Israel: ಇಸ್ರೇಲ್ & ಲೆಬನಾನ್ ಜಗಳ ಜೋರು, ಮಧ್ಯಪ್ರಾಚ್ಯ ನೆಮ್ಮದಿ ಹಾಳು!
ಇಸ್ರೇಲ್ & ಲೆಬನಾನ್ ನಡುವೆ ಶಾಂತಿ ಮಾತುಕತೆ ಬಳಿಕ ಒಂದಷ್ಟು ನೆಮ್ಮದಿ ಮೂಡಿತ್ತು. ಈ ಮೂಲಕ ಇನ್ನೇನು ಮಧ್ಯಪ್ರಾಚ್ಯ ನೆಮ್ಮದಿಯಾಗಿ ಜೀವನ ಮಾಡಲಿದೆ ಬಿಡು ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಹೀಗಿದ್ದಾಗಲೇ ಲೆಬನಾನ್ ನೆಲದಲ್ಲಿ ನಿಂತು ಹಿಜ್ಬುಲ್ಲಾ ಮತ್ತೆ ದಾಳಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಬೆನ್ನಲ್ಲೇ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೆ ಸಂಚಲನ ಸೃಷ್ಟಿಯಾಗಿದೆ. ಅಲ್ಲದೆ ಮತ್ತೆ ಹಿಂಸಾಚಾರದ ಬೆಂಕಿ ಹೊತ್ತಿಕೊಂಡಿದೆ.
2023ರ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಗಾಜಾ & ಇಸ್ರೇಲ್ ನಡುವಿನ ಫೈಟಿಂಗ್ ಮುಂದೆ ಮಧ್ಯಪ್ರಾಚ್ಯ ಭಾಗದ ನೆಮ್ಮದಿ ಕೆಡುವಂತೆ ಮಾಡಿತ್ತು. ಗಾಜಾ & ಇಸ್ರೇಲ್ ನಡುವೆ ಯುದ್ಧವು ಆರಂಭವಾದ ನಂತರ ಲೆಬನಾನ್ ಹಾಗೂ ಸಿರಿಯಾ ಜೊತೆಯಲ್ಲೂ ಇಸ್ರೇಲ್ ಕಿರಿಕ್ ಮಾಡಿ ಬಡಿದಾಡುವಂತೆ ಮಾಡಿತ್ತು. ಮತ್ತೊಂದು ಕಡೆ ಇನ್ನೇನು ಮತ್ತೊಂದು ಮಹಾಯುದ್ಧ ಈ ಜಾಗದಿಂದಲೇ ಆರಂಭ ಆಗುವುದು ಬಹುತೇಕ ಗ್ಯಾರಂಟಿ ಅನ್ನುವಾಗಲೇ....

ಯುದ್ಧ ಭೀತಿ ಮತ್ತಷ್ಟು ಹೆಚ್ಚು!
ಹೌದು, ಇಸ್ರೇಲ್ & ಲೆಬನಾನ್ ನಡುವೆ ಶಾಂತಿ ಮಾತುಕತೆ ಬಳಿಕ ಮಧ್ಯಪ್ರಾಚ್ಯ ಭಾಗದಲ್ಲಿ ನೆಮ್ಮದಿ ಮೂಡಲಿದೆ ಎಂಬ ನಿರೀಕ್ಷೆ ಮೂಡಿತ್ತು. ಯಾಕಂದ್ರೆ ಇಸ್ರೇಲ್ & ಲೆಬನಾನ್ ಯುದ್ಧ ನಿಲ್ಲಿಸಿ ನೆಮ್ಮದಿಯಾಗಿ ಇರಲು ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಮತ್ತೆ ಇಸ್ರೇಲ್ ವಿರುದ್ಧ ದಾಳಿ ಮಾಡಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪದ ಬೆನ್ನಲ್ಲೇ ಯುದ್ಧ ಭೀತಿ ಮತ್ತಷ್ಟು ಹೆಚ್ಚಾಗಿದೆ.
ಗಾಜಾ ಮೇಲೆ ಇಸ್ರೇಲ್ ದಾಳಿ ತೀವ್ರ?
ಇಸ್ರೇಲ್ & ಲೆಬನಾನ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ, ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ತನ್ನ ದಾಳಿಯನ್ನ ತೀವ್ರಗೊಳಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅಲ್ಲಿ ಅಂದ್ರೆ ಗಾಜಾ ಪಟ್ಟಿ ಭಾಗದಲ್ಲಿ ಮತ್ತಷ್ಟು ನೆಮ್ಮದಿ ಹಾಳಾಗಿ ಹೋಗಿದ್ದು, ಸಾಮಾನ್ಯ ಜನ ಕೂಡ ಈ ಬೆಳವಣಿಗೆ ಕಂಡು ನರಳುವಂತೆ ಆಗಿದೆ. ಮತ್ತೊಂದು ಕಡೆ ಇಸ್ರೇಲ್ ತನ್ನ ಬಳಿ ಇರುವ ವಿನಾಶಕಾರಿ ಅಸ್ತ್ರ ಬಳಸಿಕೊಂಡು ತೀವ್ರ ದಾಳಿ ನಡೆಸುವ ಭಯ ಕೂಡ ಆವರಿಸಿದೆ.
ಒಟ್ನಲ್ಲಿ ಇದೆಲ್ಲವನ್ನೂ ಬಿಟ್ಟು ನೆಮ್ಮದಿಯಾಗಿ ಇರುವುದನ್ನ ಮೊದಲು ಮಧ್ಯಪ್ರಾಚ್ಯ ಜನ & ಅಲ್ಲಿನ ನಾಯಕರು ಕಲಿಯಬೇಕು ಎಂಬುದು ಇಡೀ ಜಗತ್ತಿನ ಒಕ್ಕೊರಲ ಮನವಿ. ಹೀಗೆ ಬಡಿದಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯ ಯುದ್ಧದ ಬೆಂಕಿಗೆ ಬಲಿಯಾಗಿ ಹೋಗುವುದು ಗ್ಯಾರಂಟಿ ಎಂಬ ಆರೋಪವು ಕೂಡ ಕೇಳಿ ಬರುತ್ತಿದೆ.












Click it and Unblock the Notifications