡ್ಡ ಆಘಾತವೂ ಎದುರಾಗಿದೆ. ಹಾಗಾದ್ರೆ ರಷ್ಯಾ ನೆಲದಲ್ಲಿ ಉಕ್ರೇನ್‌ಗೆ ಎದುರಾದ ಆಘಾತ ಎಂತಹದ್ದು?

ರಿವೇಂಜ್ ತೆಗೆದುಕೊಳ್ಳುತ್ತಾ ರಷ್ಯಾ?

ಉಕ್ರೇನ್ ದಿಢೀರ್ ರಷ್ಯಾ ವಿರುದ್ಧ ಸುಮಾರು 110 ಡ್ರೋನ್‌ಗಳನ್ನು ಹಾರಿಸಿದ್ದು, ಡ್ರೋನ್ ಮೂಲಕ ದಾಳಿಗೆ ಪ್ರಯತ್ನ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಹೀಗೆ ಉಕ್ರೇನ್ ನೆಲದಿಂದ ಡ್ರೋನ್‌ಗಳು ಹಾರಿ ಬಂದ ತಕ್ಷಣ ಅಲರ್ಟ್ ಆಗಿದ್ದ ರಷ್ಯಾ ಮಿಲಿಟರಿ ಕೂಡಲೇ ಉಕ್ರೇನ್ ಹಾರಿಸಿದ್ದ ಡ್ರೋನ್‌ಗಳನ್ನ ನಾಶ ಮಾಡಿದೆಯಂತೆ. ಹೀಗಾಗಿ ಇದೀಗ ರಷ್ಯಾ ಕೂಡ ಉಕ್ರೇನ್ ವಿರುದ್ಧ ರಿವೇಂಜ್ ತೆಗೆದುಕೊಳ್ಳುತ್ತಾ? ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಯಾಕಂದ್ರೆ ರಷ್ಯಾ ಈಗಾಗಲೇ ಉಕ್ರೇನ್‌ಗೆ ಸೇರಿದ ಬಹುತೇಕ ಪ್ರದೇಶವನ್ನ ವಶಕ್ಕೆ ಪಡೆದಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗುವ ಭಯ ಕಾಡುತ್ತಿದೆ.

ಒಟ್ನಲ್ಲಿ ಮನುಷ್ಯ ಎಷ್ಟೇ ಸಮಸ್ಯೆ ಆದರೂ ಯುದ್ಧಗಳಿಂದ ಬುದ್ಧಿ ಕಲಿಯೋದಿಲ್ಲ ಎಂಬ ಮಾತು ಮತ್ತೆ ಪ್ರೂವ್ ಆಗುತ್ತಿದೆ. ಇಷ್ಟೆಲ್ಲಾ ಸರ್ವನಾಶ ಆಗಿದ್ದರೂ ರಷ್ಯಾ & ಉಕ್ರೇನ್ ಹೀಗೆ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿರುವುದು ದುರದೃಷ್ಟಕರ. ಮತ್ತೊಂದು ಕಡೆ ಇವರ ಈ ತಿಕ್ಕಾಟದಲ್ಲಿ ಅಮಾಯಕ ಜನರು ನರಳಾಡುತ್ತಿದ್ದಾರೆ. ಅಲ್ಲದೆ ಉಕ್ರೇನ್ ಜನರಿಗೆ ಭವಿಷ್ಯವೇ ಮಂಕಾಗಿ ಹೋಗಿದ್ದು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+