2026 ಮುಗಿಯುವ ಒಳಗೆ ಕೆಲಸ ಕಳೆದುಕೊಳ್ಳಲಿದ್ದಾರೆ ಇವರೆಲ್ಲಾ, ಯಾವ ಹುದ್ದೆಗಳು ಮಾಯ? Job Displacement
ಕೆಲಸ ಹೋಗುತ್ತಿದೆ, ಎಐ ಟೆಕ್ನಾಲಜಿ ಬಂದ ನಂತರ ಇಡೀ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ ಎಂಬ ಭಯ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ ಮತ್ತೊಂದು ಭೀಕರವಾದ ಸುದ್ದಿ ನಿರೋದ್ಯೋಗದ ಮೂಟೆಯನ್ನೇ ಹೊತ್ತು ತಂದಿದೆ. ಭವಿಷ್ಯದಲ್ಲಿ ಮತ್ತಷ್ಟು ಕೆಲಸ ಹೋಗಿ ನಿರುದ್ಯೋಗ ಹೆಚ್ಚಾಗುವುದು ಗ್ಯಾರಂಟಿ ಆಗುತ್ತಿದೆ. 2026 ಮುಗಿಯುವ ಒಳಗೆ ಕೆಲಸ ಇಲ್ಲದೆ ಎಲ್ಲಾ ಕಡೆ ಪರದಾಡುವ ಜನರ ಸಂಖ್ಯೆ ಹೆಚ್ಚಾಗುವ ಆತಂಕ ಮನೆ ಮಾಡಿದೆ. ಹಾಗಾದರೆ ಯಾವೆಲ್ಲಾ ವಲಯದಲ್ಲಿ ಹೆಚ್ಚಾಗಿ ಜನ ಕೆಲಸ ಕಳೆದುಕೊಳ್ಳಲಿದ್ದಾರೆ? ಬನ್ನಿ ತಿಳಿಯೋಣ.
ಹೌದು, ಕೆಲವೇ ಗಂಟೆಗಳಲ್ಲಿ ನಾವು 2025 ಮುಗಿಸಿ 2026ಕ್ಕೆ ಎಂಟ್ರಿ ಕೊಡುತ್ತಿದ್ದೇವೆ. ಹೀಗಾಗಿಯೇ ಎಲ್ಲೆಲ್ಲೂ ಸಂಭ್ರಮಾಚರಣೆ ನಡೆಯುತ್ತಿದೆ. ಜನರು ಕೂಡ ತುಂಬಾ ಖುಷಿ ಖುಷಿಯಾಗಿ ಇಂತಹ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಸಂಭ್ರಮದ ನಡುವೆ ಕೆಲಸವನ್ನು ಕಳೆದುಕೊಳ್ಳುವ ಭಯ ಕೂಡ ಆವರಿಸಿದೆ. ಅದರಲ್ಲೂ ಟೆಕ್ ದೈತ್ಯ ಮೈಕ್ರೋಸಾಫ್ಟ್ ಈ ಕುರಿತು ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದು, ಸುಮಾರು 40 ವಿಭಾಗದಲ್ಲಿ ಜನ ಕೆಲಸ ಕಳೆದುಕೊಂಡು ಪರದಾಡುವುದು ಬಹುತೇಕ ಗ್ಯಾರಂಟಿ ಅಂತೆ. ಹಾಗಾದರೆ ಆ ಕೆಲಸಗಳು ಯಾವುವು? ಮುಂದೆ ಓದಿ.

40 ವಿಭಾಗದಲ್ಲಿ ಕೆಲಸ ಮಾಯ
ಆರ್ಟಿಫಿಶಿಯಲ್ ಇಂಟಲಿಜನ್ಸ್ ಪರಿಣಾಮ ಕೆಲಸ ಕಳೆದುಕೊಳ್ಳುವ ವಿಭಾಗಗಳ ಪಟ್ಟಿಯನ್ನು ಈಗ ಮೈಕ್ರೋಸಾಫ್ಟ್ ಸಿದ್ಧಪಡಿಸಿದೆ. ಎಐ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಪರದಾಡುವ 40 ಉದ್ಯೋಗಗಳ ಪಟ್ಟಿ ಈಗ ರಿಲೀಸ್ ಆಗಿದೆ. ಮೈಕ್ರೋಸಾಫ್ಟ್ ನಡೆಸಿದ ಸಂಶೋಧನೆ ಪರಿಣಾಮ ಈಗ ಸ್ಫೋಟಕ ವರದಿ ಎಲ್ಲೆಡೆ ತಲ್ಲಣ ಎಬ್ಬಿಸಿದೆ. ಸುಮಾರು 2,00,000 ಕ್ಕೂ ಹೆಚ್ಚು ಕೇಂದ್ರದಿಂದ ನಡೆದಿರುವ ಈ ಸಂಶೋಧನೆ ಮುಂದಿನ ದಿನಗಳಲ್ಲಿ ಯಾರೆಲ್ಲಾ ಕೆಲಸ ಕಳೆದುಕೊಳ್ಳಬಹುದು? ಎಂಬುದರ ಬಗ್ಗೆ ಒಂದು ಚಿತ್ರಣ ತೆರೆದಿಟ್ಟಿದೆ.
