ಗುಜರಾತಲ್ಲಿ ವಂಚನೆ, ಅಮೆರಿಕದಲ್ಲಿ ಕೋಟಿಗಟ್ಟಲೆ ಹಣ ಜಪ್ತಿ!
ಅಹಮದಾಬಾದ್/ಕ್ಯಾಲಿಫೋರ್ನಿಯಾ, ಜು.03: ಗುಜರಾತಿನ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಲು ಯತ್ನಿಸಿದ ವಿಜಯ್ ಎಂಬುವವರಿಗೆ ಸೇರಿದ ಸಾವಿರಾರು ಕೋಟಿ ಮೊತ್ತದ ಜಮೀನನ್ನು ಕ್ಯಾಲಿಫೋರ್ನಿಯಾದಲ್ಲಿ ವಶ ಪಡಿಸಿಕೊಳ್ಳಲಾಗಿದೆ. ಭಾರತದಲ್ಲಿ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಹಾರುತ್ತಿದ್ದ ಖದೀಮರಿಗೆ ಈ ಸುದ್ದಿ ಚುರುಕು ಮುಟ್ಟಿಸುವಂತಾಗಿದೆ.
ಅಹಮದಾಬಾದಿನ ಬ್ಯಾಂಕಿಗೆ 2,200 ಕೋಟಿ ರೂ.ಗಳ ವಂಚನೆ ಮಾಡಿರುವ ವಿಜಯ್ ಚೌಧುರಿ ಒಡೆತನದ ಜೂಮ್ ಡೆವಲಪರ್ಸ್ ಭಾರತದ ಜಾರಿ ನಿರ್ದೇಶನಾಲಯ ಸರಿಯಾದ ಪೆಟ್ಟು ಕೊಟ್ಟಿದೆ.

ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿನಿರ್ದೇಶನಾಲಯದ ಇಂದೋರ್ ವಿಭಾಗ ವಿಜಯ್ ಅವರನ್ನು ಹುಡುಕಿಕೊಂಡು ಕ್ಯಾಲಿಫೋರ್ನಿಯಾಗೆ ಬಂದಿದೆ. ಕ್ಯಾಲಿಫ್ ನಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿದ್ದ ವಿಜಯ್ ಗೆ ಆಘಾತ ಎದುರಾಗಿದೆ.
ಅಕ್ರಮ ಹಣಕಾಸು ವ್ಯವಹಾರ ತಡೆ ಕಾಯ್ದೆ (ಪಿಎಂಎಲ್‌ನ) ಅಡಿಯಲ್ಲಿ ವಿಜಯ್ ಗೆ ಸೇರಿರುವ ಸಾವಿರಾರು ಕೋಟಿ ರು ಮೌಲ್ಯದ 1,280 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಇಂದೋರ್ ಮತ್ತು ಮುಂಬೈಗಳಲ್ಲಿ ಜೂಮ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ತನ್ನ ಕಚೇರಿಗಳನ್ನು ಹೊಂದಿದೆ. ವಿವಿಧ ಬ್ಯಾಂಕ್‌ಗಳಿಂದ 2,200 ಕೋಟಿ ರೂ.ಗಳ ಸಾಲ ಪಡೆದಿದ್ದು ಯುರೋಪ್‌ನಲ್ಲೂ ಹೂಡಿಕೆ ಮಾಡಿದೆ. ಕಂಪೆನಿಯ ನಿರ್ದೇಶಕರಲ್ಲೊಬ್ಬರಾದ ಶಾರದಾ ಕಾಬ್ರಾ ಎಂಬುವವರನ್ನು ಬಂಧಿಸಲಾಗಿದೆ. ಚೌಧರಿಗೂ ಬಂಧನ ವಾರೆಂಟ್ ಸಿಕ್ಕಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಯೊಬ್ಬರು ಹೇಳಿದ್ದಾರೆ. (ಪಿಟಿಐ)












Click it and Unblock the Notifications