100ಕ್ಕೂ ಹೆಚ್ಚು ಉಕ್ರೇನ್ ಸೈನಿಕರನ್ನು ಕೊಂದ ರಷ್ಯಾ ಪಡೆಗಳು?
ಕೀವ್: ಶತ್ರು ಪಡೆಯ ವಿರುದ್ಧ ಮನಸ್ಸಿಗೆ ಬಂದಂತೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕೆಲ ದಿನದ ಹಿಂದೆ 500ಕ್ಕೂ ಹೆಚ್ಚು ಮಕ್ಕಳನ್ನ ರಷ್ಯಾ ಕೊಲೆ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ಆರೋಪ ಮಾಡಿದ್ದರು. ಈ ಆರೋಪ ಮಾಡಿ ಒಂದೇ ದಿನದ ಅಂತರದಲ್ಲಿ ಉಕ್ರೇನ್‌ನ 100 ಸೈನಿಕರ ಕೊಲೆ ನಡೆದಿದೆಯಂತೆ.
ರಷ್ಯಾ ಸೇನೆಗೆ ಈಗ ಇರುವುದು ಒಂದೇ ಗುರಿ, ಉಕ್ರೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ದಿಗ್ವಿಜಯ ಪಡೆಯುವುದು. ಉಕ್ರೇನ್ ನೆಲದ ಮೇಲೆ ರಷ್ಯಾ ಬಾವುಟ ನೆಟ್ಟು, ತನ್ನ ಶತ್ರು ಅಮೆರಿಕಗೆ ಖಡಕ್ ಮೆಸೇಜ್ ಕೊಡೋದು. ಇದೊಂದು ಅಜೆಂಡಾ ಮೂಲಕ ಹೋರಾಟಕ್ಕೆ ನಿಂತಿದೆ ರಷ್ಯಾ. ಆದರೆ ಈ ಕಿತ್ತಾಟದಲ್ಲಿ ಉಕ್ರೇನ್‌ನ 100ಕ್ಕೂ ಹೆಚ್ಚು ಸೈನಿಕರನ್ನ ಒಂದೇ ಬಾರಿಗೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ರಷ್ಯಾ ವಿರುದ್ಧ ಕೇಳಿಬರುತ್ತಿರುವ ಈ ಆರೋಪ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡಿದೆ (Russia Ukraine War).