ಯಾವೆಲ್ಲಾ ಕೆಲಸಗಳು ಹೋಗಬಹುದು?
ಅನುವಾದಕರು
ಇತಿಹಾಸಕಾರರು
ಪ್ರಯಾಣಿಕ ಸಹಾಯಕರು
ಸೇವಾ ಮಾರಾಟ ಪ್ರತಿನಿಧಿಗಳು
ಬರಹಗಾರರು & ಲೇಖಕರು
ಗ್ರಾಹಕ ಸೇವಾ ಪ್ರತಿನಿಧಿಗಳು
ಸಿಎನ್ಸಿ ಟೂಲ್ ಪ್ರೋಗ್ರಾಮರ್ಸ್
ಟೆಲಿಫೋನ್ ಆಪರೇಟರ್ಸ್
ಟಿಕೆಟ್ ಏಜೆಂಟ್ಸ್ & ಟ್ರಾವೆಲ್ ಕ್ಲರ್ಕ್ಸ್
ಬ್ರಾಡ್ಕಾಸ್ಟರ್ಸ್ ಮತ್ತು ರೇಡಿಯೋ ಡಿಜೆಗಳು
ದಲ್ಲಾಳಿ ಗುಮಾಸ್ತರು
ಕೃಷಿ ಮತ್ತು ಗೃಹ ನಿರ್ವಹಣಾ ಶಿಕ್ಷಕರು
ದೂರವಾಣಿ ತಜ್ಞರು
ಸಹಾಯಕರು
ರಾಜಕೀಯ ವಿಜ್ಞಾನಿಗಳು
ಸುದ್ದಿ ವಿಶ್ಲೇಷಕರು, ವರದಿಗಾರರು ಮತ್ತು ಪತ್ರಕರ್ತರು
ಗಣಿತಜ್ಞರು
ತಾಂತ್ರಿಕ ಬರಹಗಾರರು
ಪ್ರೂಫ್ ರೀಡರ್ಸ್ ಮತ್ತು ಕಾಪಿ ರೈಟರ್ಸ್
ನಿರೂಪಕರು
ಸಂಪಾದಕರು
ವ್ಯಾಪಾರ ಶಿಕ್ಷಕರು, ವಸ್ತು ವಿಶ್ಲೇಷಕರು
ಸಾರ್ವಜನಿಕ ಸಂಪರ್ಕ ಅಧಿಕಾರಿಗಳು
ಪ್ರದರ್ಶಕರು ಮತ್ತು ಉತ್ಪನ್ನ ಪ್ರವರ್ತಕರು
ಜಾಹೀರಾತು ಮಾರಾಟ ಏಜೆಂಟ್ಗಳು
ಅಕೌಂಟ್ ಕ್ಲರ್ಕ್ಸ್
ಸಂಖ್ಯಾಶಾಸ್ತ್ರೀಯ ಸಹಾಯಕರು
ಕೌಂಟರ್ ಮತ್ತು ರೆಂಟ್ ಕ್ಲರ್ಕ್ಸ್
ಡೇಟಾ ಸೈನ್ಟಿಸ್ಟ್ಸ್
ವೈಯಕ್ತಿಕ ಹಣಕಾಸು ಸಲಹೆಗಾರರು
ಆರ್ಕೈವಿಸ್ಟ್ಸ್
ಅರ್ಥಶಾಸ್ತ್ರ ಶಿಕ್ಷಕರು, ಪೋಸ್ಟ್ಸೆಕೆಂಡರಿ
ವೆಬ್ ಡೆವಲಪರ್ಸ್
ಮ್ಯಾನೇಜ್ಮೆಂಟ್ ಅನಾಲಿಸ್ಟ್ಸ್
ಭೂಗೋಳಶಾಸ್ತ್ರಜ್ಞರು
ಮಾಡೆಲ್ಸ್
ಮಾರುಕಟ್ಟೆ ಸಂಶೋಧನಾ ವಿಶ್ಲೇಷಕರು
ಸಾರ್ವಜನಿಕ ಸುರಕ್ಷತಾ ದೂರಸಂಪರ್ಕಕಾರರು
ಸ್ವಿಚ್ಬೋರ್ಡ್ ಆಪರೇಟರ್ಸ್
ಗ್ರಂಥಾಲಯ ವಿಜ್ಞಾನ ಶಿಕ್ಷಕರು, ಪೋಸ್ಟ್ಸೆಕೆಂಡರಿ
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications