ಉಗ್ರರ ತವರು ಪಾಕಿಸ್ತಾನದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ!

ಕರಾಚಿ: ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ, ಪರಿಸ್ಥಿತಿ ನಿಭಾಯಿಸಲು ಪಾಕಿಸ್ತಾನ ಸೇನೆ ಕೈಯಲ್ಲೇ ಆಗುತ್ತಿಲ್ಲ. ರಣರಂಗವಾಗಿ ಬದಲಾಗಿರುವ ಪಾಕಿಸ್ತಾನದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ರಕ್ತ ಹರಿಯುತ್ತಿದೆ. ಹಾಗಾದ್ರೆ ಯಾವೆಲ್ಲಾ ಭಾಗದಲ್ಲಿ ಭೀಕರ ಸ್ಥಿತಿ ನಿರ್ಮಾಣವಾಗಿದೆ ಗೊತ್ತಾ? ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಅರೆಸ್ಟ್ ಆಗುತ್ತಿದ್ದಂತೆ ಕ್ವೆಟ್ಟಾ, ಕರಾಚಿ, ಪೇಶಾವರ್, ರಾವಲ್ಪಿಂಡಿ & ಲಾಹೋರ್ ಸೇರಿ ಬಹುತೇಕ ಪಾಕಿಸ್ತಾನ ಹೊತ್ತಿ ಉರಿಯುತ್ತಿದೆ. ಸಾವಿನ ಸಂಖ್ಯೆ ಬಗ್ಗೆಯೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ನೂರಾರು ಜನ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ ಮತ್ತೊಂದ್ಕಡೆ ಪಾಕಿಸ್ತಾನ ಸೇನೆ ಪ್ರಧಾನ ಕಛೇರಿ & ಲಾಹೋರ್‌ನ ಕಾರ್ಪ್ಸ್ ಕಮಾಂಡರ್ ಮನೆ ಮೇಲೆ ಇಮ್ರಾನ್ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ನಡುವೆ ಇಮ್ರಾನ್‌ನ ಕೋರ್ಟ್ ಎದುರು ಹಾಜರುಪಡಿಸಲು ಸಿದ್ಧತೆ ನಡೆಸಲಾಗಿದೆ.

After violence broke in Pakistan military started for operation

ಪಾಕಿಸ್ತಾನದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ರನ್ನ ಇಸ್ಲಾಮಾಬಾದ್‌ ಕೋರ್ಟ್ ಎದುರು ಹಾಜರುಪಡಿಸಲು ಸಿದ್ಧತೆ ಸಾಗಿದೆ. ಇಮ್ರಾನ್ ಪಾಕಿಸ್ತಾನ ರಾಜಧಾನಿಗೆ ಕಾಲಿಟ್ಟ ತಕ್ಷಣ ಹೋರಾಟಕ್ಕೆ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಬಿಗಿ ಭದ್ರತೆ ಜೊತೆಗೆ, ಪ್ರತಿಭಟನೆ ನಿಯಂತ್ರಣಕ್ಕೆ ಜನರ ಮೇಲೆ ಗುಂಡು ಹಾರಿಸಲಾಗುತ್ತಿದೆ. ಭ್ರಷ್ಟಾಚಾರದ ಬಲೆಯಲ್ಲಿ ಸಿಲುಕಿ ಇಮ್ರಾನ್ ಖಾನ್ ಜೈಲುಹಕ್ಕಿಯಾಗಿದ್ದು, ಇಮ್ರಾನ್ ಜೀವಕ್ಕೆ ಅಪಾಯ ಇದೆ ಎಂದು ಬೆಂಬಲಿಗರು ಆರೋಪಿಸುತ್ತಿದ್ದಾರೆ.

ಏನಿದು ಇಮ್ರಾನ್ ವಿರುದ್ಧದ ಕೇಸ್?

ಅಷ್ಟಕ್ಕೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಖಾನ್ ಬೆಂಬಲಿಗರು ಹೇಳುತ್ತಿರುವ ವಿಚಾರವೇ ಬೇರೆ.

ಇಮ್ರಾನ್ ರಿಲೀಸ್ ಆಗಲ್ಲ ಗ್ಯಾರಂಟಿ!

ಹೌದು, ಇಮ್ರಾನ್‌ ಖಾನ್ ಬಂಧಿಸಿದ್ದು ಸರಿಯಾಗಿದೆ ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ. ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಇಮ್ರಾನ್‌ ಬಂಧಿಸಿತ್ತು. ಅರೆಸೈನಿಕ ಪಡೆ ಯೋಧರು ಎತ್ತಾಕ್ಕೊಂಡು ಹೋಗಿದ್ದರು. ಈ ಬಗ್ಗೆ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷ ಅರ್ಜಿಯನ್ನ ಸಲ್ಲಿಸಿತ್ತು. ಬಂಧನವು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಇಮ್ರಾನ್‌ ಅವರನ್ನು ಬಿಡುಗಡೆಗೊಳಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

After violence broke in Pakistan military started for operation

ಇಮ್ರಾನ್‌ಗೆ ಜೈಲೂಟ ಗ್ಯಾರಂಟಿ

ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಅವರ ಅಭಿಮಾನಿಗಳು ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ. ಆದರೆ ಇಮ್ರಾನ್ ಅರೆಸ್ಟ್ ಆಗಿದ್ದು ಸರಿ ಎಂದು ಇಸ್ಲಾಮಾಬಾದ್ ಹೈಕೋರ್ಟ್ ಡಬಲ್ ಶಾಕ್ ಕೊಟ್ಟಿದೆ.

ಒಟ್ನಲ್ಲಿ ಪಾಕಿಸ್ತಾನ ಧಗಧಗಿಸುತ್ತಿದ್ದರೆ, ಇನ್ನೊಂದ್ಕಡೆ ಸೇನೆ & ISI ವಿರುದ್ಧ ವಿರುದ್ಧ ಜನರು ಇನ್ನಷ್ಟು ಉಗ್ರ ಹೋರಾಟ ನಡೆಸಲು ತಯಾರಿ ಆರಂಭಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದ್ದು ಪಾಕ್ ಸೇನೆಯ ಸಾಕಷ್ಟು ತುಕಡಿಗಳನ್ನ ಪಾಕ್ ರಾಜಧಾನಿಗೆ ಕರೆಸಿಕೊಳ್ಳಲಾಗಿದೆ. ಈ ಹಿಂಸಾಚಾರ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+