ವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸ

Recommended Video

      ಇಂಡೋನೇಷ್ಯಾದಲ್ಲಿ ಭೂಕಂಪ- ಸುನಾಮಿಯ ಎಚ್ಚರಿಕೆ | Oneindia Kannada

      ಜಕಾರ್ತಾ, ಸೆಪ್ಟೆಂಬರ್ 28 : ಇಂಡೋನೇಷ್ಯಾದ ಸುಲವೇಶಿಯ ಕರಾವಳಿಯ ಪಲು ಎಂಬಲ್ಲಿ 7.7 ಪ್ರಮಾಣದ ಭಾರೀ ಭೂಕಂಪವಾದ ನಂತರ, ಇಡೀ ನಗರವನ್ನೇ ಆಪೋಷನ ತೆಗೆದುಕೊಳ್ಳುವಂಥ ಸುನಾಮಿ ಅಪ್ಪಳಿಸಿದೆ.

      ಈಗಾಗಲೆ ಸುನಾಮಿಯ ಹೊಡೆತಕ್ಕೆ ಐವರು ಅಸುನೀಗಿದ್ದಾರೆ ಎಂಬ ವರದಿ ಬಂದಿದೆ. ಸುನಾಮಿಯ ಭೀಕರತೆ ನೋಡಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಆರಂಭದಲ್ಲಿ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.

      After two powerful earthquakes Tsunami devastates Indonesia

      7.5 ಮತ್ತು 7.7 ಪ್ರಮಾಣದ ಒಂದರ ಹಿಂದೆ ಒಂದು ಎರಡು ಭೂಕಂಪಗಳಾದ ನಂತರ ಸಂಭವಿಸಿದ ಸುನಾಮಿಯನ್ನು ಕೆಲವರು ವಿಡಿಯೋ ಚಿತ್ರೀಕರಣ ಮಾಡಿದ್ದು, ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಸುನಾಮಿ ಅಪ್ಪಳಿಸುತ್ತಲೇ ಮೊದಲನೇ ಮಹಡಿಯಲ್ಲಿ ನಿಂತಿದ್ದ ಜನರು ಕೂಡ ಪಾರಾಗಲು ಯತ್ನಿಸಿದ್ದಾರೆ.

      ಸುಮಾರು ಎರಡು ಮೀಟರ್ ಎತ್ತರದ ಭಾರೀ ಗಾತ್ರದ ಅಲೆಗಳು ಎಲ್ಲೆಂದರಲ್ಲಿ ನುಗ್ಗಿ ಹಾವಳಿ ಎಬ್ಬಿಸಿವೆ. ಕಡಲತೀರದ ಹತ್ತಿರದಲ್ಲಿದ್ದ ಮಸೀದಿಯೊಂದಕ್ಕೆ ಸಮುದ್ರದ ಅಲೆಗಳು ನುಗ್ಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

      ಈ ಸುನಾಮಿಯಿಂದ ಯಾರಿಗೂ ಪ್ರಾಣ ಹಾನಿ ಆಗದಿರಲಿ ಎಂದು ಹಲವಾರು ಜನರು ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಆದರೆ, ಪ್ರಕೃತಿಯೇ ಮುನಿದರೆ ಯಾರೇನು ಮಾಡಲು ಸಾಧ್ಯ? ಆದರೂ ಸಾಧ್ಯವಾದಷ್ಟು ಸುರಕ್ಷಿತವಾದ ಸ್ಥಳದಲ್ಲಿಯೇ ಇರಿ ಎಂಬ ಸಂದೇಶಗಳು ರವಾನೆಯಾಗುತ್ತಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+