ಅಮೆರಿಕ ಮಧ್ಯಪ್ರವೇಶಕ್ಕೆ ರಷ್ಯಾ ಉತ್ತರ?
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದಾಗ ಜಗತ್ತು ಡಿಸೈಡ್ ಆಗಿತ್ತು. ಯುದ್ಧ ಒಂದೆರಡು ವಾರದಲ್ಲಿ ಮುಗಿಯುತ್ತೆ, ರಷ್ಯಾ ಎದುರು ಉಕ್ರೇನ್ ಬೇಗ ಸೋತು ಹೋಗುತ್ತದೆ ಅಂತಾ. ಆದ್ರೆ ಏನಾಗಿದೆ ಹೇಳಿ? ಒಂದೂವರೆ ತಿಂಗಳು ಕಳೆದು ಹೋದರೆ ರಷ್ಯಾ & ಉಕ್ರೇನ್ ಯುದ್ಧ 500 ದಿನ ಪೂರೈಸುತ್ತೆ. ಹೀಗೆ ಒಂದೆರಡು ವಾರದಲ್ಲಿ ಮುಗಿಯಬೇಕಿದ್ದ ಯುದ್ಧಕ್ಕೆ ಒಂದೂವರೆ ವರ್ಷ ಬೇಕಾಯ್ತು. ಹೀಗೆ ರಷ್ಯಾ & ಉಕ್ರೇನ್ ಬಡಿದಾಡಿಕೊಂಡು ಸಾಯುವಾಗ 3ನೇ ವ್ಯಕ್ತಿ ಎಂಟ್ರಿಯಿಂದ ಪರಿಸ್ಥಿತಿ ಕೈಮೀರುತ್ತಿದೆ. ಅಮೆರಿಕ ಸೇನೆ ಮಧ್ಯಪ್ರವೇಶ ಮಾಡಿದ ಕಾರಣಕ್ಕೆ ರಷ್ಯಾ ರೊಚ್ಚಿಗೆದ್ದು ಉಕ್ರೇನ್‌ನ ಬಲಿಹಾಕಲು ಬಲೆ ಬೀಸಿ ಕಾದಿದೆ.
ನ್ಯಾಟೋ ವಿಚಾರಕ್ಕೆ ಶುರುವಾಗಿದ್ದ ಯುದ್ಧ!
ಯುದ್ಧ ಶುರುವಾಗಿದ್ದು ಕೂಡ ಇದೇ ರೀತಿ, ಉಕ್ರೇನ್ ಸೇನೆಯನ್ನು ನ್ಯಾಟೋ ಒಕ್ಕೂಟಕ್ಕೆ ಅಮೆರಿಕ ಸೆಳೆಯುತ್ತಿದೆ. ಹೀಗೆ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇನೆ ಸೇರಿದರೆ ರಷ್ಯಾಗೆ ಈ ಘಟನೆಯಿಂದ ಹಿನ್ನಡೆ ಎದುರಾಗಲಿದೆ. ಇದೇ ಕಾರಣಕ್ಕೆ ಯುದ್ಧ ಸಾರಿದ್ದೇವೆ ಎಂದು ರಷ್ಯಾ ಹೇಳಿತ್ತು. ಈಗ ನೋಡಿದರೆ ಉಕ್ರೇನ್ ಅಧ್ಯಕ್ಷ ಅಮೆರಿಕದ ನಾಯಕರಿಗೆ ಮತ್ತು ಸೇನೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇದು ರಷ್ಯಾ ಅಧ್ಯಕ್ಷರಿಗೆ ಕೆಟ್ಟ ಕೋಪ ತರಿಸಿ, ಯುದ್ಧವನ್ನ ಮತ್ತಷ್ಟು ಎಳೆದಾಡುವಂತೆ ಮಾಡುತ್ತಿದೆ.
ಲಕ್ಷಾಂತರ ಅಮಾಯಕರು ಬೀದಿಗೆ
ಉಕ್ರೇನ್ ಯುದ್ಧ ಆರಂಭವಾದ ನಂತರ ಈಗಾಗಲೇ 1 ಚಳಿಗಾಲ ಕಳೆದಿದೆ. ತೀವ್ರ ಚಳಿಯ ಪ್ರದೇಶವಾದ ಉಕ್ರೇನ್ ದೇಶದಲ್ಲಿ ಚಳಿಗಾಲದಲ್ಲಿ ಮನೆ ಇದ್ರು ಬದುಕೋದು ಕಷ್ಟ ಕಷ್ಟ. ಪರಿಸ್ಥಿತಿ ಹೀಗಿದ್ದಾಗ, ಯುದ್ಧದ ಪರಿಣಾಮ ಲಕ್ಷಾಂತರ ಜನ ಬೀದಿಗೆ ಬಿದ್ದಿದ್ದಾರೆ. ಇವರು ಬದುಕಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರದ್ದೋ ಜಗಳಕ್ಕೆ, ಇನ್ಯಾರದ್ದೋ ಪ್ರತಿಷ್ಠೆಗೆ ಲಕ್ಷಾಂತರ ಜನ ಊಟ ನಿದ್ದೆ ಇಲ್ಲದೆ ಉಕ್ರೇನ್ ಬೀದಿಗಳಲ್ಲಿ ಪರದಾಡುತ್ತಿದ್ದಾರೆ. ಇವರೆಲ್ಲಾ ರಷ್ಯಾ & ಉಕ್ರೇನ್ ಯುದ್ಧಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

10 ವರ್ಷ ಕಳೆದರೂ ಯುದ್ಧ ನಿಲ್ಲಲ್ಲ!
ಉಕ್ರೇನ್ ಯುದ್ಧ ಶುರುವಾದ ಸಂದರ್ಭದಲ್ಲೇ ರಷ್ಯಾ ಒಂದು ದೀರ್ಘಕಾಲದ ಯುದ್ಧಕ್ಕೆ ಸಜ್ಜಾಗಿ ಬಂದಂತೆ ಕಾಣುತ್ತಿದೆ. ರಷ್ಯಾದ ಯುದ್ಧ ತಂತ್ರ & ಉಕ್ರೇನ್ ವಿರುದ್ಧ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವ ರೀತಿ ನೋಡಿದರೆ ಸಾಕು ಅನುಮಾನ ಬಾರದೆ ಇರದು. ಏಕೆಂದರೆ ಈ ಜಗತ್ತಿನಲ್ಲೇ 2ನೇ ಬಲಿಷ್ಠ ಸೇನೆಯನ್ನು ಹೊಂದಿರುವ ರಷ್ಯಾ ಪಡೆಗೆ ಉಕ್ರೇನ್ ಯಾವ ಲೆಕ್ಕ? ಹೀಗಿದ್ರೂ ಈ ಯುದ್ಧ ಮುಂದುವರಿಯುತ್ತಿದೆ ಏಕೆ? ಯಾವ ಕಾರಣಕ್ಕೆ? ಎಂಬ ಪ್ರಶ್ನೆ ಮೂಡಿದೆ. ಹೀಗಿದ್ದಾಗ ಸಂಧಾನ ನಡೆಸಿ, ಯುದ್ಧ ನಿಲ್ಲಿಸಲು ಜಗತ್ತಿನ ಬಲಶಾಲಿ ರಾಷ್ಟ್ರಗಳು ಪ್ರಯತ್ನಿಸುತ್ತಿಲ್ಲ.












Click it and Unblock the Notifications