ಗಡಿಯಲ್ಲಿ ಗೋಡೆ ಕಟ್ಟಿಸಿ ಭೀಕರ ಯುದ್ಧಕ್ಕೆ ಸರ್ವಾಧಿಕಾರಿ ಕಿಮ್ ಸಿದ್ಧತೆ?

ಉ.ಕೊರಿಯಾ: ಕ್ಷಿಪಣಿ ಹಾರಿಸಿದ್ದು ಆಯ್ತು, ತನ್ನಲ್ಲಿರುವ ಬಾಂಬ್ ರಾಶಿಯನ್ನು ತೋರಿಸಿ ಶತ್ರುಗಳಿಗೆ ಎಚ್ಚರಿಕೆ ಕೊಟ್ಟಿದ್ದೂ ಆಯ್ತು. ಆದ್ರೆ ಸೇನಾ ಉಪಗ್ರಹ ಉಡಾಯಿಸಲು ಹೋಗಿ ಕೈಸುಟ್ಟುಕೊಂಡ ಸರ್ವಾಧಿಕಾರಿ ಈಗ ಏನ್ಮಾಡ್ತಿದ್ದಾನೆ? ಕಿಮ್ ಜಾಂಗ್ ಉನ್ ಮಂದೆ ತನ್ನ ಶತ್ರು ಪಡೆಗೆ ಹೇಗೆ ವಾರ್ನಿಂಗ್ ಕೊಡ್ತಾನೆ? ಅನ್ನೋ ಪ್ರಶ್ನೆ ಎದ್ದಿರುವಾಗಲೇ ಶಾಕ್ ಸಿಕ್ಕಿದೆ.

ಅಂದಹಾಗೆ ಕಿಮ್ ಜಾಂಗ್ ಉನ್ ಸುಮ್ಮನೆ ಕೂರುವ ಸರ್ವಾಧಿಕಾರಿ ಅಲ್ಲ. ಅಕಸ್ಮಾತ್ ಆ ವ್ಯಕ್ತಿ ಸುಮ್ಮನೆ ಕೂತಿದ್ರೆ, ಆತನನ್ನ ಸರ್ವಾಧಿಕಾರಿ ಅಂತಾ ಕರೆಯಲು ಆಗುತ್ತಾ ಇರಲಿಲ್ಲ. ಏನಾದರೂ ಕಿತಾಪತಿ ಮಾಡುತ್ತಾ, ಶತ್ರುಗಳ ವಿರುದ್ಧ ಕಾಲು ಕೆರೆದು ಜಗಳಕ್ಕೆ ನಿಲ್ಲುವುದು ಈತನ ಬ್ಯುಸಿನೆಸ್. ಹೀಗಾಗಿಯೇ ಮತ್ತೊಂದು ಖತರ್ನಾಕ್ ಪ್ಲ್ಯಾಣ್ ಮಾಡಿ ಉ.ಕೊರಿಯಾ ಸುತ್ತಲೂ ಬಲವಾದ ಗೋಡೆ ಕಟ್ಟಿ ಅಮೆರಿಕ ನಾಯಕರಿಗೆ ಶಾಕ್ ನೀಡಿದ್ದಾನೆ. ಆ ಗೋಡೆ ಕಟ್ಟಿ ಯುದ್ಧಕ್ಕೆ ಕಿಮ್ ಸಜ್ಜಾಗಿದ್ದಾನಾ? ಅನ್ನೋ ಭೀತಿ ಮೂಡಿಸಿದ್ದಾನೆ (North Korea).

After satellite launch fail Kim is on trend by his border wall

ದಕ್ಷಿಣ ಕೊರಿಯಾ ಟಾರ್ಗೆಟ್?

ಉತ್ತರ ಕೊರಿಯಾ ಎಂತಹ ದೇಶ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಅದರಲ್ಲೂ ಈ ದೇಶದಲ್ಲಿ ಬದುಕುವ ಪ್ರಜೆಗಳು ಅಕ್ಷರಶಃ ಕೈದಿಗಳ ರೀತಿ ಜೀವನ ನಡೆಸಬೇಕು. ಅಕಸ್ಮಾತ್ ಉತ್ತರ ಕೊರಿಯಾದ ಕ್ರೂರಿ, ಮನುಷ್ಯತ್ವ ಇಲ್ಲದ ಸರ್ವಾಧಿಕಾರಿ ವಿರುದ್ಧ ಮಾತನಾಡಿದ್ದೇ ಆದರೆ ಕಥೆ ಮುಗಿಯಿತು. ವಿರೋಧಿಗಳನ್ನು ಕ್ಷಣದಲ್ಲೇ ಕೊಲೆ ಮಾಡಿಸುವ ರಾಕ್ಷಸ ಈತ. ಇಂತಿಪ್ಪ ಕಿಮ್ ಜಾಂಗ್ ಉನ್ ವಿರುದ್ಧ ನೂರಾರು ಆರೋಪಗಳಿವೆ. ಹೀಗಿದ್ದಾಗ ತನ್ನದೇ ದೇಶದ ಪ್ರಜೆಗಳು ಬೇರೆ ದೇಶಕ್ಕೆ ಓಡಿ ಹೋಗಬಾರದು ಅಂತಾ ಗೋಡೆಯನ್ನೇ ಕಟ್ಟಿಸಿದ್ದಾನೆ ಈ ಭೂಪ!

ಶತ್ರುಗಳಿಂದಲೂ ಗೋಡೆಯ ರಕ್ಷಣೆ!

ಮೊದಲೇ ಹೇಳಿದಂತೆ ಉತ್ತರ ಕೊರಿಯಾ ಅನ್ನೋ ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಉತ್ತರ ಕೊರಿಯಾದ ಜನ ಸದಾ ಪ್ರಯತ್ನಿಸುತ್ತಾರೆ. ಆದರೆ ಅದನ್ನ ತಡೆಯಲು ಈ ಕಿಮ್ ಜಾಂಗ್ ಉನ್‌ನ ಇಡೀ ಕುಟುಂಬ ಪ್ರಯತ್ನ ಮಾಡುತ್ತಲೇ ಬಂದಿದೆ. ಹಿಂದೆಯೂ ಕಿಮ್‌ನ ಅಪ್ಪ ಮತ್ತು ತಾತ ಉತ್ತರ ಕೊರಿಯಾ ಆಳಿದ್ದಾಗ ತಮ್ಮ ದೇಶದ ಜನರನ್ನ ಬಲಿ ಹಾಕುತ್ತಾ ಬಂದಿದ್ದರು. ಹೀಗಾಗಿ ನರಕದಿಂದ ತಪ್ಪಿಸಿಕೊಂಡು ಹೋಗಲು ಅನೇಕರು ಪ್ರಯತ್ನಪಟ್ಟು ಅದರಲ್ಲಿ ಸಕ್ಸಸ್ ಕೂಡ ಕಂಡರು. ಇದೀಗ ಅದಕ್ಕೆಲ್ಲಾ ಅಡ್ಡಿಯಾಗಿ ಗೋಡೆ ಕಟ್ಟಿಸಿದ್ದಾನೆ ಈತ. ಅಲ್ಲದೆ ಶತ್ರುಗಳಿಂದಲೂ ರಕ್ಷಣೆಗೆ ಪ್ಲ್ಯಾನ್ ಇದರ ಹಿಂದೆ ಇದೆ.

ಯುದ್ಧಕ್ಕೆ ಸಿದ್ಧತೆ ನಡೆಸಿದ್ದಾನಾ?

ಉತ್ತರ ಕೊರಿಯಾ ಪಕ್ಕದಲ್ಲೇ ಅದರ ಶತ್ರು ರಾಷ್ಟ್ರಗಳಾದ ದಕ್ಷಿಣ ಕೊರಿಯಾ & ಜಪಾನ್ ದೇಶಗಳಿವೆ. ಹೀಗಾಗಿ ಇವರಿಬ್ಬರಿಗೂ ಪಾಠ ಕಲಿಸಬೇಕು, ತನ್ನ ದೇಶದ ಪ್ರಜೆಗಳು ಉತ್ತರ ಕೊರಿಯಾ ಬಿಟ್ಟು ಹೋಗಬಾರದು ಎಂಬ ಉದ್ದೇಶದಿಂದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಂತಹ ಖತರ್ನಾಕ್ ಐಡಿಯಾ ಮಾಡುತ್ತಿದ್ದಾನೆ. ಉತ್ತರ ಕೊರಿಯಾ ಸುತ್ತಲೂ ಈ ರೀತಿ ಗೋಡೆ ಕಟ್ಟಿಸಿದರೆ ಶತ್ರು ದೇಶದಿಂದಲೂ ರಕ್ಷಣೆ ಪಡೆಯಬಹುದು ಅನ್ನೋದು ಈತನ ಐಡಿಯಾ. ಆದರೆ ಇದಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಅಲ್ಲದೆ ಯುದ್ಧಕ್ಕೆ ಕಿಮ್ ಜಾಂಗ್ ಉನ್ ಸಿದ್ಧನಾಗಿದ್ದಾನಾ? ಅನ್ನೋ ಅನುಮಾನ ಕೂಡ ಮೂಡಿದೆ.

After satellite launch fail Kim is on trend by his border wall

ಒಟ್ನಲ್ಲಿ ಅಲ್ಲಿ ಅವನದ್ದೇ ರೂಲ್ಸ್.. ಅವನು ಹೇಳಿದ ಮಾತೇ ಫೈನಲ್.. ಹೆಚ್ಚು ಕಮ್ಮಿ ಮಾತನಾಡಿದ್ರೆ ಹೆಣ ಕೂಡ ಸಿಗಲ್ಲ. ಮಹಾಶಯ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾಗೆ ಸರ್ವಾಧಿಕಾರಿ ಆಗಿ ಬಂದ ನಂತರ ಜಪಾನ್, ಅಮೆರಿಕ ಹಾಗೂ ತನ್ನ ಪರಮ ಶತ್ರು ದಕ್ಷಿಣ ಕೊರಿಯಾ ವಿರುದ್ಧ ಕೆಂಡ ಕಾರುತ್ತಿದ್ದಾನೆ. ಈ ರೀತಿ ತನ್ನ ಎಲ್ಲಾ ಶತ್ರು ರಾಷ್ಟ್ರಗಳ ಮೇಲೆ ಬಾಹ್ಯಾಕಾಶದಿಂದ ಕಣ್ಣು ಇಡಲು ಉಪಗ್ರಹ ಉಡಾವಣೆಗೆ ಸಜ್ಜಾಗಿದ್ದ, ಆದರೆ ಆ ಉಪಗ್ರಹ ಸಮುದ್ರಕ್ಕೆ ಬಿದ್ದು ನೀರಲ್ಲಿ ಹೋಮ ಮಾಡಿಸಿದಂತೆ ಆಗಿದೆ. ಇದೇ ಕಾರಣಕ್ಕೆ ಗೋಡೆಯ ಮೂಲಕ ಸೇಡು ತೀರಿಸಿಕೊಳ್ಳಲು ಈತ ಸಜ್ಜಾದಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+